ಪಾಟ್ನಾ/ನವದೆಹಲಿ: ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಬೇಸತ್ತಿರುವ ಜನರಿಗೆ ಕೇಂದ್ರ ಪೆಟ್ರೋಲಿಯಂ ಸಚಿವರ ಈ ಹೇಳಿಕೆ ಸಂತಸ ನೀಡಲಿದೆ. ಮಂಗಳವಾರ ಕಾರ್ಯಕ್ರಮವೊಂದಕ್ಕೆ ಹಾಜರಾಗಲು ಪಾಟ್ನಾಕ್ಕೆ ಆಗಮಿಸಿದ್ದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗುವ ಸೂಚನೆ ನೀಡಿದ್ದಾರೆ. ಜಾಗತಿಕ ಕಚ್ಚಾ ತೈಲದ ಬೆಲೆಯೊಂದಿಗಿನ ಸಮನ್ವಯದಲ್ಲಿ ಪೆಟ್ರೋಲಿಯಂ  ಬೆಲೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.


COMMERCIAL BREAK
SCROLL TO CONTINUE READING

ಭಾರತದ ಗ್ರಾಹಕರ ಹಿತಾಸಕ್ತಿ
ತೈಲ ಉತ್ಪಾದನಾ ರಾಷ್ಟ್ರಗಳ OPEC ಸಂಸ್ಥೆಗಳ ಸಭೆಯಲ್ಲಿ ಇತ್ತೀಚೆಗೆ ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ 20-25 ವರ್ಷಗಳಲ್ಲಿ ಭಾರತವು ದೊಡ್ಡ ಶಕ್ತಿಯ ಮಾರುಕಟ್ಟೆಯಾಗಿದೆ. ಈ ಸಂದರ್ಭದಲ್ಲಿ, ನೀವು ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ನೋಡಿಕೊಳ್ಳಬೇಕು ಎಂದು ಒಪೆಕ್ ದೇಶಗಳ ಮುಂದೆ ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಸಚಿವ ಪ್ರಧಾನ್ ತಿಳಿಸಿದರು. 


ತೈಲ ಮಾರುಕಟ್ಟೆ ಜುಲೈ 1 ರಿಂದ ಆರಂಭವಾಗಲಿದೆ. ದರವನ್ನು ಮೃದುಗೊಳಿಸುವ ನಿರೀಕ್ಷೆಯಿದೆ. ಕಳೆದ ಕೆಲವು ದಿನಗಳಲ್ಲಿ ಪೆಟ್ರೋಲ್ ದರವನ್ನು ಎರಡೂವರೆ ರೂಪಾಯಿ ಮತ್ತು ಡೀಸೆಲ್ ದರವನ್ನು ಎರಡು ರೂಪಾಯಿ ಕಡಿಮೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.