PM Awas Yojana ಲಾಭಾರ್ಥಿಗಳಿಗೆ ಮೋದಿ ಸರ್ಕಾರದ ಉಡುಗೊರೆ, ಲಾಭಾರ್ಥಿಗಳ ಖಾತೆಗೆ 700 ಕೋಟಿ ರೂ. DBT
Pradhan Mantri Awaas Yojana - Gramin: ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY Scheme)- ಮೊದಲ ಕಂತನ್ನು ಗ್ರಾಮೀಣ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.
ಅಗರ್ತಲಾ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಭಾನುವಾರ) ತ್ರಿಪುರಾದ 1 ಲಕ್ಷ 47 ಸಾವಿರಕ್ಕೂ ಹೆಚ್ಚು ಪ್ರಧಾನ ಮಂತ್ರಿ ಆವಾಸ್ ಯೋಜನೆ- ಗ್ರಾಮೀಣ (PMAY-G) ಅಡಿಯಲ್ಲಿ ಫಲಾನುಭವಿಗಳಿಗೆ (PMAY Beneficiaries) ಅವರ ಪಕ್ಕಾ ಮನೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ 700 ಕೋಟಿ ರೂ. ವರ್ಗಾಗಿಸಲಾಗಿದೆ. ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮಿನ್ ಅಡಿಯಲ್ಲಿ ಮೊದಲ ಕಂತನ್ನು (PMAY Instalment) ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ ನಂತರ, ಪಿಎಂ ಮೋದಿ ಅವರು ಫಲಾನುಭವಿಗಳೊಂದಿಗೆ ಮಾತನಾಡಿದ್ದಾರೆ. ಕಳೆದ 7 ವರ್ಷಗಳಿಂದ ಸರ್ಕಾರದ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಪಡೆಯಬೇಕೆಂಬುದು ನಮ್ಮ ಪ್ರಯತ್ನವಾಗಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಈ ಹಿಂದೆ ಸರಕಾರದ ಯೋಜನೆಯ ಸದುಪಯೋಗ ಕೆಲವೇ ಕೆಲವು ಮಂದಿಗೆ ಮಾತ್ರ ದೊರೆಯುತ್ತಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Bitcoin scam: ನಲಪಾಡ್ ಹೆಸರು ಪ್ರಸ್ತಾಪಿಸಿ 'ಕಾಂಗ್ರೆಸ್ ಫೇಕ್ ನ್ಯೂಸ್ ಫ್ಯಾಕ್ಟರಿ' ಎಂದ ಬಿಜೆಪಿ..!
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿ ಅನಿತಾ ಅವರೊಂದಿಗೆ ಮಾತನಾಡಿರುವ ಪ್ರಧಾನಿ ಮೋದಿ, ನಾನು ನಿಮಗೆ ಪಕ್ಕಾ ಮನೆ ಕೊಡಬಲ್ಲೆ, ಆದರೆ ನಿಮ್ಮ ಮಕ್ಕಳಿಗೆ ಭದ್ರವಾದ ಭವಿಷ್ಯವನ್ನು ನೀಡಲು ನಿಮ್ಮಿಂದ ಮಾತ್ರ ಸಾಧ್ಯ, ಅದಕ್ಕಾಗಿಯೇ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ-BIG NEWS : ಪೆಟ್ರೋಲ್-ಡೀಸೆಲ್ ನಂತರ CNG ಬೆಲೆಯಲ್ಲಿ ಭಾರಿ ಏರಿಕೆ! ಹೊಸ ಬೆಲೆ ತಿಳಿಯಿರಿ
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣದಲ್ಲಿ ಅರ್ಜಿ ಸಲ್ಲಿಸಲು ಅಥವಾ ಮೊದಲ ಕಂತನ್ನು (PMAY First Installment) ಪಡೆಯಲು ನೀವು ಯಾರಿಗದರೋ ಲಂಚ ನೀಡಬೇಕಾದ ಪ್ರಸಂಗ ಎದುರಾಗಿದೆಯೇ? ಒಂದು ವೇಳೆ ಎದುರಾಗಿದ್ದರೆ ನನಗೆ ಹೇಳಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಫಲಾನುಭವಿ, ಇಲ್ಲ, ನಾನು ಯಾವುದೇ ಲಂಚ ನೀಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ-ಕಾಂಗ್ರೆಸ್ ಆರೋಪಗಳಿಗೆ ಬಿಜೆಪಿ ತಿರುಗೇಟು, ಬಿಟ್ ಕಾಯಿನ್ ಹಗರಣವೇ ನಡೆದಿಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.