Rahul Gandhi : ಅರೆಸ್ಟ್  ಮೀ ; ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸವಾಲು!

ಬಂಧಿಸಿರುವುದರ ವಿರುದ್ಧ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ತೀವ್ರ ವಾಗ್ದಾಳಿ 

Last Updated : May 16, 2021, 06:19 PM IST
  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಟೀಕಿಸಿ ಫೋಸ್ಟರ್ ಅಂಟಿಸಿದ್ದ ಹಲವರ ಬಂಧನ
  • ಬಂಧಿಸಿರುವುದರ ವಿರುದ್ಧ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ತೀವ್ರ ವಾಗ್ದಾಳಿ
  • ಮೋದಿ ಅವರೇ, ನಮ್ಮ ಮಕ್ಕಳ ಲಸಿಕೆಯನ್ನು ಏಕೆ ವಿದೇಶಕ್ಕೆ ಕಳುಹಿಸುತ್ತೀರಾ?
 Rahul Gandhi : ಅರೆಸ್ಟ್  ಮೀ ; ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸವಾಲು! title=

ನವದೆಹಲಿ : ಕೋವಿಡ್-19 ಲಸಿಕೆ ರಫ್ತು ನೀತಿ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಫೋಸ್ಟರ್ ಅಂಟಿಸಿದ್ದ ಹಲವರನ್ನು ಬಂಧಿಸಿರುವುದರ ವಿರುದ್ಧ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ(Rahul Gandhi) ನೇತೃತ್ವದ ಕಾಂಗ್ರೆಸ್ ನಾಯಕರು, ಕೋವಿಡ್ ಲಸಿಕೆಯನ್ನು ಏಕೆ ವಿದೇಶಗಳಿಗೆ ಏಕೆ ಕಳುಹಿಸುತ್ತೀರಾ? ಎಂದು ಕೇಳಿರುವ ಫೋಸ್ಟರ್ ನೊಂದಿಗೆ ಟ್ವಿಟರ್ ನಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿಕೊಂಡಿದ್ದಾರೆ. ಜನರಿಗೆ ಲಸಿಕೆ, ಔಷಧ ಮತ್ತು ಆಕ್ಸಿಜನ್ ಸಿಗದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಠಿಣ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಪ್ರತಿಪಕ್ಷಗಳು
ಹೇಳಿವೆ.

ಇದನ್ನೂ ಓದಿ : Banking News: ಬ್ಯಾಂಕುಗಳಲ್ಲಿನ ನಿಮ್ಮ ಹಣಕ್ಕೆ ಹೆಚ್ಚಾಗಲಿದೆ ಗ್ಯಾರಂಟಿ, ಕಾರಣ ಇಲ್ಲಿದೆ

ಮೋದಿ ಅವರೇ, ನಮ್ಮ ಮಕ್ಕಳ ಲಸಿಕೆಯನ್ನು ಏಕೆ ವಿದೇಶಕ್ಕೆ ಕಳುಹಿಸುತ್ತೀರಾ ಎಂದು ಕೇಳುವ ಫೋಸ್ಟರ್ ನಲ್ಲಿನ ಫೋಟೋ ಟ್ವೀಟರ್ ನಲ್ಲಿ ಶೇರ್ ಮಾಡಿರುವ ರಾಹುಲ್ ಗಾಂಧಿ ನನ್ನನ್ನೂ ಬಂಧಿಸಿ(Arrest me too) ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ಹಳ್ಳಿ ಮತ್ತು ಅರೆ ನಗರಗಳಲ್ಲಿ ಕೊರೊನಾ ತಡೆಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದ ಕೇಂದ್ರ

ಲಸಿಕೆ ವಿಚಾರವಾಗಿ ದೆಹಲಿ(Delhi)ಯ ಹಲವೆಡೆ ಫೋಸ್ಟರ್ ಅಂಟಿಸಿದ್ದ ಆರೋಪದ ಮೇರೆಗೆ 24 ಜನರನ್ನು ದೆಹಲಿ ಪೊಲೀಸರು ಬಂಧಿಸಿದ ನಂತರ ಈ ಸವಾಲನ್ನು ರಾಹುಲ್ ಗಾಂಧಿ ಹಾಕಿದ್ದಾರೆ. ಇಂತಹ ಫೋಸ್ಟರ್ ಗಳನ್ನು ತನ್ನ ಮನೆಯ ಕಾಂಪೌಂಡ್ ಮೇಲೆ ಹಾಕುವುದಾಗಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ : ರೈಲ್ವೆ ನಿಲ್ದಾಣದಲ್ಲಿ 6,000 ನೇ ವೈ-ಫೈ ಅನ್ನು ನಿಯೋಜಿಸಿದ ಭಾರತೀಯ ರೈಲ್ವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News