ನವದೆಹಲಿ: ನೀವು ಮ್ಯಾಂಗೋ ಶೇಕ್, ಸಪೋಟ ಮಿಲ್ಕ್ ಶೇಕ್, ಆಪಲ್ ಮಿಲ್ಕ್ ಶೇಕ್, ಬಾದಾಮಿ ಮಿಲ್ಕ್ ಶೇಕ್ ಸೇರಿದಂತೆ ಅನೇಕ ಮಿಲ್ಕ್ ಶೇಕ್ ನೋಡಿದ್ದೀರಿ. ಆದರೆ ನೀವು ಎಂದಾದರೂ ‘ಮ್ಯಾಗಿ ಮಿಲ್ಕ್ ಶೇಕ್ ಬಗ್ಗೆ ಕೇಳಿದ್ದೀರಾ..? ಅಚ್ಚರಿಯಾದರೂ ಇದು ನಿಜ. ಸೋಷಿಯಲ್ ಮೀಡಿಯಾದಲ್ಲಿ ‘ಮ್ಯಾಗಿ ಮಿಲ್ಕ್ ಶೇಕ್’(Maggi Milkshake) ಸಖತ್ ಸೌಂಡ್ ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಮ್ಯಾಗಿ(Maggi)ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ತಟ್ಟೆಂದು 5 ನಿಮಿಷದಲ್ಲಿ ಸಿದ್ಧವಾಗುವ ಮ್ಯಾಗಿ ಸವಿಯಲು ಬಹುತೇಕರು ಇಷ್ಟಪಡುತ್ತಾರೆ. ಕಿರಿಯರಿಂದ ಹಿಡಿದು ಹಿರಿಯರವರೆಗೂ ಮ್ಯಾಗಿ ಅಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ತ್ವರಿತವಾಗಿ ತಯಾರಾಗುವ ನೂಡಲ್ಸ್ ನ ಪಾಕವಿಧಾನ ಬಹುತೇಕರಿಗೆ ಗೊತ್ತಿರುತ್ತದೆ. ಆದರೆ ಅನೇಕರು ಈ ಭಕ್ಷ್ಯವನ್ನು ತಮ್ಮದೇ ಆದ ರೀತಿಯಲ್ಲಿ ತಯಾರಿಸಿ ಸೇವಿಸುತ್ತಾರೆ. ಕೆಲವರು ಮ್ಯಾಗಿ ಜೊತೆಗೆ ಮೊಟ್ಟೆ ಸೇರಿಸಿ ಸೇವಿಸುತ್ತಾರೆ, ಇನ್ನು ಕೆಲವರು ಅನೇಕ ರೀತಿಯ ತರಕಾರಿಗಳ ಮಿಶ್ರಣದೊಂದಿಗೆ ಮ್ಯಾಗಿ ಸಿದ್ಧಪಡಿಸುತ್ತಾರೆ.


ICICI Bank Alert! ಖಾತೆಯ ಈ ವಿವರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ, ಭಾರೀ ನಷ್ಟ ಅನುಭವಿಸಬೇಕಾಗಬಹುದು


ಇತ್ತೀಚಿಗೆ ವೈರಲ್ ಆಗಿರುವ ಫೋಟೋ(Viral Photo)ವೊಂದರಲ್ಲಿ ಮಿಲ್ಕ್‌ ಶೇಕ್‌ನೊಂದಿಗೆ ಮ್ಯಾಗಿ(Maggi Milkshake)ಮಿಶ್ರಣ ಮಾಡಿರುವುದನ್ನು ಕಂಡು ನೆಟಿಜನ್ ಗಳು ಹೌಹಾರಿದ್ದಾರೆ. ಎರಡು ಎತ್ತರದ ಲೋಟಗಳನ್ನು ಹಾಲಿನಿಂದ ತುಂಬಿಸಿ, ಅದಕ್ಕೆ ಮ್ಯಾಗಿ ಮಿಕ್ಸ್ ಮಾಡಲಾಗಿದೆ. ಈ ರೀತಿಯೂ ಮಿಲ್ಕ್ ಶೇಕ್ ಮಾಡ್ತಾರಾ ಅಂತಾ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೊಂದು ಡೆಡ್ಲಿ ಕಾಂಬಿನೇಷನ್, ‘ಮ್ಯಾಗಿ ಮಿಲ್ಕ್ ಶೇಕ್’ ಹೆಸರೇ ಒಂದು ರೀತಿ ಅಸಹ್ಯ ಹುಟ್ಟಿಸುತ್ತದೆ. ಇನ್ನೂ ಅದನ್ನು ಹೇಗೆ ಸೇವಿಸುತ್ತಾರೋ ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Government Scheme: ಅದ್ಭುತ ಸರ್ಕಾರಿ ಯೋಜನೆ, ನಿತ್ಯ ಕೇವಲ ರೂ.200 ಉಳಿತಾಯ ಮಾಡಿ 20 ಲಕ್ಷ ರೂ.ಗಳ ಮಾಲೀಕರಾಗಿ


ಈ ಚಿತ್ರವು ಸಾಮಾಜಿಕ ಮಾಧ್ಯಮ(Social Media)ದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅನೇಕರು ಪ್ರೀತಿಯ ಖಾದ್ಯವನ್ನು ಈ ರೀತಿ ಪ್ರಯೋಗಿಸುವುದು ಸರಿಯಲ್ಲ. ಈ ವಿಚಿತ್ರ ಖಾದ್ಯವನ್ನು ನೋಡಿ ಇದೊಂದು ವಿಲಕ್ಷಣ ಮತ್ತು ಅಸಹ್ಯ ಅಂತಾ ಕೂಡ ಬರೆದುಕೊಂಡಿದ್ದಾರೆ.  ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ‘ಫ್ಯಾಂಟಾ ಆಮ್ಲೆಟ್ ಫ್ರೈ, ಓಲ್ಡ್ ಮಾಂಕ್‌ನೊಂದಿಗೆ ಸಿಹಿ ಸಿಹಿ ಗುಲಾಬ್ ಜಾಮೂನ್‌ಗಳನ್ನು ಮಿಶ್ರಣ ಮಾಡಿದ್ದು ಮತ್ತು ಬಿರಿಯಾನಿಗೆ ಚಾಕಲೇಟ್ ಸಾಸ್‌ನೊಂದಿಗೆ ಮಿಕ್ಸ್ ಮಾಡಿರುವ ವಿಡಿಯೋಗಳು ವೈರಲ್ ಆಗಿದ್ದವು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.