ನವದೆಹಲಿ: 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ'ಯ 7ನೇ ಕಂತು ಡಿಸೆಂಬರ್ 1 ಅಂದರೆ, ಇಂದಿನಿಂದ ರೈತರ ಖಾತೆಗೆ ಹಣ ಬರಲಿದೆ. ನೀವೂ ಸಹ ರೈತರಾಗಿದ್ರೆ, ಮತ್ತು ಈ ಕಂತಿಗಾಗಿ ನೀವು ಕಾಯುತ್ತಿದ್ದರೆ, ನೀವು ಕೆಲವು ವಿಷಯಗಳನ್ನ ಗಮನದಲ್ಲಿಟ್ಟುಕೊಳ್ಳಿ. ಇದು ಈ ಕಂತು ನಿಮ್ಮ ಖಾತೆಗೆ ತಲುಪುವಂತೆ ಮಾಡುತ್ತೆ.


COMMERCIAL BREAK
SCROLL TO CONTINUE READING

ಡಿಸೆಂಬರ್ 1ರಿಂದ ನಿಮ್ಮ ಖಾತೆ ಸೇರುತ್ತೆ 2000 ರೂಪಾಯಿ..! ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM Kisan Yojana)ಯಡಿ ಸರ್ಕಾರ ಪ್ರತಿ ವರ್ಷ 6 ಸಾವಿರ ರೂ.ಗಳನ್ನು ಅವರ ಖಾತೆಗೆ ಜಮಾ ಮಾಡುತ್ತದೆ. ಈವರೆಗೆ ರೈತರಿಗೆ 6 ಕಂತುಗಳನ್ನ ನೀಡಲಾಗಿದೆ. ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ ಮೊದಲ ಕಂತು 2018ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿತ್ತು.


ಈ ವೇಳೆ 3.15 ಕೋಟಿ, 99,629 ರೈತರಿಗೆ ಹಣ ವರ್ಗಾವಣೆ ಮಾಡಲಾಗಿದೆ. ಡಿಸೆಂಬರ್ 1ರಂದು 7ನೇ ಕಂತು ನೀಡಲಾಗುವುದು. ಕಳೆದ 23 ತಿಂಗಳಲ್ಲಿ ಕೇಂದ್ರ ಸರ್ಕಾರ 11.17 ಕೋಟಿ ರೈತರಿಗೆ 95 ಕೋಟಿ ರೂ.ಗೂ ಹೆಚ್ಚು ನೆರವು ನೀಡಿದೆ.


LPG Price: ಈ ಸಿಲಿಂಡರ್‌ಗಳ ಬೆಲೆ 55 ರೂಪಾಯಿಗಳವರೆಗೆ ಹೆಚ್ಚಳ


ರೀತಿ ಪಟ್ಟಿಯನ್ನು ಪರಿಶೀಲಿಸಿ: ಈ ಕಂತುಗಳು ಬರಬೇಕಾದರೆ ರೈತರು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಲವು ಬಾರಿ ನೋಂದಣಿ ಮಾಡಿದರೂ ಸರಕಾರದ ಕಂತು ಖಾತೆಗೆ ಜಮಾ ಆಗಿರೋದಿಲ್ಲ. ಆದ್ದರಿಂದ, ನಿಮ್ಮ ಹೆಸರು ಈ ಪಟ್ಟಿಯಲ್ಲಿಇದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತ್ವರಿತವಾಗಿ ಪರಿಶೀಲಿಸಿಕೊಳ್ಳಿ. ಪಟ್ಟಿಯಲ್ಲಿ ಹೆಸರು ಇದ್ದರೆ, ಹಣ ಖಾತೆಗೆ ಬರೋದು ಖಂಡಿತಾ. ಇನ್ನು ಪಟ್ಟಿಯಲ್ಲಿ ನಿಮ್ಮ ಹೆಸ್ರು ಇಲ್ಲದಿದ್ದರೆ ಹಣ ಬರುವುದಿಲ್ಲ.


ಬಿಜೆಪಿಗೆ ಸೆಡ್ಡು ಹೊಡೆಯಲು ದೀದಿಯಿಂದ 'ಹೊಸ ಆಸ್ತ್ರ'..!


ವೆಬ್ ಸೈಟ್ʼಗೆ ಭೇಟಿ ನೀಡುವ ಮೂಲಕ ನಿಮ್ಮ ಹೆಸರನ್ನು ಪರಿಶೀಲಿಸಿ..!


1. ಮೊದಲನೆಯದಾಗಿ ಪಿಎಂ ಕಿಸಾನ್ ಸಮನ್ ನಿಧಿಯ ಅಧಿಕೃತ ವೆಬ್ ಸೈಟ್ pmkisan.gov.in ಗೆ ಭೇಟಿ.


2. ಇದಾದ ನಂತರ, ಮೇಲ್ಭಾಗದಲ್ಲಿ ನೀವು ಫಾರ್ಮರ್ಸ್ ಕಾರ್ನರ್ ಅನ್ನು ನೋಡುತ್ತೀರಿ, ಅದನ್ನು .


3. ನಂತರ ಫಲಾನುಭವಿ ಸ್ಥಿತಿ ಮೇಲೆ .


4. ಈಗ ನೀವು ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.


UGC NET July 2020 ಫಲಿತಾಂಶ ಪ್ರಕಟ, nta.ac.in ಮೇಲೆ ಫಲಿತಾಂಶ ಪರಿಶೀಲಿಸಿ


ಈ ಪ್ರಕ್ರಿಯೆ ಮುಗಿದ ನಂತರ ಪರದೆಯ ಮೇಲೆ ಪಟ್ಟಿ ಕಾಣಿಸುತ್ತೆ. ಈಗ ನಿಮ್ಮ ಹೆಸರು ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಇದೆಯೋ ಅಥವಾ ಇಲ್ಲವೇ ಎಂಬುದನ್ನ ಚೆಕ್‌ ಮಾಡಿ. ನಿಮ್ಮ ಹೆಸರು ನೋಂದಾಯಿಸಲ್ಪಟ್ಟರೆ ಆಗ ನಿಮ್ಮ ಹೆಸರು ದೊರೆಯುತ್ತೆ.


ಈ ರಾಜ್ಯ ಸರ್ಕಾರದಿಂದ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ವಿತರಣೆ


ಮೊಬೈಲ್ ಆಪ್ ಮೂಲಕ ನಿಮ್ಮ ಹೆಸರನ್ನು ಪರಿಶೀಲಿಸಿ: ಇದಲ್ಲದೆ, ನೀವು ಪಟ್ಟಿಯಲ್ಲಿ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಮೊಬೈಲ್ ಆಯಪ್ ಮೂಲಕ ಸಹ ನೀವು ಪರಿಶೀಲಿಸಬಹುದು. ಪಿಎಂ ಕಿಸಾನ್ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಂಡು, ಇಲ್ಲಿಯೂ ಒಂದೇ ರೀತಿಯ ಮಾಹಿತಿ ತುಂಬಿ. ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದು ನಿಮಗೆ ತಕ್ಷಣ ಗೊತ್ತಾಗುತ್ತೆ.


ಈ ಪ್ಲಾನ್ ಅಡಿ ಕುಟುಂಬದ 15 ಸದಸ್ಯರಿಗೆ ಸಿಗುತ್ತೆ Health Insurance Cover