ಗುಜರಾತ್: ಸೋನಲ್ ಮೋದಿ, ಪ್ರಧಾನ ಮಂತ್ರಿ ಮೋದಿಯ ಹಿರಿಯ ಅಣ್ಣನ ಮಗಳು. ಸದ್ಯ ಅವರು ಈಗ ರಾಜಕೀಯ ಕ್ಷೇತ್ರಕ್ಕೆ ಧುಮುಕುವ ಮನಸ್ಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಗುಜರಾತ್ ಬಿಜೆಪಿಯ ಹೈಕಮಾಂಡ್ ಬಳಿ ಅಹಮದಾಬಾದ್ ನಗರ ಪಾಲಿಕೆಯ ಬೋಡಕ್‌ದೇವ್ ವಾರ್ಡ್‌ನಿಂದ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಗುಜರಾತ್‌ನಲ್ಲಿ ಫೆಬ್ರವರಿ 21ರಂದು ನಗರ ಪಾಲಿಕೆ ಚುನಾವಣೆಗಳು ನಡೆಯಲಿವೆ. ಹೀಗಿರುವಾಗ ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಾಯಕರ ಮಕ್ಕಳು ಟಿಕೆಟ್‌ಗಾಗಿ ಭಾರೀ ಬೇಡಿಕೆ ಇಡುತ್ತಿದ್ದಾರೆ. ಹೀಗಿರುವಾಗ ಗುಜರಾತ್‌ನ ಬಿಜೆಪಿ(BJP) ಪ್ರಾದೇಶಿಕ ಅಧ್ಯಕ್ಷ ಸಿ. ಆರ್‌. ಪಾಟೀಲ್‌ರವರು ಯಾವುದೇ ನಾಯಕರ ಮಕ್ಕಳಿಗೂ ಸ್ಥಳೀಯ ಆಡಳಿತ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡುವುದಿಲ್ಲ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಪಿಎಂ ಮೋದಿ ಅಣ್ಣನ ಮಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.


K Annamalai: ಮಾಜಿ IPS​ ಅಧಿಕಾರಿ ಅಣ್ಣಾಮಲೈಗೆ ಜೀವ ಬೆದರಿಕೆ..!


ಸೋನಲ್ ಬೇಡಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇತ್ತ ಸೋನಲ್ ಟಿಕೆಟ್‌ಗೆ ಬೇಡಿಕೆ ಇಡುತ್ತಿದ್ದಂತೆಯೇ ಅತ್ತ ಅವರ ತಂದೆ ಅಂದರೆ ಪಿಎಂ ಮೋದಿ ಅಣ್ಣ ಪ್ರಹ್ಲಾದ್ ಮೋದಿ ವಿಮಾನ ನಿಲ್ದಾಣದಲ್ಲಿ ಧರಣಿ ಕುಳಿತಿದ್ದಾರೆ. ಅವರು ಮಗಳಿಗೆ ಟಿಕೆಟ್ ನೀಡಬೇಕೆಂದು ಧರಣಿ ಹೂಡಿರಲಿಲ್ಲ, ಬದಲಾಗಿ ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರೆಂಬುವುದು ಕಾರಣವಾಗಿದೆ.


K Annamalai: ಮಾಜಿ IPS​ ಅಧಿಕಾರಿ ಅಣ್ಣಾಮಲೈಗೆ ಜೀವ ಬೆದರಿಕೆ..!


40 ವರ್ಷದ ಸೋನಲ್ ಮೋದಿ(Modi) ಅಹಮದಾಬಾದ್‌ನ ಜೋದ್ಪುರದ ಸಾಮಾನ್ಯ ಗೃಹಿಣಿ. ಅವರ ಇಡೀ ಕುಟುಂಬ ಬಿಜೆಪಿಯಲ್ಲಿದೆ. ಅಲ್ಲದೇ ಅವರು ಖುದ್ದು ಓರ್ವ ಸಕ್ರಿಯ ಬಿಜೆಪಿ ಕಾರ್ಯಕರ್ತೆ. ಒಬಿಸಿ ವರ್ಗಕ್ಕೆ ಮೀಸಲಿರಿಸಿದ ಬೋಡಕ್‌ದೇವ್ ವಾರ್ಡ್‌ನಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ. ತಾನು ಜನರ ಸೇವೆ ಮಾಡಲು ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛಿಸಿದ್ದೇನೆ ಎಂಬುವುದು ಅವರ ಮಾತಾಗಿದೆ.


2.5 ಕೋಟಿ ರೈತರಿಗೆ ಸಿಗಲಿದೆ Kissan Credit Card.! ಈ ಕ್ರೆಡಿಟ್ ಕಾರ್ಡ್ ಲಾಭ ತಿಳಿಯಿರಿ


ನನ್ನ ಮಗಳು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಾಸಿಸುತ್ತಿದ್ದಾಳೆ. ಆಕೆಯೊಬ್ಬ ಸ್ವತಂತ್ರ ಸ್ಪರ್ಧಿ. ಪ್ರಧಾನ ಮಂತ್ರಿ(PM Modi)ಯ ಸೋದರ ಮಗಳಾಗಿ ಅಲ್ಲ, ಇತರ ಅಭ್ಯರ್ಥಿಗಳಿಗೆ ಯಾವ ಯೋಗ್ಯತೆ ಮೇಲೆ ಟಿಕೆಟ್ ನೀಡುತ್ತೀರೋ, ಅದರಂತೇ ಪರಿಗಣಿಸಿ ಟಟಿಕೆಟ್ ನೀಡಬೇಕು. ಇದು ಕುಟುಂಬ ರಾಜಕೀಯದ ವಿಚಾರವಲ್ಲ. ತಾವು ಯಾವತ್ತೂ ಮೋದಿ ಹೆಸರನ್ನು ಲಾಭಕ್ಕೆ ಬಳಸಿಕೊಂಡಿಲ್ಲ ಎನ್ನುತ್ತಾರೆ ಮೋದಿ ಸಹೋದರ ಪ್ರಹ್ಲಾದ್ ಮೋದಿ.


ರೈಲು 3 ಗಂಟೆ ಲೇಟಾಗಿ ಓಡುತ್ತಿತ್ತು. ಎಕ್ಸಾಂ ಮಿಸ್ಸಾಗ್ತಾ ಇತ್ತು.ಆಗ ಬಂತೊಂದು ಟ್ವೀಟ್..!ಮುಂದೇನಾಯ್ತ..?!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.