ನವದೆಹಲಿ : ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಚಂದಾದಾರರು (NPS) ಟ್ರಸ್ಟ್ ತಮ್ಮ ಉದ್ದೇಶಿತ ಪ್ರತ್ಯೇಕಗೆ ಸಿದ್ಧವಾಗಿವೆ ಮತ್ತು ಪ್ರತ್ಯೇಕತೆಯ ನಂತರ ಅವರ ಕೆಲಸದ ಕ್ಷೇತ್ರಗಳ ಕುರಿತು ಚರ್ಚಿಸಿದ್ದಾರೆ. ಮಾಹಿತಿ ನೀಡುತ್ತಾ, ಉನ್ನತ ಅಧಿಕಾರಿಯೊಬ್ಬರು ಪಿಎಫ್‌ಆರ್‌ಡಿಎ ಕಾಯ್ದೆಯಲ್ಲಿನ ತಿದ್ದುಪಡಿಯನ್ನು ಸಂಸತ್ತು ಈ ವಿಷಯದಲ್ಲಿ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದೆ ಎಂದು ಹೇಳಿದರು. ಪ್ರಸ್ತುತ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕಾನೂನನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಅಂಗೀಕರಿಸಬಹುದು ಎಂದು ನಿರೀಕ್ಷಿಸಲಾಗಿದೆ.


COMMERCIAL BREAK
SCROLL TO CONTINUE READING

PFRDA ಕಾಯ್ದೆಗೆ ತಿದ್ದುಪಡಿ ತರಲಾಗುವುದು!


ಪಿಎಫ್‌ಆರ್‌ಡಿಎ(PFRDA) ಅಧ್ಯಕ್ಷ ಸುಪ್ರತಿಮ್ ಬಾಂಡ್ಯೊಪಾಧ್ಯಾಯ ಅವರು ಪಿಎಫ್‌ಆರ್‌ಡಿಎ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವುದು ಪ್ರತ್ಯೇಕತೆಗೆ ಅಗತ್ಯ ಎಂದು ಹೇಳಿದರು.  ಸುಮಾರು 14-15 ಜನರನ್ನು ನೇಮಿಸಿಕೊಂಡಿದ್ದಾರೆ ಮತ್ತು ಮುಂದಿನ ಕೆಲವು ತಿಂಗಳಲ್ಲಿ ಅವರು ಇನ್ನೂ ಐವರನ್ನು ನೇಮಿಸಿಕೊಳ್ಳುತ್ತಾರೆ. ಈ ರೀತಿಯಾಗಿ ಒಟ್ಟು ಉದ್ಯೋಗಿಗಳ ಸಂಖ್ಯೆ 20 ಕ್ಕೆ ಏರಿಕೆ ಆಗಲಿದೆ ಎಂದು ಹೇಳಿದರು,' ನಾವು ಪ್ರತ್ಯೇಕ NPS ಟ್ರಸ್ಟ್ ರಚನೆಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : Bumper Offer! LPG ಬುಕಿಂಗ್ ಮೇಲೆ ಪಡೆಯಿರಿ 2700 ರೂಪಾಯಿಗಳ ಲಾಭ ..!


ನಿರ್ಮಲಾ ಸೀತಾರಾಮನ್ ಘೋಷಿಸಿದ್ದು ಏನು?


ಮೊದಲು NPS ಟ್ರಸ್ಟ್ PFRDA ಕಟ್ಟಡದಲ್ಲಿತ್ತು, ಆದರೆ ಈಗ ಅದನ್ನು ಇನ್ನೊಂದು ಕಟ್ಟಡ(Building)ಕ್ಕೆ ಸ್ಥಳಾಂತರಿಸಲಾಗಿದೆ. ಕೆಲವು ತಿಂಗಳ ಹಿಂದೆ ಅದಕ್ಕೆ ಹೊಸ ಸಿಇಒ ಸಿಕ್ಕಿದ್ದಾರೆ ಮತ್ತು ಪ್ರತ್ಯೇಕತೆಗೆ ಸಂಬಂಧಿಸಿದ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಬಂದ್ಯೋಪಾಧ್ಯಾಯ ಹೇಳಿದರು. 


ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಗ್ರಾಹಕರ ವಿಶಾಲ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು NPS ಟ್ರಸ್ಟ್ ಅನ್ನು PFRDA ಯಿಂದ ಬೇರ್ಪಡಿಸುವುದಾಗಿ ಘೋಷಿಸಿದ್ದರು. NPS ಅಡಿಯಲ್ಲಿ ಸ್ವತ್ತುಗಳು ಮತ್ತು ನಿಧಿಗಳ ನಿರ್ವಹಣೆಗಾಗಿ ಟ್ರಸ್ಟ್ ಅನ್ನು ಪಿಎಫ್‌ಆರ್‌ಡಿಎ ಸ್ಥಾಪಿಸಿದೆ. ಇವೆರಡನ್ನು ಬೇರ್ಪಡಿಸುವ ಪ್ರಸ್ತಾಪವು ಕಳೆದ ಕೆಲವು ವರ್ಷಗಳಿಂದ ಪರಿಗಣನೆಯಲ್ಲಿದೆ.


ಇದನ್ನೂ ಓದಿ : SBI ಗ್ರಾಹಕರೇ ಗಮನಿಸಿ ಆಗಸ್ಟ್ 6 ಮತ್ತು 7 ಕ್ಕೆ ಸ್ಥಗಿತಗೊಳ್ಳಲಿವೆ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ..! ವಹಿವಾಟಿಗೂ ಮುನ್ನ ತಿಳಿದುಕೊಳ್ಳಿ ಸಮಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ