Complaint to ED: ಕೋವಿಡ್ ನಿರ್ವಹಣೆ ನಡುವೆ ಸಿಎಂ ಬಿಎಸ್‌ವೈಗೆ ಎದುರಾಗಿದೆ ಮತ್ತೊಂದು ಸಂಕಷ್ಟ!

ಅಕ್ರಮ ಹಣ ವರ್ಗಾವಣೆ, ಅಧಿಕಾರು ದುರುಪಯೋಗ ಆರೋಪ

Last Updated : Jun 15, 2021, 03:38 PM IST
  • ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ
  • ಅಕ್ರಮ ಹಣ ವರ್ಗಾವಣೆ, ಅಧಿಕಾರು ದುರುಪಯೋಗ ಆರೋಪ
  • ಸಿಎಂ ಬಿಎಸ್‌ವೈ, ವಿಜಯೇಂದ್ರ ಸೇರಿ 6 ಜನರ ವಿರುದ್ಧ EDಗೆ ದೂರು
Complaint to ED: ಕೋವಿಡ್ ನಿರ್ವಹಣೆ ನಡುವೆ ಸಿಎಂ ಬಿಎಸ್‌ವೈಗೆ ಎದುರಾಗಿದೆ ಮತ್ತೊಂದು ಸಂಕಷ್ಟ! title=

ಬೆಂಗಳೂರು : ಸಿಎಂ ಬದಲಾವಣೆ ಚರ್ಚೆ, ಪಕ್ಷದೊಳಗಿನ ಬಿಕ್ಕಟ್ಟು, ಕೋವಿಡ್ ನಿರ್ವಹಣೆ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ, ಅಧಿಕಾರು ದುರುಪಯೋಗ ಆರೋಪಕ್ಕೆ ಸಂಬಂಧಿಸಿ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಸೇರಿ ಆರು ಜನರ ವಿರುದ್ಧ ಜಾರಿ ನಿರ್ದೇಶನಾಲಯ (ED)ಗೆ ದೂರು ನೀಡಲಾಗಿದೆ.

ಟಿ.ಜೆ.ಅಬ್ರಾಹಂ ಎನ್ನುವವರು ದೂರು ನೀಡಿದ್ದು, ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಬಿಎಸ್‌ವೈ(BS Yediyurappa) ಅವರು ನಾಲ್ಕನೇ ಬಾರಿ ಸಿಎಂ ಆದ ಬಳಿಕ ಅವರ ಮೊಮ್ಮಗ ಶಶಿಧರ ಮರಡಿ ಎಂಬರು ಚಂದ್ರಕಾಂತ್ ರಾಮಲಿಂಗಂ ಎಂಬ ಡೆವಲಪರ್ ರಿಂದ ಬ್ಲಿಲ್ ಕ್ಲಿಯರಿಂಗ್ ಗಾಗಿ 12 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಹಣ ವರ್ಗಾವಣೆ ಬಗ್ಗೆ ಶಶಿಧರ ಮರಡಿ ಮತ್ತು ಚಂದ್ರಕಾಂತ್ ಅವರ ನಡುವೆ ನಡೆದ ವಾಟ್ಸಪ್ ಚಾಟ್ ನ ಮಾಹಿತಿಯನನ್ನು ದೂರುದಾರ ಇಡಿಗೆ ನೀಡಿದ್ದಾರೆ.

ಇದನ್ನೂ ಓದಿ : Karnataka Unlock : ರಾಜ್ಯದಲ್ಲಿ ಜೂ. 21 ರಿಂದ ಅನ್ ಲಾಕ್ ಫಿಕ್ಸ್ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ(BY Vijayendra), ಶಶಿಧರ್ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ್ ರಾಮಲಿಂಗಂ ಮತ್ತು ವಿರೂಪಾಕ್ಷಪ್ಪ ಯಮಕನಮರಡಿ ಎಂಬವರ ವಿರುದ್ಧ ದೂರು ನೀಡಲಾಗಿದೆ.

ಇದನ್ನೂ ಓದಿ : 'ದ್ವಿತೀಯ PUC' ವಿದ್ಯಾರ್ಥಿಗಳ ಗಮನಕ್ಕೆ : ಇಂದಿನಿಂದ CET-2021 ಪರೀಕ್ಷೆಗೆ ಅರ್ಜಿ ಆರಂಭ

ಅಧಿಕಾರ ಉಳಿಸಿಕೊಳ್ಳುವ ಸಂಕಷ್ಟದಲ್ಲಿರುವ ಸಿಎಂ ಯಡಿಯೂರಪ್ಪಗೆ ಈ ದೂರು ಮತ್ತಷ್ಟು ತಲೆ ನೋವು ತಂದಿರಿಸಿದೆ. ಈ ದೂರನ್ನು ಜಾರಿ ನಿರ್ದೇಶನಾಲಯ(Enforcement Directorate)ವು ಯಾವ ರೀತಿ ಪರಿಗಣಿಸುತ್ತದೆ, ಮುಂದೆ ಯಡಿಯೂರಪ್ಪ, ವಿಜಯೇಂದ್ರ ಇದನ್ನು ಯಾವ ರೀತಿ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : Heavy Rainfall : ಮುಂಗಾರು ಮಳೆ ಚುರುಕು ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News