ನವದೆಹಲಿ: PM Kisan Tractor Yojana - ಕೇಂದ್ರದ ಪ್ರಧಾನಿ ನರೇಂದ್ರ ಮೋದಿ (PM Narendra Modi Government) ನೇತೃತ್ವದ ಸರ್ಕಾರ ದೇಶದ ಅನ್ನದಾತನಿಗೆ ಸಾಧ್ಯವಾದಷ್ಟು ಎಲ್ಲ ನೆರವನ್ನು ಒದಗಿಸುತ್ತಿದೆ. ರೈತರ ಆದಾಯವನ್ನು ಹೆಚ್ಚಿಸಲು, ಕೇಂದ್ರ ಸರ್ಕಾರವು ಒಂದರ ಮೇಲೊಂದರಂತೆ ಹಲವಾರು ಯೋಜನೆಗಳನ್ನು ನಡೆಸುತ್ತಿದೆ. ಈ ಸರಣಿಯಲ್ಲಿ ರೈತರಿಗೆ ಕೃಷಿಗೆ ಹಲವು ರೀತಿಯ ಯಂತ್ರಗಳು ಬೇಕಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ರೈತರಿಗೆ ಸಹಾಯ ಮಾಡಲು, ಕೇಂದ್ರ ಸರ್ಕಾರವು ಟ್ರ್ಯಾಕ್ಟರ್ ಖರೀದಿಗೆ ಸಬ್ಸಿಡಿ ನೀಡುವ ಯೋಜನೆಯನ್ನು ಆರಂಭಿಸಿದೆ. 'PM ಕಿಸಾನ್ ಟ್ರಾಕ್ಟರ್ ಯೋಜನೆ' (PM Kisan Tractor Yojana) ಅಡಿಯಲ್ಲಿ, ನೀವು ಯಾವುದೇ ಕಂಪನಿಯ ಟ್ರಾಕ್ಟರ್ ಖರೀದಿಸಬಹುದು. ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ರೈತರ ನೆರವಿಗೆ ಕಾರ್ಯತತ್ಪರ ಸರ್ಕಾರ (Modi Government)
ಕೃಷಿ ಕೆಲಸ ಕಾರ್ಯಗಳಿಗೆ ರೈತರ ಬಳಿ ಟ್ರ್ಯಾಕ್ಟರ್ ಇರುವುದು ಬಹಳ ಮುಖ್ಯ. ಆದರೆ ಭಾರತದಲ್ಲಿ ಹಣಕಾಸಿನ ಅಡಚಣೆಯಿಂದಾಗಿ ಟ್ರಾಕ್ಟರ್ ಇಲ್ಲದ ಹಲವು ರೈತರು ಇದ್ದಾರೆ. ಇಂತಹ ಸಂದಿಗ್ಧ ಸಂದರ್ಭಗಳಲ್ಲಿ, ಅವರು ಟ್ರಾಕ್ಟರ್‌ಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ ಅಥವಾ ಎತ್ತುಗಳನ್ನು ಬಳಸುತ್ತಾರೆ. ಇಂತಹ ರೈತರಿಗೆ, ಸರ್ಕಾರವು ರೈತರಿಗೆ ಸಹಾಯ ಮಾಡಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ (PM Kisan Tractor Yojana Benefits) ಅಡಿಯಲ್ಲಿ, ರೈತರಿಗೆ ಅರ್ಧ ದರದಲ್ಲಿ ಟ್ರಾಕ್ಟರುಗಳನ್ನು ನೀಡಲಾಗುತ್ತಿದೆ. 


ಇದನ್ನೂ ಓದಿ-ಕೋವಿಡ್ ಸಮಯದಲ್ಲಿ 80 ಕೋಟಿ ಭಾರತೀಯರಿಗೆ 'ಉಚಿತ ಪಡಿತರ' : ಪ್ರಧಾನಿ ಮೋದಿ


ಶೇ.50ರಷ್ಟು ಸಬ್ಸಿಡಿ ಸಿಗುತ್ತದೆ (PM Kisan Update)
ಕೇಂದ್ರ ಸರ್ಕಾರ ರೈತರಿಗೆ ಟ್ರಾಕ್ಟರ್ ಖರೀದಿಸಲು ಸಹಾಯಧನ  (PM Kisan Tractor Yojana) ನೀಡುತ್ತದೆ. ಇದರ ಅಡಿಯಲ್ಲಿ ರೈತರು ಯಾವುದೇ ಕಂಪನಿಯ ಟ್ರ್ಯಾಕ್ಟರ್ ಗಳನ್ನು ಅರ್ಧ ದರದಲ್ಲಿ ಖರೀದಿಸಬಹುದು. ಉಳಿದ ಅರ್ಧದಷ್ಟು ಹಣವನ್ನು ಸರ್ಕಾರವು ಸಬ್ಸಿಡಿಯಾಗಿ ನೀಡುತ್ತದೆ. ಇದರ ಹೊರತಾಗಿ, ಅನೇಕ ರಾಜ್ಯ ಸರ್ಕಾರಗಳು ತಮ್ಮದೇ ಮಟ್ಟದಲ್ಲಿ ರೈತರಿಗೆ ಟ್ರ್ಯಾಕ್ಟರ್‌ಗಳ ಮೇಲೆ 20 ರಿಂದ 50% ಸಬ್ಸಿಡಿಯನ್ನು ನೀಡುತ್ತಿವೆ.


ಇದನ್ನೂ ಓದಿ- Driving License : ಈಗ ನೀವು RTO ಕಚೇರಿಗೆ ಹೋಗಿ ಚಾಲನಾ ಪರೀಕ್ಷೆ ನೀಡುವ ಅಗತ್ಯವಿಲ್ಲ! DL ಅನ್ನು ಕೇವಲ ಒಂದು ಕ್ಲಿಕ್‌ನಲ್ಲಿ ಪಡೆಯಬಹುದು!


ಅಗತ್ಯವಿರುವ ದಾಖಲೆಗಳಾವುವು (PM Kisan)
ಈ ಸಬ್ಸಿಡಿಯನ್ನು ಸರ್ಕಾರವು ಕೇವಲ ಒಂದು ಟ್ರ್ಯಾಕ್ಟರ್ ಖರೀದಿಯ ಮೇಲೆ ಮಾತ್ರ ನೀಡುತ್ತದೆ. ಇದಕ್ಕಾಗಿ, ರೈತರು ಆಧಾರ್ ಕಾರ್ಡ್, ಭೂ ದಾಖಲೆಗಳು, ಬ್ಯಾಂಕ್ ವಿವರಗಳು, ಪಾಸ್‌ಪೋರ್ಟ್ ಗಾತ್ರದ ಫೋಟೋ ದಾಖಲೆಯ ರೂಪದಲ್ಲಿ ನೀಡಬೇಕು. ಈ ಯೋಜನೆಯಡಿ, ರೈತರು ಯಾವುದೇ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ (CSC Center) ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ-Indian Railways : ರೈಲು ಟಿಕೆಟ್ ಬುಕ್ ಮಾಡುವಾಗ ನೆನಪಿರಲಿ ಈ ಕೋಡ್ ಇಲ್ಲವಾದರೆ ಸಿಗುವುದಿಲ್ಲ ಸೀಟ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ