Cyclone Yaas: ಬಿಹಾರದಲ್ಲಿ ಭಾರೀ ವಿನಾಶಕ್ಕೆ ಕಾರಣವಾದ ಯಾಸ್ ಚಂಡಮಾರುತ

Cyclone Yaas Bihar Update: ರಾಜಧಾನಿ ಪಾಟ್ನಾವನ್ನು ವೈಶಾಲಿಗೆ ಸಂಪರ್ಕಿಸುವ ಭದ್ರಾ ಘಾಟ್‌ನಲ್ಲಿರುವ ಪಿಪಾ ಸೇತುವೆಯ ಅಪ್ರೋಚ್ ರಸ್ತೆ ಕುಸಿದಿದೆ. ಅದೇ ಸಮಯದಲ್ಲಿ, ವೈಶಾಲಿಯ ರಾಘೋಪುರದಲ್ಲಿ ಭಾರಿ ಮಳೆಯಿಂದಾಗಿ ರುಸ್ತಾಂಪುರ್ ಪೀಪಾಪುಲ್ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ.

Written by - Yashaswini V | Last Updated : May 29, 2021, 09:18 AM IST
  • ಯಾಸ್ ಚಂಡಮಾರುತವು ಬಿಹಾರದಲ್ಲಿ ದೊಡ್ಡ ವಿನಾಶಕ್ಕೆ ಕಾರಣವಾಯಿತು
  • ಅನೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆ, ಧರೆಗುರುಳಿದ ಮನೆಗಳು
  • ಈ ದುರ್ಘಟನೆಯಲ್ಲಿ 7 ಜನರ ಮರಣ
Cyclone Yaas: ಬಿಹಾರದಲ್ಲಿ ಭಾರೀ ವಿನಾಶಕ್ಕೆ ಕಾರಣವಾದ ಯಾಸ್ ಚಂಡಮಾರುತ title=
Yaas effect on Bihar (Image courtesy: PTI)

ಪಾಟ್ನಾ: ಯಾಸ್ ಚಂಡಮಾರುತ (Cyclone Yaas) ಬಿಹಾರದಲ್ಲಿ ಭಾರಿ ವಿನಾಶಕ್ಕೆ ಕಾರಣವಾಗಿದೆ. ಇಲ್ಲಿ ಪೆಟ್ಟಿಗೆಯಿಂದ ಮಾಡಿದ ಸೇತುವೆಗಳು ಮುರಿದು ಬಿದ್ದಿದ್ದರೆ, ಮನೆಯ ಕುಸಿತದಿಂದ 7 ಜನರು ಸಾವನ್ನಪ್ಪಿದ್ದಾರೆ. ಹವಾಮಾನ ಇಲಾಖೆ (ಐಎಂಡಿ) ಶನಿವಾರ ಉತ್ತರ ಬಿಹಾರದ ಹೆಚ್ಚಿನ ಭಾಗಗಳಲ್ಲಿ ಗುಡುಗು, ಮಿಂಚಿನೊಂದಿಗೆ  ಮಧ್ಯಮ ಅಥವಾ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಬಿಹಾರದಲ್ಲಿ ಯಾಸ್ ಚಂಡಮಾರುತದಿಂದ  (Cyclone Yaas) ರಾಜಧಾನಿ ಪಾಟ್ನಾ (Patna), ದರ್ಭಂಗಾ, ಬಂಕಾ, ಮುಂಗರ್, ಬೆಗುಸರಾಯ್, ಗಯಾ ಮತ್ತು ಭೋಜ್‌ಪುರದಲ್ಲಿ ಚಂಡಮಾರುತಗಳಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಸಿಎಂ ನಿತೀಶ್ ಕುಮಾರ್ (Nitish Kumar) ಜನರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಪರಿಹಾರ ನೀಡಲು ಆದೇಶಿಸಿದ್ದಾರೆ. ಇದಲ್ಲದೆ ಗಯಾ  (Gaya) ಮತ್ತು ಬಂಕಾದಲ್ಲಿ ಚಂಡಮಾರುತದಲ್ಲಿ ಗಾಯಗೊಂಡ ಎಲ್ಲರಿಗೂ ಸರಿಯಾದ ವೈದ್ಯಕೀಯ ನೆರವು ನೀಡುವಂತೆ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ - Weather Update: ದೇಶದ ಅನೇಕ ಪ್ರದೇಶಗಳಲ್ಲಿ 'ಯಾಸ್' ಚಂಡಮಾರುತದ ಪ್ರಭಾವ, ಹಲವೆಡೆ ಮಳೆ

ಇದಲ್ಲದೆ ರಾಜಧಾನಿ ಪಾಟ್ನಾ (Patna) ವನ್ನು ವೈಶಾಲಿಗೆ ಸಂಪರ್ಕಿಸುವ ಭದ್ರಾ ಘಾಟ್‌ನಲ್ಲಿರುವ ಪಿಪಾ ಸೇತುವೆಯ ಅಪ್ರೋಚ್ ರಸ್ತೆ ಕುಸಿದಿದೆ. ಅದೇ ಸಮಯದಲ್ಲಿ, ವೈಶಾಲಿಯ ರಾಘೋಪುರದಲ್ಲಿ ಭಾರಿ ಮಳೆಯಿಂದಾಗಿ ರುಸ್ತಾಂಪುರ್ ಪೀಪಾಪುಲ್ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ.

ಇಂದು ಮಳೆ ಮುನ್ಸೂಚನೆ:
ಹವಾಮಾನ ಇಲಾಖೆ (IMD) ಶನಿವಾರ ಉತ್ತರ ಬಿಹಾರದ ಹೆಚ್ಚಿನ ಭಾಗಗಳಲ್ಲಿ ಗುಡುಗು ಮಿಂಚಿನ ಸಮೇತ ಮಧ್ಯಮದಿಂದ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆ (ಐಎಂಡಿ) ಹೊರಡಿಸಿರುವ ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ವಿದ್ಯುತ್ ಮತ್ತು ನೀರಿನ ನಿರಂತರ ಪೂರೈಕೆ ಮತ್ತು ವಾಹನ ದಟ್ಟಣೆಯನ್ನು ಸುಗಮವಾಗಿರುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ - "ಪ್ರಧಾನಿ ಮೋದಿ ಸಭೆಗೆ ಮಮತಾ ಗೈರಾಗಿದ್ದು ಸಂವಿಧಾನ ನೀತಿಗಳನ್ನು ಹತ್ಯೆ ಮಾಡಿದ ಹಾಗೆ "

ಇಲ್ಲಿನ ಹವಾಮಾನ ಇಲಾಖೆಯ ಅಧಿಕಾರಿ ಎಸ್.ಕೆ.ಮಂಡಲ್ ಅವರ ಪ್ರಕಾರ, ಉತ್ತರ ಬಿಹಾರದ ಜಿಲ್ಲೆಗಳಾದ ಕತಿಹಾರ್ ಮತ್ತು ಸರನ್ 200 ಮಿ.ಮೀ ಗಿಂತ ಹೆಚ್ಚಿನ ಮಳೆಯಾಗಿದೆ. ಪಾಟ್ನಾ ಜಿಲ್ಲೆಯಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ, ನಿನ್ನೆಯಿಂದ 90 ಮಿ.ಮೀ.ಗಿಂತ ಹೆಚ್ಚಿನ ಮಳೆಯಾಗಿದೆ, ಇದರ ಪರಿಣಾಮವಾಗಿ ರಾಜಧಾನಿಯ ಪ್ರಮುಖ ಪ್ರದೇಶಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭಾರಿ ನೀರು ಹರಿಯುತ್ತಿದೆ. ಕ್ರಮೇಣ ಪರಿಸ್ಥಿತಿ ಸಾಮಾನ್ಯವಾಗುತ್ತಿವೆ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News