ನವ ದೆಹಲಿ: ಇನ್ನು ಮುಂದೆ ನೀವು ಪೆಟ್ರೋಲ್-ಡೀಸೆಲ್ ಅನ್ನು ಸಹ ಪಿಜ್ಜ್ಹಾ-ಬರ್ಗರ್ ನಂತೆಯೇ ಮನೆಯಲ್ಲೇ ಕುಳಿತು ಆರ್ಡರ್ ಮಾಡಬಹುದು. ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಈ ಕುರಿತಂತೆ ಇಂಡಿಯಾ ಮೊಬೈಲ್ ಕಾಂಗ್ರೇಸ್ನಲ್ಲಿ ಬುಧವಾರ ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆಯೇ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಲು ಯೋಜಿಸಿದೆ, ಆದರೆ ಭದ್ರತಾ ಸಮಸ್ಯೆಗಳನ್ನು ಪರಿಗಣಿಸಿ ಅದನ್ನು ಮುಂದೂಡಲಾಗಿದೆ ಅವರು ಇದೇ ಸಂದರ್ಭದಲ್ಲಿ ಹೇಳಿದರು.


COMMERCIAL BREAK
SCROLL TO CONTINUE READING

ಇ-ವಾಣಿಜ್ಯ ವೆಬ್ಸೈಟ್ಗಳಲ್ಲಿ ಶೀಘ್ರದಲ್ಲೇ ಪೆಟ್ರೋಲಿಯಂ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಯೋಜನೆವೊಂದರಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಧಾನ್ ಹೇಳಿದರು. ಈ ಸಂಬಂಧವಾಗಿ ಕಂಪನಿಗಳ ಜೊತೆ ಈಗಾಗಲೇ ಮಾತುಕತೆ ನಡೆದಿದೆ ಎಂದು ಅವರು ತಿಳಿಸಿದರು.


ಮೊಬೈಲ್ ಕಂಪನಿಗಳ ಸ್ಪರ್ಧೆಯಿಂದಾಗಿ ಕರೆ ದರಗಳು ಕಡಿಮೆಯಾದಂತೆ, ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಸ್ಪರ್ಧೆ ಹೆಚ್ಚಾಗಬೇಕು, ಇದರಿಂದ ಗ್ರಾಹಕರು ಲಾಭ ಪಡೆಯಬಹುದು ಎಂದು ಸಚಿವರು ತಿಳಿಸಿದರು. 


40 ದಶಲಕ್ಷ ಗ್ರಾಹಕರು ಪ್ರತಿನಿತ್ಯ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುತ್ತಾರೆ. ಒಂದು ವೇಳೆ ಮೊಬೈಲ್ ಕಂಪನಿಗಳು ಈ ವ್ಯವಹಾರದಲ್ಲಿ ಆಸಕ್ತಿ ತೋರಿದರೆ ಅವರ ಲಾಭ ಹೆಚ್ಚಾಗುತ್ತದೆ ಎಂದು ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.