RSS Sarakaryavaah - ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಂದರೆ RSS, ದತ್ತಾತ್ರೇಯ ಹೊಸಬಾಳೆ ಅವರನ್ನು ತನ್ನ ನೂತನ ಸರಕಾರ್ಯವಾಹ್ ಆಗಿ ಆಯ್ಕೆ ಮಾಡಿದೆ. ಹೀಗಾಗಿ ದತ್ತಾತ್ರೇಯ ಹೊಸಬಾಳೆ ಅವರು ಭೈಯಾಜಿ ಜೋಶಿ (Bhaiyaji Joshi) ಅವರ ಸ್ಥಾನವನ್ನು ತುಂಬಲಿದ್ದಾರೆ. ಸಂಘದ ಪ್ರತಿನಿಧಿ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರ ಹೆಸರಿನ ಮೇಲೆ ಮುದ್ರೆ ಒತ್ತಲಾಗಿದೆ. ಇದಕ್ಕೂ ಮೊದಲು ದತ್ತಾತ್ರೇಯ RSS ನ ಸಹ-ಸಹಕಾರ್ಯವಾಹ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2009ರಲ್ಲಿ ಭೈಯಾಜಿ ಜೋಶಿ RSS ಸರಕಾರ್ಯವಾಹ್ ಆಗಿ ನೇಮಕಗೊಂಡಿದ್ದರು. ಬಳಿಕ ಅವರು ಮೂರು-ಮೂರು ವರ್ಷಗಳ ಮೂರು ಅವಧಿಗಾಗಿ ಸರಕಾರ್ಯವಾಹ್ ಆಗಿ ನೇಮಕಗೊಂಡಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (Rashtriya Swayam Sevak Sangh)ದಲ್ಲಿ ಪ್ರತಿ ಮೂರುವರ್ಷಗಳಿಗೊಮ್ಮೆ ಸರಕಾರ್ಯವಾಹ್ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. RSS ನಲ್ಲಿ ಸರಕಾರ್ಯವಾಹ್ ಇದು ಎರಡನೇ ಅತಿ ದೊಡ್ಡ ಹುದ್ದೆ ಎಂದು ಪರಿಗಣಿಸಲಾಗುತ್ತದೆ. ಇದು ಸಂಘಟನೆಯಲ್ಲಿ ಕಾರ್ಯದರ್ಶಿ ಹುದ್ದೆಯಾಗಿರುತ್ತದೆ. ಸರಸಂಘಚಾಲಕರ ಹುದ್ದೆ ಮಾರ್ಗದರ್ಶಕರ ಹುದ್ದೆಯಾಗಿರುತ್ತದೆ.
ಇದನ್ನೂ ಓದಿ-RSS On United India - ಅಖಂಡ ಭಾರತ ಬಲದಿಂದಲ್ಲ , ಧರ್ಮದಿಂದ ಮಾತ್ರ ಸಂಭವ: RSS
ದತ್ತಾತ್ರೇಯ ಹೊಸಬಾಳೆ ಅವರ ಸಂಕ್ಷಿಪ್ತ ವಿವರ
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬದ RSS ಕಾರ್ಯಕರ್ತನ ಮನೆಯಲ್ಲಿ ಜನಿಸಿರುವ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅವರು ಬಳಿಕ ಇಂಡಿಯನ್ ಪಾಲಸಿ ಫೌಂಡೇಶನ್ ಹೆಸರಿನ NGOನ ಸಂಸ್ಥಾಪಕ ಸದಸ್ಯರಾಗಿದ್ದಾರೆ. 1968 ರಲ್ಲಿ RSS ಸೇರಿದ ಹೊಸಬಾಳೆ ಬಳಿಕ 1972 ರಲ್ಲಿ ABVP ಸೇರಿದರು. 1975 ರಿಂದ 1977 ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ MISA (Maintenance of Internal Security Act) ಅಡಿ ಬಂಧನಕ್ಕೆ ಒಳಗಾಗಿ 17 ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದಾರೆ. ಬಳಿಕ 1978 ರಲ್ಲಿ ABVPಯ ಪೂರ್ಣಾವಧಿ ಸಂಘಟಕರಾಗಿ ಕೆಲಸ ಮಾಡಿ, ಸಂಘಟನೆಯ ಜನರಲ್ ಸೆಕ್ರೆಟರಿ ಆಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ-ಕೆಲವರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ದೂಷಿಸುವುದು ಉಚಿತವಲ್ಲ: ಮೋಹನ್ ಭಾಗವತ್
ಅಸ್ಸಾಂನ ಗುವಾಹಾಟಿಯ ಯೂಥ್ ಡೆವಲಪ್ಮೆಂಟ್ ಸೆಂಟರ್ ಸ್ಥಾಪಿಸುವಲ್ಲಿ ಮಹತ್ವದ ಕೊಡುಗೆ ನೀಡಿರುವ ದತ್ತಾತ್ರೇಯ ಹೊಸಬಾಳೆ, ಕನ್ನಡ ಮಾಸಿಕ ಪತ್ರಿಕೆಯಾಗಿರುವ 'ಅಸೀಮ'ನ ಸಂಸ್ಥಾಪಕ ಸಂಪಾದಕರಾಗಿದ್ದಾರೆ. 2004 ರಲ್ಲಿ ಸಂಘದ ಸಹ-ಬೌದ್ಧಿಕ ಪ್ರಮುಖರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು ಹಾಗೂ ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು.
ಇದನ್ನೂ ಓದಿ-'ರಾಷ್ಟ್ರೀಯತೆ ಎಂದರೆ ಹಿಟ್ಲರನ ನಾಜಿಸಂ' ಎಂದರ್ಥ ಆದ್ದರಿಂದ ಇದನ್ನು ಬಳಸಬೇಡಿ-ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.