ನವದೆಹಲಿ : ದೀಪಾವಳಿ ಹಬ್ಬದ ಸಂಧರ್ಭದಲ್ಲಿ ರೈತರಿಗೆ ಸಿಹಿ ಸುದ್ದಿ ಸಿಗಲಿದೆ. ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನ ಡಬಲ್ ಮಾಡಬಬಹುದು. ಈ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿದರೆ, ರೈತರಿಗೆ ವಾರ್ಷಿಕವಾಗಿ 6000 ಬದಲಿಗೆ 12000 ರೂ. ಸಿಗಲಿದೆ.


COMMERCIAL BREAK
SCROLL TO CONTINUE READING

ಕಿಸಾನ್ ಯೋಜನೆ(PM Kisan Samman Nidhi Yojana)ಯ ಮೊತ್ತವನ್ನು ದ್ವಿಗುಣಗೊಳಿಸಿದರೆ, ರೈತರ ಕಂತನ್ನು 2000 ದಿಂದ 4000 ಕ್ಕೆ ಹೆಚ್ಚಾಗುತ್ತದೆ. 2021ರ ದೀಪಾವಳಿಗೂ ಮುನ್ನ ಕೇಂದ್ರದ ಮೋದಿ ಸರ್ಕಾರ ಇದನ್ನು ಘೋಷಿಸಬಹುದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ : Viral Video: ನೋಡುಗರ ಎದೆ ಝಲ್ ಎನ್ನಿಸುವಂತಿದೆ ಈ ದೈತ್ಯ ಹೆಬ್ಬಾವು..!


ರೈತರಿಗೆ ಉಡುಗೊರೆ ಸಿಗಲಿದೆ!


ಇತ್ತೀಚೆಗೆ, ಬಿಹಾರದ ಕೃಷಿ ಸಚಿವ ಅಮರೇಂದ್ರ ಪ್ರತಾಪ್ ಸಿಂಗ್ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್(Narendra Singh Tomar) ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು ನಂತರ ಮಾಧ್ಯಮಗಳಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಮೊತ್ತವನ್ನು ದ್ವಿಗುಣಗೊಳಿಸಲಾಗುವುದು ಎಂದು ಹೇಳಿದರು. ಅಂದಿನಿಂದ, ಪಿಎಂ ಕಿಸಾನ್ ಮೊತ್ತವನ್ನು ದ್ವಿಗುಣಗೊಳಿಸುವ ಊಹಾಪೋಹ ಹೆಚ್ಚುತ್ತಿದೆ, ಅದಕ್ಕಾಗಿ ಸರ್ಕಾರವು ಸಂಪೂರ್ಣ ಸಿದ್ಧತೆಗಳನ್ನು ಮಾಡಿದೆ.


ಭಾರತ ಸರ್ಕಾರದ ಪಿಎಂ ಕಿಸಾನ್ ಯೋಜನೆಗಾಗಿ ಮೊಬೈಲ್ ಆಪ್


ನೀವು ಅದರ ವಿವರಗಳನ್ನು ಪಿಎಂ ಕಿಸಾನ್ ನ ಆನ್ಲೈನ್ ​​ಪೋರ್ಟಲ್ www.pmkisan.gov.in ಅಥವಾ ಮೊಬೈಲ್ ಆಪ್ ಮೂಲಕ ಪರಿಶೀಲಿಸಬಹುದು. ಅದರ ವ್ಯಾಪ್ತಿಯನ್ನು ವಿಸ್ತರಿಸಲು, NIC (ರಾಷ್ಟ್ರೀಯ ಮಾಹಿತಿ ಕೇಂದ್ರ) ಒಂದು ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಿದೆ.


ನೀವು ಈ ರೀತಿ ನೋಂದಾಯಿಸಿಕೊಳ್ಳಬಹುದು


ನಿಮ್ಮ ಹತ್ತಿರದ ಅಂಚೆ ಕಛೇರಿಯ CSC ಸೆಂಟರ್ ಗೆ ಭೇಟಿ ನೀಡುವ ಮೂಲಕ ನೀವು ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ, ನೀವು ಕಿಸಾನ್ ಪಿಎಂ ಕಿಸಾನ್(PM Kisan) ಯೋಜನೆಯ ಅಧಿಕೃತ ವೆಬ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಪಿಎಂ ಕಿಸಾನ್ GOI ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು 'ಗೂಗಲ್ ಪ್ಲೇ ಸ್ಟೋರ್'ಗೆ ಹೋಗಿ ಅದನ್ನು ಡೌನ್‌ಲೋಡ್ ಮಾಡಿ. ಅದರ ಭಾಷೆಯನ್ನು ನಿಮ್ಮ ಸ್ಥಳೀಯ ಭಾಷೆಗೆ ಅನುವಾದಿಸಬಹುದು ಎಂಬುದು ಗಮನಿಸಬೇಕಾದ ಸಂಗತಿ.


ಇದನ್ನೂ ಓದಿ : ಉತ್ತರಾಖಂಡದಲ್ಲಿ ಹಿಮದುರಂತ: ದಾರಿತಪ್ಪಿದ್ದ 17 ಚಾರಣಿಗರಲ್ಲಿ 11 ಮಂದಿ ಶವವಾಗಿ ಪತ್ತೆ


ಹೊಸ ರೈತ ನೋಂದಣಿಯ ಮೇಲೆ ಕ್ಲಿಕ್ ಮಾಡಿ


1. ಈಗ ನೀವು ಅದರಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ನಮೂದಿಸಿ. ಅದರ ನಂತರ ಮುಂದುವರಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.
2. ಮುಂದೆ, ಹೆಸರು, ವಿಳಾಸ, ಬ್ಯಾಂಕ್ ಖಾತೆ ವಿವರಗಳು, IFSC ಕೋಡ್ ಇತ್ಯಾದಿಗಳನ್ನು ನೋಂದಣಿ ನಮೂನೆಯಲ್ಲಿ ಸರಿಯಾಗಿ ನಮೂದಿಸಿ.
3. ಇದರ ನಂತರ ನಿಮ್ಮ ಜಮೀನಿನ ವಿವರಗಳಾದ ಖಾಸ್ರಾ ಸಂಖ್ಯೆ, ಖಾತೆ ಸಂಖ್ಯೆ ಇತ್ಯಾದಿಗಳನ್ನು ನಮೂದಿಸಿ ಮತ್ತು ಎಲ್ಲಾ ಮಾಹಿತಿಯನ್ನು ಉಳಿಸಿ.
4. ಈಗ ಮತ್ತೆ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಇದರೊಂದಿಗೆ, ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಿಮ್ಮ ನೋಂದಣಿ ಪೂರ್ಣಗೊಳ್ಳುತ್ತದೆ.
5. ಯಾವುದೇ ರೀತಿಯ ವಿಚಾರಣೆಗಾಗಿ ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ 155261/011-24300606 ಅನ್ನು ಬಳಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ