ನವದೆಹಲಿ: ಹೋಳಿ ಹಬ್ಬಕ್ಕಿಂತ ಮೊದಲು ಮೋದಿ ಸರ್ಕಾರ ರೈತರಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 7 ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗೆ ವರ್ಗಾಯಿಸುತ್ತಿದೆ. ಕೆಲ ರೈತರಿಗೆ ಈಗಾಗಲೇ 7ನೇ ಕಂತಿನ ಹಣ ಸಿಕ್ಕಿದೆ. ಆದ್ರೆ ಮತ್ತೆ ಕೆಲ ರೈತರ ಖಾತೆಗೆ ಹಣ ವರ್ಗಾವಣೆಯಾಗಿರಲಿಲ್ಲ. ಈಗ ಹಣ ಖಾತೆಗೆ ಬರಲು ಶುರುವಾಗಿದೆ.


COMMERCIAL BREAK
SCROLL TO CONTINUE READING

ರೈತರ ಖಾತೆಯನ್ನು ಪರಿಶೀಲಿಸಿ ಹಣ ವರ್ಗಾವಣೆ ಮಾಡಲಾಗ್ತಿದೆ. ಕೆಲ ರೈತರು ಕಿಸಾನ್ ಸಮ್ಮಾನ್ ನಿಧಿ(Kisan Samman Nidhi)ಯ ಲಾಭ ಪಡೆಯಲು ಸುಳ್ಳು ಮಾಹಿತಿ ನೀಡಿದ್ದರು. ಹಾಗಾಗಿ ಎಲ್ಲ ರೈತರ ದಾಖಲೆ ಪರಿಶೀಲನೆ ನಡೆಸಿ, ಸರ್ಕಾರ ಹಣ ವರ್ಗಾವಣೆ ಮಾಡ್ತಿದೆ. ಸುಳ್ಳು ದಾಖಲೆ ನೀಡಿದ ರೈತರ ಖಾತೆಯಿಂದ ಹಣ ವಾಪಸ್ ಪಡೆಯುತ್ತಿದೆ.


RSS Sarakaryavaah ಹುದ್ದೆಗೆ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ನೇಮಕ


ಮುಂದಿನ ತಿಂಗಳು, ಏಪ್ರಿಲ್ 1ರಿಂದ ಕಿಸಾನ್ ಸಮ್ಮಾನ್ ನಿಧಿ ಖಾತೆಗೆ ಎಂಟನೇ ಕಂತಿನ ಹಣ(8th Installment Money) ವರ್ಗಾವಣೆಯಾಗಲಿದೆ. ಹೋಳಿ ಮುಗಿದ ನಂತ್ರ ವಿತ್ತೀಯ ವರ್ಷ ಶುರುವಾಗಲಿದ್ದು, ಮೋದಿ ಸರ್ಕಾರ 2 ಸಾವಿರ ರೂಪಾಯಿಯನ್ನು ಖಾತೆಗೆ ವರ್ಗಾಯಿಸಲಿದೆ. ಈ ಯೋಜನೆಯಲ್ಲಿ ಸರ್ಕಾರ 6 ಸಾವಿರ ರೂಪಾಯಿಯನ್ನು ಪ್ರತಿ ವರ್ಷ ರೈತರ ಖಾತೆಗೆ ವರ್ಗಾಯಿಸುತ್ತಿದೆ. ಇದನ್ನು ಹೆಚ್ಚು ಮಾಡಲಾಗುತ್ತೆ ಎಂಬ ಸುದ್ದಿಯಿತ್ತು. ಈ ವದಂತಿಯನ್ನು ಕೃಷಿ ಸಚಿವರು ತಳ್ಳಿ ಹಾಕಿದ್ದಾರೆ.


BJP Whip - ಲೋಕಸಭಾ ಸಂಸದರಿಗೆ ವ್ಹಿಪ್ ಜಾರಿ ಮಾಡಿದ BJP, ಮಾರ್ಚ್ 22 ರಂದು ಈ ಮಹತ್ವದ ಬಿಲ್ ಜಾರಿ ಸಾಧ್ಯತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.