ನವದೆಹಲಿ: ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ಸಮ್ಮಾನ್ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುವ ತಯಾರಿ ನಡೆಸಿದೆ. 7ನೇ ಕಂತಿನ ಹಣ ವರ್ಗಾವಣೆ ಡಿಸೆಂಬರ್ 1ರಿಂದ ಆರಂಭವಾಗಲಿದೆ. ಆದರೆ 25 ದಿನಗಳ ನಂತರ ಫಲಾನುಭವಿಗಳ ಖಾತೆಗೆ 2000 ರೂ. ಬರಲಿದೆ.


COMMERCIAL BREAK
SCROLL TO CONTINUE READING

ಪಿಎಂ ಕಿಸಾನ್ (PM KISAN) ಯೋಜನೆಯಡಿ ವಾರ್ಷಿಕವಾಗಿ 6000 ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಈವರೆಗೆ 6 ಕಂತುಗಳನ್ನು ರೈತರಿಗೆ ಕಳುಹಿಸಲಾಗಿದೆ. ಕಳೆದ 23 ತಿಂಗಳಲ್ಲಿ 11.17 ಕೋಟಿ ರೈತರಿಗೆ ಕೇಂದ್ರ ಸರ್ಕಾರ ನೇರವಾಗಿ 95 ಕೋಟಿ ರೂಪಾಯಿ ನೀಡಿದೆ.


ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರ ನಡುವೆ ಬರುತ್ತದೆ. ಎರಡನೇ ಕಂತು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ಮತ್ತು ಮೂರನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರ ನಡುವೆ ಬರುತ್ತದೆ. 


PM Kisan: ನೀವು ನವೆಂಬರ್ ಕಂತನ್ನು ಪಡೆಯುವ ಮೊದಲು ಈ ಕೆಲಸ ಮಾಡಿ, ಇಲ್ಲವೇ...


ದಾಖಲೆಗಳು ಸರಿಯಾಗಿದ್ದರೆ, ಎಲ್ಲಾ 11.17 ಕೋಟಿ ನೋಂದಾಯಿತ ರೈತರಿಗೂ ಏಳನೇ ಕಂತಿನ ಲಾಭ ಸಿಗಲಿದೆ. ಫಲಾನುಭವಿಗಳು ದಾಖಲೆಯನ್ನು ಪರಿಶೀಲಿಸಬೇಕಾದ ಅಗತ್ಯತೆಯಿದೆ.


PM Kisan: ಯಾವುದೇ ಕಾರಣದಿಂದ ರೈತರ ಖಾತೆಗೆ ರೂ.2000 ಬರದಿದ್ದರೆ ಚಿಂತೆ ಬಿಟ್ಟು ಈ ಕೆಲಸ ಮಾಡಿ..


ಅರ್ಜಿ ಸಲ್ಲಿಸಿದ 1.3 ಕೋಟಿ ರೈತರಿಗೆ (Farmers) ಹಣ ಬಂದಿಲ್ಲ. ತಪ್ಪು ದಾಖಲಾತಿ ಹಾಗೂ ಆಧಾರ್ ಕಾರ್ಡ್ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ. ನಿಮ್ಮ ಮಾಹಿತಿಗಳನ್ನು ಸರಿಪಡಿಸಲು ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಲಾಗಿನ್ ಆಗಬೇಕು.  ಅಲ್ಲಿ ಫಾರ್ಮರ್ಸ್ ಕಾರ್ನರ್ (Farmers Corner) ಟ್ಯಾಬ್ ಕ್ಲಿಕ್ ಮಾಡಬೇಕು. ಈಗಾಗಲೇ ಅರ್ಜಿ ಸಲ್ಲಿಸಿದ್ದು, ಆಧಾರ್ ಸರಿಯಾಗಿ ಅಪ್‌ಲೋಡ್ ಮಾಡದಿದ್ದರೆ ಅಥವಾ ಕೆಲವು ಕಾರಣಗಳಿಂದಾಗಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಇಲ್ಲಿ ನಿಮ್ಮ ಮಾಹಿತಿಯನ್ನು ಸರಿಪಡಿಸಬಹುದು. ಇನ್ನೂ ನಿಮ್ಮ ಹೆಸರು ನೋಂದಾಯಿಸದಿದ್ದರೆ ಇಲ್ಲಿಯೇ ನೀವು ಯೋಜನೆಗೆ ಹೆಸರು ನೋಂದಾಯಿಸಬಹುದು.