ನವದೆಹಲಿ : ಮುಂಬರುವ ದಿನಗಳಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಪಡೆಯುವ ಮೊತ್ತವನ್ನು ಹೆಚ್ಚಿಸಬಹುದು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಪಡೆದ ಮೊತ್ತವನ್ನು ಸರ್ಕಾರ ದ್ವಿಗುಣಗೊಳಸಲು ಯೋಜಿಸುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ರೈತರಿಗೆ ವಾರ್ಷಿಕ 6000 ರೂಪಾಯಿಗಳ ಬದಲಾಗಿ 12000 ರೂಪಾಯಿಗಳನ್ನು ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಅಂದರೆ, 2000 ರೂಪಾಯಿಗಳ ಕಂತಿನ ಬದಲಾಗಿ,  4000 ರೂಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.


COMMERCIAL BREAK
SCROLL TO CONTINUE READING

ಈಗ ಪಿಎಂ ಕಿಸಾನ್ ನ 4000 ರೂ. ಕಂತು?


ಬಿಹಾರದ ಕೃಷಿ ಸಚಿವ ಅಮರೇಂದ್ರ ಪ್ರತಾಪ್ ಸಿಂಗ್ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು. ಬಿಹಾರದ ಕೃಷಿ ಸಚಿವರ ಪ್ರಕಾರ, ಸರ್ಕಾರವು PM ಕಿಸಾನ್ ಸಮ್ಮಾನ್ ನಿಧಿ(PM Kisan Samman Nidhi Yojana)ಯ ಮೊತ್ತವನ್ನು ದ್ವಿಗುಣಗೊಳಿಸಲಿದೆ, ಇದಕ್ಕಾಗಿ ಸರ್ಕಾರವು ಸಂಪೂರ್ಣ ಸಿದ್ಧತೆಗಳನ್ನು ಮಾಡಿದೆ ಎಂದು ತಿಳಿಸಿದ್ದಾರೆ. ಈ ಹೇಳಿಕೆಯ ಹೊರತಾಗಿ ಸರ್ಕಾರದಿಂದ ಅಂತಹ ಯಾವುದೇ ಸೂಚನೆ ಅಥವಾ ಮಾಹಿತಿ ನೀಡಿಲ್ಲ.


ಇದನ್ನೂ ಓದಿ : Jallianwala Bagh Smarak : ನವೀಕರಿಸಿದ 'ಜಲಿಯನ್ ವಾಲಾ ಬಾಗ್ ಸ್ಮಾರಕ' ಇಂದು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ ಪ್ರಧಾನಿ ಮೋದಿ 


19,500 ಕೋಟಿ ರೂ. ಹಣ ರೈತರ ಖಾತೆಗಳಿಗೆ


ಪ್ರಧಾನಿ ಮೋದಿ(Narendra Modi) ಅವರು ದೇಶಾದ್ಯಂತ 9.75 ಕೋಟಿಗೂ ಅಧಿಕ ರೈತರ ಖಾತೆಗಳಿಗೆ 19,500 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ. ದೇಶದ ರೈತರನ್ನ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೂ ಒಂದು ದಿನ ಮೊದಲು ಹೇಳಿದ್ದರು. ಅಂತಹ ಒಂದು ಪ್ರಯತ್ನವೆಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆ, ಇದು ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ. 


ಪಿಎಂ ಕಿಸಾನ್ 9 ಕಂತುಗಳ ಹಣ ಪಡೆದ ರೈತರು


ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ(PM Kisan) ಅಡಿಯಲ್ಲಿ ಸರ್ಕಾರವು 9 ಕಂತುಗಳ ಹಣ ಬಿಡುಗಡೆ ಮಾಡಿದೆ. ಮೊದಲ ಕಂತಿನ 2000 ರೂ. ಮೊತ್ತವು 3,16,06,630 ರೈತರ ಖಾತೆಗೆ ಜಮಾ ಮಾಡಲಾಗಿದೆ, ಇಲ್ಲಿಯವರೆಗೆ 9 ನೇ ಕಂತಿನಲ್ಲಿ 9,90,95,145 ರೈತರಿಗೆ ಹಣ ನೀಡಲಾಗಿದೆ. ಇದೀಗ, ನವೆಂಬರ್ 30 ರವರೆಗೆ, 9 ನೇ ಕಂತಿನ ಹಣವನ್ನು ಉಳಿದ ರೈತರ ಖಾತೆಗೆ ಕಳುಹಿಸಲಾಗುತ್ತದೆ. 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯೊಂದಿಗೆ ಪಿಎಂ ಕಿಸಾನ್ ಯೋಜನೆಯನ್ನು 2018 ರಲ್ಲಿ ಆರಂಭಿಸಲಾಯಿತು.


ಇದನ್ನೂ ಓದಿ : LPG Cylinder Booking ಮೇಲೆ ಬಂಪರ್ ಕೊಡುಗೆ! 2700 ರೂ.ಗಳ ಲಾಭದ ಜೊತೆಗೆ ಇನ್ನೂ ಹಲವು ಪ್ರಯೋಜನ


ಪಿಎಂ ಕಿಸಾನ್ ಯೋಜನೆ ಅದ್ಭುತವಾದ ಯೋಜನೆ


ಈ ಯೋಜನೆಯಡಿ, ವಾರ್ಷಿಕ 6000 ರೂ.ಗಳನ್ನು ಫಲಾನುಭವಿ ರೈತ ಕುಟುಂಬಗಳಿಗೆ ಅವರ ಬ್ಯಾಂಕ್ ಖಾತೆ(Bank Account)ಗಳಿಗೆ ವರ್ಗಾಯಿಸಲಾಗುತ್ತದೆ. ಈ ಮೊತ್ತವನ್ನು 2000-2000 ರೂ.ಗಳ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ. ಈ ಯೋಜನೆಯಡಿ, 1.38 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಗೌರವ ಧನವನ್ನು ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.