ನವದೆಹಲಿ: ದೇಶದಲ್ಲಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆಲ್ ಇನ್ ಒನ್ ಪಿಸಿ ಮತ್ತು ಸರ್ವರ್‌ಗಳ ಉತ್ಪಾದನೆಯನ್ನು ಹೆಚ್ಚಿಸಲು 7,350 ಕೋಟಿ ರೂ. ಉತ್ಪಾದನಾ ಆಧಾರಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯ ಮೂಲಕ ದೇಶೀಯ ಉತ್ಪಾದನಾ ಕ್ಷೇತ್ರದಲ್ಲಿ ಜಾಗತಿಕ ಕಂಪನಿಗಳನ್ನು ಆಕರ್ಷಿಸಲು ಸರ್ಕಾರ ಉದ್ದೇಶಿಸಿದೆ. ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಪಿಎಲ್ಐ ಯೋಜನೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಅದೇ ಸಮಯದಲ್ಲಿ, ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಮನೆಯಿಂದ ಕೆಲಸ (Work From Home) ಮತ್ತು ಮನೆಯಿಂದ ಅಧ್ಯಯನ (Online Classes) ದಿಂದಾಗಿ  ದೇಶದ ಪಿಸಿ ಮಾರುಕಟ್ಟೆ ಬಹಳ ವೇಗವಾಗಿ ಬೆಳೆಯುತ್ತಿದೆ.


ಸರ್ಕಾರದ ಪಿಎಲ್ಐ ಯೋಜನೆ ಏನು?
ಈ ಹೊಸ ಯೋಜನೆಯಡಿ ಮುಂದಿನ ನಾಲ್ಕು ವರ್ಷಗಳಲ್ಲಿ ಈ ಉತ್ಪನ್ನಗಳ ಉತ್ಪಾದನೆ 3.26 ಲಕ್ಷ ಕೋಟಿ ರೂ. ಮತ್ತು ರಫ್ತು 2.45 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ ಮತ್ತು ಇದು 1.80 ಲಕ್ಷದಷ್ಟು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ - Telemarketing ಕಂಪನಿಗಳಿಗೆ ಪಾಠ ಕಲಿಸಲು ಮುಂದಾದ Modi ಸರ್ಕಾರ


ಐಟಿ ಯಂತ್ರಾಂಶಕ್ಕಾಗಿ 7,350 ಕೋಟಿ ರೂ.ಗಳ ಪಿಎಲ್ಐ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್  (Ravi Shankar Prasad) ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಇದರ ಅಡಿಯಲ್ಲಿ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್ ಇನ್ ಒನ್ ಪಿಸಿಗಳು ಮತ್ತು ಸರ್ವರ್‌ಗಳು ಬರುತ್ತವೆ. 7,350 ಕೋಟಿ ರೂ.ಗಳ ಈ ಯೋಜನೆಯ ಉದ್ದೇಶವು ಭಾರತವನ್ನು ಹಾರ್ಡ್‌ವೇರ್ ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ರೂಪಿಸುವುದು ಎಂದು ವಿವರಿಸಿದರು.


ಪಿಎಲ್‌ಐ ಯೋಜನೆಯಿಂದಾಗಿ ಟೆಕ್ ದೈತ್ಯ ಆಪಲ್ (Apple) ತನ್ನ ಕೆಲವು ಐಪ್ಯಾಡ್ ಟ್ಯಾಬ್ಲೆಟ್‌ಗಳನ್ನು ಭಾರತದಲ್ಲಿ ಜೋಡಿಸಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಆಪಲ್ ಭಾರತದಲ್ಲಿ ಉತ್ಪಾದನಾ ಅವಕಾಶಗಳನ್ನು ಅನ್ವೇಷಿಸುತ್ತಿದೆ ಎಂಬ ವರದಿಗಳು ಬಂದಿವೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಇದನ್ನೂ ಓದಿ - Google Latest Updates - Google ನ ಈ ಅದ್ಭುತ ವೈಶಿಷ್ಟ್ಯಗಳಿಂದ ನಿಮ್ಮ ಫೋನ್ ಇನ್ನಷ್ಟು ಸ್ಮಾರ್ಟ್ ಆಗಲಿದೆ


ಈ ಹೈಟೆಕ್ ಐಟಿ ಹಾರ್ಡ್‌ವೇರ್ ಗ್ಯಾಜೆಟ್‌ಗಳಿಗಾಗಿ ಪಿಎಲ್ಐ (PLI) ಯೋಜನೆಯನ್ನು ಅನುಮೋದಿಸುವ ಮೊದಲು, ಟೆಲಿಕಾಂ ಉಪಕರಣಗಳ ತಯಾರಿಕೆಗಾಗಿ ಕೇಂದ್ರ ಕ್ಯಾಬಿನೆಟ್ ಕಳೆದ ವಾರ 12,195 ಕೋಟಿ ರೂ. ಯೋಜನೆಗೆ ಅನುಮತಿ ನೀಡಿತ್ತು. ಈ ಯೋಜನೆಗೆ ಅದ್ಭುತ ಪ್ರತಿಕ್ರಿಯೆ ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.


ಈ ಯೋಜನೆಯ ಲಾಭವನ್ನು ಐದು ದೊಡ್ಡ ಜಾಗತಿಕ ಕಂಪನಿಗಳು ಮತ್ತು ಐಟಿ ಯಂತ್ರಾಂಶ ಉತ್ಪಾದನಾ ವಲಯದ 10 ದೇಶೀಯ 'ಚಾಂಪಿಯನ್' ಕಂಪನಿಗಳಿಗೆ ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪ್ರದೇಶದಲ್ಲಿ ಸ್ವಾವಲಂಬನೆ ಬಹಳ ಮುಖ್ಯ. ಏಕೆಂದರೆ ಭಾರತ ಇನ್ನೂ ಈ ಉತ್ಪನ್ನಗಳ ಆಮದಿನ ಮೇಲೆ ಅವಲಂಬಿತವಾಗಿದೆ. ಈ ಯೋಜನೆಯು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ 2,700 ಕೋಟಿ ರೂ.ಗಳ ಹೆಚ್ಚುವರಿ ಹೂಡಿಕೆಯನ್ನು ತರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
 


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.