ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿರುವ ಬಿಟ್ ಕಾಯಿನ್ ಹಗರಣ(Karnataka Bitcoin Scam)ವು ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೊತೆ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಗೆ ಸಂಬಂಧವಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ನಲಪಾಡ್ ಹೆಸರು ಪ್ರಸ್ತಾಪಿಸಿ ‘ಕಾಂಗ್ರೆಸ್ ಒಂದು ಫೇಕ್ ನ್ಯೂಸ್ ಫ್ಯಾಕ್ಟರಿ’ ಎಂದು ಟೀಕಿಸಿದೆ.
‘ಪ್ರಸ್ತಾವಿತ #Bitcoin ಹಗರಣದಲ್ಲಿ ಇದುವರೆಗೆ ಲಭ್ಯ ಇರುವ ದಾಖಲೆ ಪ್ರಕಾರ ಯುವ ಕಾಂಗ್ರೆಸ್ ಮುಂದಿನ ಅಧ್ಯಕ್ಷ ನಲಪಾಡ್(Mohammed Nalapad) ಒಬ್ಬರೇ ಆರೋಪಿ. ಶ್ರೀಕಿ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದ ರಾಜಕೀಯ ಹಿನ್ನೆಲೆಯ ವ್ಯಕ್ತಿ. ಇವರನ್ನು ಬಿಟ್ಟರೆ ಬೇರೆ ಇನ್ಯಾರು ಇಲ್ಲ, ಕಾಂಗ್ರೆಸ್ ಇದನ್ನೇಕೆ ಮರೆ ಮಾಚುತ್ತಿದೆ?’ ಎಂದು ಪ್ರಶ್ನಿಸಿ ಬಿಜೆಪಿ ಟ್ವೀಟ್ ಮಾಡಿದೆ.
ಪ್ರಸ್ತಾವಿತ #Bitcoin ಹಗರಣದಲ್ಲಿ ಇದುವರೆಗೆ ಲಭ್ಯ ಇರುವ ದಾಖಲೆ ಪ್ರಕಾರ ಯುವ ಕಾಂಗ್ರೆಸ್ ಮುಂದಿನ ಅಧ್ಯಕ್ಷ ನಲಪಾಡ್ ಒಬ್ಬರೇ ಆರೋಪಿ ಶ್ರೀಕಿ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದ ರಾಜಕೀಯ ಹಿನ್ನೆಲೆಯ ವ್ಯಕ್ತಿ.
ಇವರನ್ನು ಬಿಟ್ಟರೆ ಬೇರೆ ಇನ್ಯಾರು ಇಲ್ಲ, ಕಾಂಗ್ರೆಸ್ ಇದನ್ನೇಕೆ ಮರೆ ಮಾಚುತ್ತಿದೆ?#CONgressFakeNewsFactory pic.twitter.com/O7uud6DXYa
— BJP Karnataka (@BJP4Karnataka) November 14, 2021
ಇದನ್ನೂ ಓದಿ: Shivamogga : ಮದುವೆ ಮನೆ ಊಟ ಸೇವಿಸಿ 50 ಜನ ಆಸ್ಪತ್ರೆಗೆ ದಾಖಲು!
‘2018ರಲ್ಲಿಯೇ ಹಗರಣದ ಆರೋಪಿ ಶ್ರೀಕಿ(Hacker Srikrishna Ramesh alias Sriki) ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್(Mohammed Nalapad) ಜೊತೆ ಸ್ನೇಹ ಸಂಬಂಧ ಹೊಂದಿದ್ದ. ರಾಬಿನ್ ಖಂಡೇವಾಲ್ ಹೇಳಿಕೆ ಪ್ರಕಾರ ನಲಪಾಡ್ ಜೊತೆ ಸ್ನೇಹ ಇರುವ ಅವಧಿಯಲ್ಲೇ ಆರೋಪಿಯು #Bitcoin ಹ್ಯಾಕ್ ಮಾಡಿ ತನ್ನ ವ್ಯಾಲೆಟ್‌ನಲ್ಲಿಟ್ಟುಕೊಂಡಿರುವ ವಿಚಾರ ತಿಳಿಸಿದ್ದ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
‘ಕಾಂಗ್ರೆಸ್ ನಾಯಕರ ಶಂಕಿತ #Bitcoin ಹಗರಣದಲ್ಲಿ ರಾಜಕೀಯ ನಾಯಕರ ಕೈವಾಡ ಇದೆ ಎಂಬುದಕ್ಕೆ ಇದುವರೆಗೆ ದೊರೆತ ಅತಿದೊಡ್ಡ ಸಾಕ್ಷ್ಯ ಯಾವುದು? ಆ ಸಾಕ್ಷ್ಯವನ್ನು ಕಾಂಗ್ರೆಸ್ ನಾಯಕರು ಏಕೆ ಮುಚ್ಚಿಡುತ್ತಿದ್ದಾರೆ? ಹೂ ಆರ್ ದಿ ಆಕ್ಟರ್, ಯಾರಿಗಾಗಿ ಈ ಬೃಹನ್ನಾಟಕ ಎಂಬುದನ್ನು ನಾವು ಬಿಚ್ಚಿಡುತ್ತೇವೆ. ನಲಪಾಡ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತ. ಡಿಕೆಶಿ ಅವರು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಪ್ರಭಾವಿ ಅಳಿಯ ರಾಬರ್ಟ್ ವಾದ್ರಾಗೆ ಆಪ್ತ. ಹಾಗಾದರೆ ಈ ಪ್ರಕರಣದ ರೂವಾರಿಗಳು...? ಜಾಯಿನ್ ದ ಡಾಟ್ಸ್...’ ಎಂದು ಬಿಜೆಪಿ ಮತ್ತೊಂದು ಟ್ವೀಟ್ ನಲ್ಲಿ ಟೀಕಿಸಿದೆ.
ಕಾಂಗ್ರೆಸ್ ನಾಯಕರ ಶಂಕಿತ #Bitcoin ಹಗರಣದಲ್ಲಿ ರಾಜಕೀಯ ನಾಯಕರ ಕೈವಾಡ ಇದೆ ಎಂಬುದಕ್ಕೆ ಇದುವರೆಗೆ ದೊರೆತ ಅತಿದೊಡ್ಡ ಸಾಕ್ಷ್ಯ ಯಾವುದು?
ಆ ಸಾಕ್ಷ್ಯವನ್ನು ಕಾಂಗ್ರೆಸ್ ನಾಯಕರು ಏಕೆ ಮುಚ್ಚಿಡುತ್ತಿದ್ದಾರೆ?
ಹೂ ಆರ್ ದಿ ಆಕ್ಟರ್, ಯಾರಿಗಾಗಿ ಈ ಬೃಹನ್ನಾಟಕ ಎಂಬುದನ್ನು ನಾವು ಬಿಚ್ಚಿಡುತ್ತೇವೆ.#CONgressFakeNewsFactory
— BJP Karnataka (@BJP4Karnataka) November 14, 2021
ಇದನ್ನೂ ಓದಿ: ಗಾಂಧಿ ಹಾಗೂ ಗ್ಯಾಂಡಿ ಶಬ್ದದ ಮಧ್ಯೆ ವ್ಯತ್ಯಾಸವಿದೆ: ರಾಹುಲ್ ಟೀಕಿಸಿದ ಬಿಜೆಪಿ
ಶ್ರೀಕಿ ಪರಿಚಯವಿದ್ದದ್ದು ನಿಜ, ಪರಿಚಯವಿಲ್ಲ ಎಂದರೆ ತಪ್ಪಾಗುತ್ತದೆ!
ಹ್ಯಾಕರ್ ಶ್ರೀಕಿ ಜೊತೆಗಿನ ಸಂಬಂಧದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ನಲಪಾಡ್, ‘ನನಗೆ ಶ್ರೀಕಿಯ ಪರಿಚಯವಿದ್ದಿದ್ದು ನಿಜ, ಪರಿಚಯವಿಲ್ಲ ಎಂದರೆ ತಪ್ಪಾಗುತ್ತದೆ. ನನ್ನ ತಮ್ಮನ ಸ್ನೇಹಿತ ಮನೀಶ್ ಮೂಲಕ ಶ್ರೀಕಿ ಪರಿಚಯವಾಯಿತು. ಆಧಾರ್ ಕಾರ್ಡ್ ಕೇಳಿ ಸ್ನೇಹ ಮಾಡಲು ಸಾಧ್ಯವೇ, ಆದರೆ ಈಗ ನನಗೂ ಶ್ರೀಕಿಗೂ ಯಾವುದೇ ರೀತಿಯ ಸಂಬಂಧವಿಲ್ಲ’ವೆಂದು ಹೇಳಿದ್ದಾರೆ.
ನಲಪಾಡ್ ಪರ ನಿಂತಿರುವ ಡಿಕೆಶಿ..?
ಶ್ರೀಕಿ ಹ್ಯಾಕರ್ ಎಂಬುದು ಮೊಹಮ್ಮದ್ ನಲಪಾಡ್ ಗೆ ಗೊತ್ತಿತ್ತು. ಇದೀಗ ನಲಪಾಡ್ ಹೆಸರು ಕೇಳಿಬರುತ್ತಿರುವುದರಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಿ ರಕ್ಷಾ ರಾಮಯ್ಯಗೆ ನೀಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಆಗ್ರಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಅಸಮಾಧಾನ ಎದ್ದಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.