Bank Holidays List: ಸೆಪ್ಟೆಂಬರ್‌ನಲ್ಲಿ 12 ದಿನ ಬ್ಯಾಂಕ್‌ಗಗಳಿಗೆ ರಜೆ, ಮನೆಯಿಂದ ಹೊರಡುವ ಮುನ್ನ ಈ ಪಟ್ಟಿಯನ್ನು ಪರಿಶೀಲಿಸಿ

Bank Holidays List: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸುದ್ದಿ ಇದೆ. ಆರ್‌ಬಿಐನ ರಜಾ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕುಗಳು ಒಟ್ಟು 12 ದಿನಗಳವರೆಗೆ ಮುಚ್ಚಲ್ಪಡುತ್ತವೆ.

Written by - Yashaswini V | Last Updated : Aug 28, 2021, 08:30 AM IST
  • ಬ್ಯಾಂಕಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಕೆಲಸಗಳನ್ನು ತ್ವರಿತವಾಗಿ ನಿಭಾಯಿಸಿ
  • ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕುಗಳು ಒಟ್ಟು 12 ದಿನಗಳವರೆಗೆ ಮುಚ್ಚಲ್ಪಡುತ್ತವೆ
  • ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಯಾವುದೇ ಅಡಚಣೆ ಇರುವುದಿಲ್ಲ
Bank Holidays List: ಸೆಪ್ಟೆಂಬರ್‌ನಲ್ಲಿ 12 ದಿನ ಬ್ಯಾಂಕ್‌ಗಗಳಿಗೆ ರಜೆ, ಮನೆಯಿಂದ ಹೊರಡುವ ಮುನ್ನ ಈ ಪಟ್ಟಿಯನ್ನು ಪರಿಶೀಲಿಸಿ title=
Bank Holidays in September 2021

ನವದೆಹಲಿ: ಇನ್ನೇನು ಆಗಸ್ಟ್ ತಿಂಗಳು ಮುಗಿಯುತ್ತಾ ಬಂದಿದೆ. ಮುಂದಿನ ತಿಂಗಳು ಎಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅಧಿಕ ರಜಾ ದಿನಗಳು ಸಿಗಲಿದೆ. ಬ್ಯಾಂಕ್ ಉದ್ಯೋಗಿಗಳು ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 12 ರಜಾದಿನಗಳನ್ನು ಆನಂದಿಸಬಹುದು. ಆದರೆ ಬ್ಯಾಂಕ್ ಗ್ರಾಹಕರು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಹೊಂದಿದ್ದರೆ ಅದನ್ನು ತ್ವರಿತವಾಗಿ ನಿಭಾಯಿಸಿ. ಇಲ್ಲದಿದ್ದರೆ ನೀವು ತೊಂದರೆ ಎದುರಿಸಬೇಕಾಗಬಹುದು. 

ಸೆಪ್ಟೆಂಬರ್ ನಲ್ಲಿ 12 ಬ್ಯಾಂಕ್ ರಜೆ ಇರುತ್ತದೆ:
ಭಾರತೀಯ ರಿಸರ್ವ್ ಬ್ಯಾಂಕ್ ( ಆರ್‌ಬಿಐ) ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಒಟ್ಟು 7 ಬ್ಯಾಂಕ್ ರಜೆಗಳು (Bank Holidays in September 2021) ಇರಲಿವೆ. ಅಂದಹಾಗೆ, ಈ ಇಡೀ ಭಾರತದಲ್ಲಿ ರಜಾದಿನಗಳು ಒಂದೇ ಆಗಿರುವುದಿಲ್ಲ. ಹಲವು ರಾಜ್ಯಗಳು ಕೆಲವು ವಿಶೇಷ ರಜಾದಿನಗಳನ್ನು ಸಹ ಹೊಂದಿವೆ. ಇದರ ಹೊರತಾಗಿ, ಸೆಪ್ಟೆಂಬರ್‌ನಲ್ಲಿ ಬ್ಯಾಂಕುಗಳು ಒಟ್ಟು 6 ವಾರದ ರಜೆ ಕೂಡ ಇರಲಿದೆ. ಎಲ್ಲವನ್ನೂ ಸೇರಿ ಒಟ್ಟು 12 ರಜಾದಿನಗಳಿವೆ. 

ಇದನ್ನೂ ಓದಿ- IRCTC ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ! ಈಗ ಈ ಕೆಲಸ ಮಾಡಿದರಷ್ಟೇ ಸೀಟ್ ರಿಸರ್ವೇಶನ್ ಸಾಧ್ಯ!

ರಜಾದಿನಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ಪರಿಶೀಲಿಸಿ:
ಸೆಪ್ಟೆಂಬರ್ 5 - ಭಾನುವಾರ
ಸೆಪ್ಟೆಂಬರ್ 8 - ಶ್ರೀಮಂತ ಸಂಕರದೇವ ತಿಥಿ (ಗುವಾಹಟಿ)
ಸೆಪ್ಟೆಂಬರ್ 9  - ತೀಜ್ ಹರಿತಾಲಿಕಾ (ಗ್ಯಾಂಗ್ಟಾಕ್)
ಸೆಪ್ಟೆಂಬರ್ 10 - ಗಣೇಶ ಚತುರ್ಥಿ/ವಿನಾಯಕ ಚತುರ್ಥಿ/ವರಸಿದ್ಧಿ ವಿನಾಯಕ ವ್ರತ (ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗಪುರ, ಪಣಜಿ)
ಸೆಪ್ಟೆಂಬರ್ 11 - ತಿಂಗಳ ಎರಡನೇ ಶನಿವಾರ / ಗಣೇಶ ಚತುರ್ಥಿಯ ಎರಡನೇ ದಿನ (ಪಣಜಿ)
ಸೆಪ್ಟೆಂಬರ್ 12 - ಭಾನುವಾರ
ಸೆಪ್ಟೆಂಬರ್ 17 - ಕರ್ಮ ಪೂಜೆ (ರಾಂಚಿ)
ಸೆಪ್ಟೆಂಬರ್ 19 - ಭಾನುವಾರ
ಸೆಪ್ಟೆಂಬರ್ 20  - ಇಂದ್ರಜಾತ್ರೆ (ಗ್ಯಾಂಗ್ಟಾಕ್)
ಸೆಪ್ಟೆಂಬರ್ 21 - ಶ್ರೀ ನಾರಾಯಣ ಗುರು ಸಮಾಧಿ ದಿನ (ಕೊಚ್ಚಿ, ತಿರುವನಂತಪುರಂ)
ಸೆಪ್ಟೆಂಬರ್ 25 - ತಿಂಗಳ ನಾಲ್ಕನೇ ಶನಿವಾರ
ಸೆಪ್ಟೆಂಬರ್ 26  - ಭಾನುವಾರ

ಇದನ್ನೂ ಓದಿ- Post Office Schemes : ಅತ್ಯುತ್ತಮ ಬಡ್ಡಿ ನೀಡುವ ಟಾಪ್ 5 Post Office ಯೋಜನೆಗಳಿವು

ಆನ್‌ಲೈನ್ ಬ್ಯಾಂಕಿಂಗ್‌ಗೆ ಯಾವುದೇ ಅಡಚಣೆಯಾಗುವುದಿಲ್ಲ:
ಆದಾಗ್ಯೂ, ಈ ಸಮಯದಲ್ಲಿ ಆನ್ಲೈನ್ ​​ಬ್ಯಾಂಕಿಂಗ್ (Online Banking) ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದರರ್ಥ ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ಅವರು ಎಂದಿನಂತೆ ಹಣ ಇತ್ಯಾದಿಗಳನ್ನು ವರ್ಗಾಯಿಸಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News