ಉತ್ತರಾಖಂಡದಲ್ಲಿ ಹಿಮದುರಂತ: ದಾರಿತಪ್ಪಿದ್ದ 17 ಚಾರಣಿಗರಲ್ಲಿ 11 ಮಂದಿ ಶವವಾಗಿ ಪತ್ತೆ

ಕಾಣೆಯಾಗಿರುವ ಇನ್ನುಳಿದವರನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಶೋಧ ಕಾರ್ಯವನ್ನು ಎಎಲ್​ಎಚ್​ ಸಿಬ್ಬಂದಿ ಮುಂದುವರಿಸಿದ್ದಾರೆ. ರಕ್ಷಣಾ ತಂಡಗಳು ಸ್ಥಳೀಯ ಪೊಲೀಸರಿಗೆ ಶವಗಳನ್ನು ಹಸ್ತಾಂತರಿಸಿವೆ.

Written by - Puttaraj K Alur | Last Updated : Oct 23, 2021, 10:07 AM IST
  • ಪ್ರತಿಕೂಲ ಹವಾಮಾನದಿಂದ ಉತ್ತರಾಖಂಡದಲ್ಲಿ ಭಾರೀ ಪ್ರಮಾಣದ ಹಿಮಪಾತವಾಗಿದೆ
  • ಅ.18ರಂದು ದಾರಿತಪ್ಪಿದ್ದ 17 ಚಾರಣಿಗರ ಪೈಕಿ 11 ಮಂದಿ ಶವವಾಗಿ ಪತ್ತೆಯಾಗಿದ್ದಾರೆ
  • ಸಮುದ್ರ ಮಟ್ಟದಿಂದ 17,000 ಅಡಿ ಎತ್ತರವಿರುವ ಲಂಖಗಾ ಪಾಸ್​ನಲ್ಲಿ ನಡೆದಿರುವ ದುರ್ಘಟನೆ
ಉತ್ತರಾಖಂಡದಲ್ಲಿ ಹಿಮದುರಂತ: ದಾರಿತಪ್ಪಿದ್ದ 17 ಚಾರಣಿಗರಲ್ಲಿ 11 ಮಂದಿ ಶವವಾಗಿ ಪತ್ತೆ

ನವದೆಹಲಿ: ಪ್ರತಿಕೂಲ ಹವಾಮಾನದಿಂದ ಉಂಟಾಗಿದ್ದ ಭಾರೀ ಪ್ರಮಾಣದ ಹಿಮಪಾತ(Uttarakhand Snowfall)ದಿಂದ ಅ.18ರಂದು ದಾರಿ ತಪ್ಪಿದ್ದ 17 ಚಾರಣಿಗರ ಪೈಕಿ 11 ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಮೃತದೇಹಗಳನ್ನು ವಶಕ್ಕೆ ಪಡೆದಿರುವ ವಾಯುಪಡೆ ಸಿಬ್ಬಂದಿ ತಮ್ಮ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ದುರ್ಘಟನೆಯು ಸಮುದ್ರ ಮಟ್ಟದಿಂದ 17,000 ಅಡಿ ಎತ್ತರವಿರುವ ಉತ್ತರಾಖಂಡದ ಲಂಖಗಾ ಪಾಸ್​(Lamkhaga Pass)ನಲ್ಲಿ ನಡೆದಿದೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯನ್ನು ಉತ್ತರಾಖಂಡದ ಹರ್ಸಿಲ್‌ನೊಂದಿಗೆ ಸಂಪರ್ಕಿಸುವ ಅತ್ಯಂತ ಅಪಾಯಕಾರಿ ಪಾಸ್‌ಗಳಲ್ಲಿ ಒಂದಾದ ಲಮ್‌ಖಗಾ ಪಾಸ್‌ಗೆ ಹೋಗುವ ಪ್ರದೇಶದಿಂದ ಇದುವರೆಗೆ 11 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Petrol price Today : ಗಗನದತ್ತ ಮುಖ ಮಾಡಿದ ಇಂಧನ ದರ : ರಾಜ್ಯದಲ್ಲಿ 100 ರ ಗಡಿ ದಾಟಿದ ಪೆಟ್ರೋಲ್-ಡೀಸೆಲ್ ಬೆಲೆ

ಅ.18ರಂದು ಮಾರ್ಗದರ್ಶಕ, ಹಮಾಲರು ಮತ್ತು ಪ್ರವಾಸಿಗರು(Trekkers) ಸೇರಿ 17 ಮಂದಿ ಚಾರಣಕ್ಕೆ ತೆರಳಿದ್ದರು. ಆದರೆ ಪ್ರತಿಕೂಲ ಹವಾಮಾನದಿಂದ ಉಂಟಾದ ಹಿಮಪಾತದಿಂದ ಇವರೆಲ್ಲರೂ ದಾರಿತಪ್ಪಿ ನಾಪತ್ತೆಯಾಗಿದ್ದರು. ಅ.20ರಂದು ಅಧಿಕಾರಿಗಳು ಮಾಡಿದ ತುರ್ತು ಕರೆಗೆ ಸ್ಪಂದಿಸಿದ ಭಾರತೀಯ ವಾಯುಪಡೆಯು ರಾಜ್ಯದ ಪ್ರವಾಸಿ ಗಿರಿಧಾಮವಾದ ಹರ್ಸಿಲ್ ತಲುಪಲು ಎರಡು ಸುಧಾರಿತ ಲಘು ಹೆಲಿಕಾಪ್ಟರ್(ALH) ಅನ್ನು ಘಟನಾ ಸ್ಥಳಕ್ಕೆ ತೆರಳಲು ಬಳಸಿತ್ತು.

ಅಕ್ಟೋಬರ್ 20 ರಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಮೂವರು ಸಿಬ್ಬಂದಿಯೊಂದಿಗೆ ALH ಕ್ರಾಫ್ಟ್‌ ನಲ್ಲಿ ಮಧ್ಯಾಹ್ನ 19,500 ಅಡಿಗಳ ಗರಿಷ್ಠ ಎತ್ತರದಲ್ಲಿ ನಾಪತ್ತೆಯಾಗಿದ್ದವರ ಹುಡುಕಾಟ ಮತ್ತು ರಕ್ಷಣೆ ಕಾರ್ಯಾಚರಣೆ ಪ್ರಾರಂಭವಾಯಿತು. ಮರುದಿನ ಇದಕ್ಕೆ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಕೂಡ ಕೈಜೋಡಿಸಿತ್ತು. ಅ.21ರಂದು 15,700 ಅಡಿ ಎತ್ತರದಲ್ಲಿ 4 ಮೃತದೇಹಗಳು ಪತ್ತೆಯಾದರೆ, ಅ.22ರಂದು 16,500 ಅಡಿ ಎತ್ತರದಲ್ಲಿ ಮತ್ತೆ 5 ಮೃತದೇಹಗಳನ್ನು ವಶಕ್ಕೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿಯನ್ನು ಕೂಡ ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: Electric Scooter: ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು 50 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿವೆ

ಇನ್ನೂ ಎರಡು ಶವಗಳನ್ನು ಅದೇ ದಿನ(ಅ.22) ಪತ್ತೆ ಮಾಡಲಾಗಿದ್ದು, ಮೃತದೇಹಗಳನ್ನು ಡೋಗ್ರಾ ಸ್ಕೌಟ್ಸ್, 4 ಅಸ್ಸಾಂ ಮತ್ತು 2 ಐಟಿಬಿಪಿ ತಂಡಗಳ ಜಂಟಿ ಗಸ್ತು ಮೂಲಕ ನಿತಲ್ ತಾಚ್ ಶಿಬಿರಕ್ಕೆ ಮರಳಿ ತರಲಾಗಿದೆ. ಕಾಣೆಯಾಗಿರುವ ಇನ್ನುಳಿದವರನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಶೋಧ ಕಾರ್ಯವನ್ನು ಎಎಲ್​ಎಚ್​ ಸಿಬ್ಬಂದಿ ಮುಂದುವರಿಸಿದ್ದಾರೆ. ರಕ್ಷಣಾ ತಂಡಗಳು ಸ್ಥಳೀಯ ಪೊಲೀಸರಿಗೆ ಶವಗಳನ್ನು ಹಸ್ತಾಂತರಿಸಿವೆ. ಬದುಕುಳಿದವರನ್ನು ಉತ್ತರಕಾಶಿಯ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ಮೊದಲು ಹರ್ಸಿಲ್‌(Harsil Tourist Hill Station)ನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News