ನವದೆಹಲಿ : ಇತ್ತೀಚಿನ ದಿನಗಳಲ್ಲಿ 2,000 ರೂ.ಗಳ ನೋಟುಗಳು ಬಹಳ ವಿರಳವಾಗಿ ಕಂಡು ಬರ್ತಿವೆ. ಇನ್ನು ಬ್ಯಾಂಕುಗಳು ಮತ್ತು ಎಟಿಎಂಗಳಿಂದ ಅತಿ ಹೆಚ್ಚು 500 ರೂ. ನೋಟುಗಳು ಚಲಾವಣೆಯಲ್ಲಿವೆ. ಇತ್ತೀಚಿನ ದಿನಗಳಲ್ಲಿ 500 ರೂಪಾಯಿ ನೋಟಿನ ಬಗ್ಗೆ ಒಂದು ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅದರಲ್ಲಿ 500 ರೂಪಾಯಿ ನೋಟನ್ನ ತೆಗೆದುಕೊಳ್ಳಬಾರದು. ಯಾಕಂದ್ರೆ, ಅದರಲ್ಲಿ ಹಸಿರು ಪಟ್ಟಿ ಆರ್ ಬಿಐ ಗವರ್ನರ್ ಅವರ ಸಹಿಯ ಬಳಿಯಿಲ್ಲ. ಬದಲಾಗಿ ಗಾಂಧೀಜಿ ಚಿತ್ರದ ಬಳಿಯಿದೆ ಎಂದು ಹೇಳಲಾಗ್ತಿದೆ.


COMMERCIAL BREAK
SCROLL TO CONTINUE READING

ಪಿಐಬಿ ಫ್ಯಾಕ್ಟ್ ಚೆಕ್(PIB Fact Check) ಈ ಸುದ್ದಿಯ ಬಗ್ಗೆ ತನಿಖೆ ನಡೆಸಿದಾಗ ಈ ಸುದ್ದಿ ನಕಲಿ ಎಂದು ತಿಳಿದುಬಂದಿದೆ. ಆರ್ ಬಿಐ ಪ್ರಕಾರ, ಎರಡೂ ನೋಟುಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಎರಡೂ ನೋಟುಗಳು ಮಾನ್ಯವಾಗಿವೆ. ಪಿಐಬಿ ಫ್ಯಾಕ್ಟ್ ಚೆಕ್ ಈ ಕ್ಲೇಮ್ʼನ್ನ ನಕಲಿ ಎಂದು ಕರೆದಿದೆ. ಆದ್ದರಿಂದ ಮೇಲೆ ಹೇಳಿದಂತೆ ನೀವು ಈ 500 ರೂಪಾಯಿ ನೋಟನ್ನ ಹೊಂದಿದ್ರೆ, ಭಯಪಡುವ ಅಗತ್ಯವಿಲ್ಲ.


ಇದನ್ನೂ ಓದಿ : EPFO ALERT : PF ಗ್ರಾಹಕರಿಗೊಂದು ಮಾಹಿತಿ : ಈ ಬ್ಯಾಂಕ್‌ಗಳಲ್ಲಿ ನಿಮ್ಮ ಖಾತೆಯಿದ್ದರೇ ಈ ಕೂಡಲೇ ಈ ಕೆಲಸ ಮಾಡಿ


5, 10 ಮತ್ತು 100 ರ ಹಳೆಯ ನೋಟುಗಳನ್ನ ನಿಲ್ಲಿಸಲಾಗುವುದು :


Old Notes)ಗಳನ್ನು ನಿಲ್ಲಿಸಲಾಗುವುದು ಎಂದು ಹೇಳಲಾಗಿತ್ತು. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗ್ತಿದ್ದಂತೆ, ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿತು. ಅದರಲ್ಲಿ ಆರ್ ಬಿಐ ಅಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಹೇಳಲಾಯಿತು. 5, 10 ಮತ್ತು 100 ರ ಹಳೆಯ ನೋಟುಗಳನ್ನ ನಿಲ್ಲಿಸುವ ಸುದ್ದಿ ಸಂಪೂರ್ಣ ನಕಲಿಯಾಗಿದೆ. ಅದ್ರಂತೆ, ಹೊಸ ಮತ್ತು ಹಳೆಯ ನೋಟುಗಳು ಚಲಾವಣೆಯಲ್ಲಿ ಉಳಿಯುತ್ತವೆ.


ಇದನ್ನೂ ಓದಿ : Delta Plus Update: 12 ರಾಜ್ಯಗಳಲ್ಲಿ Delta Plus ರೂಪಾಂತರಿಯ 51 ಪ್ರಕರಣಗಳು, 8 ರಾಜ್ಯಗಳಿಗೆ ಪ್ರತ್ಯೇಕ ನಿರ್ದೇಶನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.