ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು ದಿನನಿತ್ಯದ ಕೋವಿಡ್ -19 ಪ್ರಕರಣಗಳಲ್ಲಿ ಶೇ 22.7 ರಷ್ಟು ಏರಿಕೆಯಾಗಿರುವ ಬೆನ್ನಲ್ಲೇ ಈಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗುರುವಾರ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಕೊರೊನಾವೈರಸ್ ಪ್ರಕರಣಗಳ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಲಸಿಕೆಯ ವೇಗವನ್ನು ಹೆಚ್ಚಿಸಲು ಕೋರಿದರು "ಹೆಚ್ಚುತ್ತಿರುವ #COVID-19 ಸಂಖ್ಯೆಗಳು ಚಿಂತಾಜನಕವಾಗಿವೆ.ಮುಂದಿನ ಅಲೆಯಲ್ಲಿ ಗಂಭೀರ ಫಲಿತಾಂಶಗಳನ್ನು ತಪ್ಪಿಸಲು ವ್ಯಾಕ್ಸಿನೇಷನ್ ಕಾರ್ಯವನ್ನು ತ್ವರಿತಗೊಳಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.


ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ (NMP) ನೀತಿಯ ಮೇಲೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ (Rahul Gandhi),"GOI ಮಾರಾಟದಲ್ಲಿ ನಿರತರಾಗಿರುವ ಕಾರಣ ದಯವಿಟ್ಟು ನಿಮ್ಮ ಬಗ್ಗೆ ಕಾಳಜಿ ವಹಿಸಿ" ಎಂದು ಹೇಳಿದರು.


ಕಳೆದ 24 ಗಂಟೆಗಳಲ್ಲಿ ಭಾರತವು 46,164 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ  3,25,58,530 ಕ್ಕೆ ತಲುಪಿದೆ.607 ಸಾವುನೋವುಗಳೊಂದಿಗೆ, ಸಾವಿನ ಸಂಖ್ಯೆ 4,36,365 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.


Banking News: ಬ್ಯಾಂಕುಗಳಲ್ಲಿನ ನಿಮ್ಮ ಹಣಕ್ಕೆ ಹೆಚ್ಚಾಗಲಿದೆ ಗ್ಯಾರಂಟಿ, ಕಾರಣ ಇಲ್ಲಿದೆ


ಏತನ್ಮಧ್ಯೆ, ರಾಹುಲ್ ಗಾಂಧಿಯವರು ಬುಧವಾರ ನಗದೀಕರಣ ಯೋಜನೆಯ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು ಮತ್ತು ಸರ್ಕಾರವು ಭಾರತವನ್ನು ಮಾರಾಟಕ್ಕೆ ತಂದಿದೆ ಎಂದು ಆರೋಪಿಸಿದರು. ಮೊದಲು ಅವರು ನಂಬಿಕೆಯನ್ನು ಮಾರಿದರು ಮತ್ತು ಈಗ ಭಾರತ ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ..


ಸೋಮವಾರದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 6 ಲಕ್ಷ ಕೋಟಿ ರೂಪಾಯಿಗಳ ರಾಷ್ಟ್ರೀಯ  ನಗದೀಕರಣ ಪೈಪ್‌ಲೈನ್ (NMP) ನೀತಿಯನ್ನು ಬಿಡುಗಡೆ ಮಾಡಿದರು, ಇದರಲ್ಲಿ ಪ್ಯಾಸೆಂಜರ್ ರೈಲುಗಳು ಮತ್ತು ರೈಲ್ವೇ ನಿಲ್ದಾಣಗಳಿಂದ ವಿಮಾನ ನಿಲ್ದಾಣಗಳು, ರಸ್ತೆಗಳು ಮತ್ತು ಕ್ರೀಡಾಂಗಣಗಳಲ್ಲಿ ಖಾಸಗಿ ಕಂಪನಿಗಳು ಹೂಡಿಕೆ ಮಾಡಲಿವೆ.


ಇದನ್ನೂ ಓದಿ : ಹಳ್ಳಿ ಮತ್ತು ಅರೆ ನಗರಗಳಲ್ಲಿ ಕೊರೊನಾ ತಡೆಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದ ಕೇಂದ್ರ


ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ)ದ  25 ವಿಮಾನ ನಿಲ್ದಾಣಗಳು, ಚೆನ್ನೈ, ಭೋಪಾಲ್, ವಾರಣಾಸಿ ಮತ್ತು ವಡೋದರಾ ಸೇರಿದಂತೆ 40 ರೈಲ್ವೆ ನಿಲ್ದಾಣಗಳು,15 ರೈಲ್ವೇ ಸ್ಟೇಡಿಯಂಗಳು ಮತ್ತು ರೈಲ್ವೆ ವಸಾಹತುಗಳು ಆಸ್ತಿಗಳ ಮೂಲಕ ಸರ್ಕಾರ ಹಣಗಳಿಸಲು ಯೋಜಿಸಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ