ನವದೆಹಲಿ : ಯಾಸ್ ಚಂಡಮಾರುತದಿಂದ ತತ್ತರಿಸಿದ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಿಗೆ ₹ 1000 ಕೋಟಿ ನೆರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಶುಕ್ರವಾರ ಪ್ರಧಾನ ಮಂತ್ರಿ ಮೋದಿ(PM Narendra Modi) ಅವರು ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ನೆರವು ಘೋಷಿಸಿದರು. ಒಡಿಶಾಗೆ ತಕ್ಷಣವೇ 500 ಕೋಟಿ ರೂ. ಸಿಗಲಿದೆ. ಉಳಿದ 500 ಕೋಟಿ ರೂಪಾಯಿಯನ್ನ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ಎರಡು ರಾಜ್ಯಗಳು ಹಂಚಿಕೊಳ್ಳಲಿವೆ.


ಇದನ್ನೂ ಓದಿ : MDM Scheme: ಸಿಹಿ ಸುದ್ದಿ! 11.8 ಕೋಟಿ ವಿದ್ಯಾರ್ಥಿಗಳ ಖಾತೆಗೆ ಸರ್ಕಾರದ ಹಣ


ಯಾಸ್ ಚಂಡಮಾರುತ(Cyclone Yaas)ದಿಂದ ಜೀವ ಕಳೆದುಕೊಂಡವರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಅತಿ ಹೆಚ್ಚು ಗಾಯಗೊಂಡವರಿಗೆ 50 ಸಾವಿರ ರೂ. ನೆರವನ್ನೂ ಪ್ರಧಾನಿ ಮೋದಿ ಅವರು ಘೋಷಿಸಿದ್ದಾರೆ.


ಇದನ್ನೂ ಓದಿ : Cyclone Yaas: ಬಿಹಾರದಲ್ಲಿ ಭಾರೀ ವಿನಾಶಕ್ಕೆ ಕಾರಣವಾದ ಯಾಸ್ ಚಂಡಮಾರುತ


ಪ್ರಧಾನಿ ಮೋದಿಯವರು ಒಡಿಶಾ ಸರ್ಕಾರ ವಿಕೋಪ ನಿರ್ವಹಣೆಯನ್ನು ಶ್ಲಾಘಿಸಿದರು. ಇದರಿಂದಾಗಿ ಕಡಿಮೆ ಸಂಖ್ಯೆಯಲ್ಲಿ ಜೀವಹಾನಿ ಸಂಭವಿಸಿದೆ. ಹಣಕಾಸು ಆಯೋಗ(Finance Commission) ಸುಮಾರು 30 ಸಾವಿರ ಕೋಟಿ ರೂಪಾಯಿಯನ್ನ ವಿಕೋಪ ತಡೆಗಾಗಿ ಕೇಂದ್ರ ಘೋಷಿಸಿದ್ದಾರೆ.


ಇದನ್ನೂ ಓದಿ : Building Collapses in Thane: ಥಾಣೆಯಲ್ಲಿ ಕಟ್ಟಡ ಕುಸಿತದಿಂದ 7 ಆಘಾತಕಾರಿ ಸಾವು, ಮುಂದುವರೆದ ರಕ್ಷಣಾ ಕಾರ್ಯಾಚರಣೆ


ಪಶ್ಚಿಮ ಬಂಗಾಳ ಸಿಮ್ ಮಮತಾ ಬ್ಯಾನರ್ಜಿ(Mamata Banerjee) ಅವರು ಕಲೈಕುಂಡ ವಾಯುನೆಲೆಯಲ್ಲಿ ಪ್ರಧಾನ ಮಂತ್ರಿ ಮೋದಿಯವರನ್ನ ಭೇಟಿ ಮಾಡಿ, ಯಾಸ್ ಚಂಡಮಾರುತದಿಂದ ರಾಜ್ಯದಲ್ಲಿ ಆಗಿರುವ ಹಾನಿಯ ಬಗ್ಗೆ ವಿವರ ಸಲ್ಲಿಸಿದರು. ಆದರೆ ಪ್ರಧಾನಿ ಇದ್ದ ಪರಾಮರ್ಶನಾ ಸಭೆಗೆ ಮಮತಾ ಗೈರುಹಾಜರಾಗಿದ್ದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.