Viral Video: ನೆಗೆನೆಗೆದು ಅಚ್ಚರಿ ಮೂಡಿಸಿದ ಪಿಂಕ್ ಡಾಲ್ಫಿನ್..!
ಪಿಂಕ್ ಡಾಲ್ಫಿನ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ನವದೆಹಲಿ: ಸಾಗರ ಪ್ರಪಂಚ(World of the Ocean)ವು ಸಾಮಾನ್ಯ ಪ್ರಪಂಚಕ್ಕಿಂತ ಬಹಳ ಭಿನ್ನವಾಗಿದೆ. ಅಲ್ಲಿನ ತಾಪಮಾನ, ಸಸ್ಯಗಳು, ಕೀಟಗಳು, ಪ್ರಾಣಿಗಳು ಎಲ್ಲವೂ ಸಾಮಾನ್ಯ ಪ್ರಪಂಚಕ್ಕಿಂತ ಭಿನ್ನವಾಗಿವೆ. ಸಾಗರ ಅನೇಕ ರಹಸ್ಯಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಸಾಗರದ ಒಡಲಿನಲ್ಲಿರುವ ಕೌತುಕವನ್ನು ಪತ್ತೆಹಚ್ಚಲು ಯಾರಿಂದಲೂ ಸಾಧ್ಯವಾಗಿಲ್ಲ. ಮಾನವ ಇಲ್ಲಿರುವ ಜೀವ ವೈವಿಧ್ಯವನ್ನು ತಿಳಿಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾನೆ. ಪ್ರತಿಬಾರಿಯೂ ಹೊಸ ಹೊಸ ಜೀವಗಳು ಪ್ರತ್ಯಕ್ಷವಾಗುತ್ತಿವೆ. ಇನ್ನು ಹೆಚ್ಚಿನ ಸಂಖ್ಯೆಯ ಜಾತಿಗಳ ಜೀವಿಗಳು ಪತ್ತೆಯಾಗಿಲ್ಲ.
ಇತ್ತೀಚೆಗೆ ಒಂದು ರೋಚಕ ದೃಶ್ಯ ಕಂಡುಬಂದಿದೆ. ಗುಲಾಬಿ ಬಣ್ಣದ ಡಾಲ್ಫಿನ್(Pink Dolphin) ವೊಂದರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media) ದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಡಾಲ್ಫಿನ್ ಎಂದರೆ ಎಲ್ಲರೂ ಕಪ್ಪುಬಣ್ಣದಲ್ಲಿರುತ್ತದೆ ಎಂದು ತಿಳಿದುಕೊಂಡಿದ್ದವರಿಗೆ ಈ ಪಿಂಕ್ ಡಾಲ್ಫಿನ್ ಅಚ್ಚರಿ ಹುಟ್ಟಿಸಿದೆ.
ಇದನ್ನೂ ಓದಿ: Google: ಈ ಅಪಾಯಕಾರಿ 8 ಆಪ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಿ, ಇಲ್ಲದಿದ್ದರೆ ಬ್ಯಾಂಕ್ ಖಾತೆ ಹ್ಯಾಕ್ ಆಗುತ್ತೆ
ಹೌದು, ಇದು ಗುಲಾಬಿ ಬಣ್ಣದ ಡಾಲ್ಫಿನ್(Pink Dolphin). ಇಲ್ಲಿವರೆಗೂ ನೀವು ಕಪ್ಪು ಮತ್ತು ನೀಲಿ ಬಣ್ಣದ ಸಾಗರಜೀವಿ ಡಾಲ್ಫಿನ್ ನೋಡಿದ್ದೀರಿ. ಆದರೆ, ಇದೇ ಮೊದಲ ಬಾರಿಗೆ ಗುಲಾಬಿ ಬಣ್ಣದ ಡಾಲ್ಫಿನ್ ವೊಂದು ಕಂಡುಬಂದಿದೆ. ಈ ಪಿಂಕ್ ಡಾಲ್ಫಿನ್ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಐಎಫ್ಎಸ್ ಅಧಿಕಾರಿ ಸುಸಂತಾ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಗುಲಾಬಿ ಬಣ್ಣದ ಡಾಲ್ಫಿನ್ ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಆಫ್ಘಾನ್ ನಿಂದ ಜನರನ್ನು ಭಾರತಕ್ಕೆ ಸ್ಥಳಾಂತರಿಸುವ ಕೇಂದ್ರದ ಕಾರ್ಯ ಶ್ಲಾಘನೀಯ -ಪಿಣರಾಯಿ ವಿಜಯನ್
ಈ ವಿಡಿಯೋವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಇದುವರೆಗೂ ನೀಲಿ ಮತ್ತು ಕಪ್ಪು ಬಣ್ಣದ ಡಾಲ್ಫಿನ್ ಗಳನ್ನು ಮಾತ್ರ ನೋಡಿದ್ದೇವು. ಪಿಂಕ್ ಡಾಲ್ಫಿನ್(Pink Dolphin)ಇರುವ ಬಗ್ಗೆ ನಮಗೆ ಕಲ್ಪನೆಯೇ ಇರಲಿಲ್ಲವೆಂದು ಆಶ್ಚರ್ಯವ್ಯಕ್ತಪಡಿಸಿ ಅನೇಕರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ