ನವದೆಹಲಿ: ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.


COMMERCIAL BREAK
SCROLL TO CONTINUE READING

ಪೆಟ್ರೋಲ್-ಡೀಸೆಲ್ ಬೆಲೆ ದಾಖಲೆಯ ಮಟ್ಟ ತಲುಪಿದ ನಂತರ, ತೈಲ ಕಂಪನಿಗಳು ಗ್ರಾಹಕರಿಗೆ ನಿರಂತರವಾಗಿ ಪರಿಹಾರ ನೀಡುತ್ತಿವೆ. ಅಕ್ಟೋಬರ್ ಆರಂಭದಿಂದ ಪೆಟ್ರೋಲ್ ದರ ಲೀಟರ್‌ಗೆ 1 ರೂಪಾಯಿಗಿಂತಲೂ ಕಡಿಮೆಯಾಗಿದೆ. 


ಮಂಗಳವಾರವಷ್ಟೇ ಇಳಿಕೆ ಕಂಡಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ಬುಧವಾರ ಯಾವ ಬದಲಾವಣೆಯೂ ಆಗಿರಲಿಲ್ಲ. ಇಂದು ಪರಿಷ್ಕರಿಸಲಾದ ದರದಲ್ಲಿಯೂ ಸ್ಥಿರತೆ ಕಂಡುಬಂದಿದೆ.


ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ದೆಹಲಿಯಲ್ಲಿ ಬುಧವಾರ ಬೆಳಿಗ್ಗೆ ಪೆಟ್ರೋಲ್ ಪ್ರತಿ ಲೀಟರ್‌ಗೆ 73.22 ರೂ. ಡೀಸೆಲ್ ಅನ್ನು ಲೀಟರ್‌ಗೆ 66.11 ರೂ.ಗೆ ಮಾರಾಟ ಮಾಡಲಾಗುತ್ತಿದೆ. 


ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 75.66 ರೂ. ಮತ್ತು ಡೀಸೆಲ್ ಬೆಲೆ 68.31 ರೂ. ಆಗಿದೆ.


ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ


ನಗರಗಳು

ಪೆಟ್ರೋಲ್ 


(ರೂ./ಲೀ)

ಡೀಸೆಲ್


(ರೂ./ಲೀ)

ದೆಹಲಿ 73.22 67.11
ಕೊಲ್ಕತ್ತಾ 75.87 68.47
ಮುಂಬೈ 78.83 69.29
ಚೆನ್ನೈ 76.04 69.83
ಬೆಂಗಳೂರು 75.66 68.31
ಹೈದರಾಬಾದ್ 77.86 72.09
ತಿರುವನಂತಪುರಂ 76.57 71.10

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 


https://www.iocl.com/TotalProductList.aspx