ನವದೆಹಲಿ: ದಾವೂದಿ ಬೋಹ್ರಾ ಮುಸ್ಲಿಮರಲ್ಲಿ ಸ್ತ್ರೀ ಜನನಾಂಗದ ಊನಗೊಳಿಸುವಿಕೆಯ ಅಭ್ಯಾಸವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ 5 ನ್ಯಾಯಾಧೀಶರನ್ನೊಳಗೊಂಡ ಸಂವಿಧಾನದ ಪೀಠಕ್ಕೆ ಶಿಫಾರಸ್ಸು ಮಾಡಿದೆ. 


COMMERCIAL BREAK
SCROLL TO CONTINUE READING

ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಅಪ್ರಾಪ್ತ ಬಾಲಕಿಯರ ಜನನಾಂಗದ ಊನಗೊಳಿಸುವಿಕೆಯ (ಎಫ್ಜಿಎಂ) ಅಭ್ಯಾಸವನ್ನು ಪ್ರಶ್ನಿಸಿ ದೆಹಲಿ ಮೂಲದ ವಕೀಲರು ಸಲ್ಲಿಸಿದ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡರನ್ನು ಒಳಗೊಂಡ ಪೀಠವು ವಿಚಾರಣೆ ನಡೆಸಿತ್ತು ಈಗ ಅದನ್ನು ಸಂವಿಧಾನ ಪೀಠಕ್ಕೆ ಹಸ್ತಾಂತರಿಸಲಾಗಿದೆ.


ಸ್ತ್ರೀ ಜನನಾಂಗದ ಊನಗೊಳಿಸುವಿಕೆ ಪದ್ದತಿಯನ್ನು ಅಪ್ರಾಪ್ತ ಬಾಲಕಿಯರ ಮೇಲೆ (ಅವರು ಐದು ವರ್ಷಗಳೊಳಗೆ ಮತ್ತು ಅವರು ಪ್ರೌಢಾವಸ್ಥೆಯನ್ನು ತಲುಪುವ ಮೊದಲು) ನಡೆಸುತ್ತಾರೆ. ಈ ಪದ್ಧತಿಯು ವಿಶ್ವ ಸಂಸ್ಥೆಯ ಮಕ್ಕಳ ಮತ್ತು ಮಾನವ  ಹಕ್ಕುಗಳ ಘೋಷಣೆಯ ವಿರುದ್ದವಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಈ ಪದ್ದತಿಯು ಹೆಣ್ಣು ಮಗುವಿನ ದೇಹವನ್ನು ಶಾಶ್ವತವಾಗಿ ವಿರೂಪಗೊಳಿಸಲಿದೆ ಎಂದು ವಾದಿಸಲಾಗಿದೆ.


ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಸದಸ್ಯರು ಈ ಮೊದಲು ದಾವೋದಿ ಬೊಹ್ರಾ ಸಮುದಾಯ ಸೇರಿದಂತೆ ಕೆಲವು ಇಸ್ಲಾಂ ಧರ್ಮಗಳ ಪಂಗಡಗಳು ಸ್ತ್ರೀ ಸುನತಿಯನ್ನು ಆಚರಿಸುತ್ತವೆ ಎಂದು ತಿಳಿಸಿದರು.