ರೈಲು 3 ಗಂಟೆ ಲೇಟಾಗಿ ಓಡುತ್ತಿತ್ತು. ಎಕ್ಸಾಂ ಮಿಸ್ಸಾಗ್ತಾ ಇತ್ತು.ಆಗ ಬಂತೊಂದು ಟ್ವೀಟ್..!ಮುಂದೇನಾಯ್ತ..?!

ಭಾರತೀಯ ರೈಲ್ವೆ  ಮಾಡಿದ ಈ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಣ್ಣ ಒಂದು ಟ್ವೀಟ್ ವಿದ್ಯಾರ್ಥಿನಿಯ ಒಂದು ವರ್ಷ ಉಳಿಸಿದೆ.

Written by - Ranjitha R K | Last Updated : Feb 4, 2021, 10:09 AM IST
  • ಭಾರತೀಯ ರೈಲ್ವೆ ಮಾಡಿದ ಈ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ
  • ಸಣ್ಣ ಒಂದು ಟ್ವೀಟ್ ವಿದ್ಯಾರ್ಥಿನಿಯ ಒಂದು ವರ್ಷ ಉಳಿಸಿದೆ.
  • ಸಣ್ಣ ಒಂದು ಟ್ವೀಟಿಗೂ ರೈಲ್ವೆ ರೆಸ್ಪಾಂಡ್ ಮಾಡಿದೆ.
ರೈಲು 3 ಗಂಟೆ ಲೇಟಾಗಿ ಓಡುತ್ತಿತ್ತು. ಎಕ್ಸಾಂ ಮಿಸ್ಸಾಗ್ತಾ ಇತ್ತು.ಆಗ ಬಂತೊಂದು ಟ್ವೀಟ್..!ಮುಂದೇನಾಯ್ತ..?! title=
ಸಣ್ಣ ಒಂದು ಟ್ವೀಟಿಗೂ ರೈಲ್ವೆ ರೆಸ್ಪಾಂಡ್ ಮಾಡಿದೆ. (file photo)

ವಾರಣಾಸಿ : ಭಾರತೀಯ ರೈಲ್ವೆ (Indian Railway) ಮಾಡಿದ ಈ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಣ್ಣ ಒಂದು ಟ್ವೀಟ್ (tweet) ವಿದ್ಯಾರ್ಥಿನಿಯ ಒಂದು ವರ್ಷ ಉಳಿಸಿದೆ. ಸಣ್ಣ ಒಂದು ಟ್ವೀಟಿಗೂ ರೈಲ್ವೆ ರೆಸ್ಪಾಂಡ್ ಮಾಡಿದೆ.

ಆಗಿದ್ದೇನು..?

ಗಾಜಿಪುರದ ತಬ್ಸಮ್ ನಾಜಿಯಾ ಅವರಿಗೆ ವಾರಣಾಸಿಯ (Varanasi) ವಲ್ಲಭ ವಿದ್ಯಾಪೀಠದಲ್ಲಿ ಬ್ಯಾಂಕ್ (Bank) ಪರೀಕ್ಷೆ ಬರೆಯಬೇಕಿತ್ತು. ಬುಧವಾರ ಮಧ್ಯಾಹ್ನ ಪರೀಕ್ಷೆ ನಿಗದಿಯಾಗಿತ್ತು.  ತಬ್ಸಮ್ ಬೆಳಗ್ಗೆ ಮಾವು ಬಳಿ ಛಪ್ರಾ ವಾರಣಾಸಿ ರೈಲನ್ನು (Chapra Varanasi Train) ಹತ್ತಬೇಕಿತ್ತು. ರೈಲು ಬೆಳಗ್ಗೆ 6.25ಕ್ಕೆ ಸ್ಟೇಷನ್ ಗೆ ಬರಬೇಕಿತ್ತು. ಆದರೆ, ಅದು ಬಂದಿದ್ದು 9.18ಕ್ಕೆ ಹೆಚ್ಚು ಕಡಿಮೆ ಮೂರು ಗಂಟೆ ಲೇಟಾಗಿ ಬಂದಿತ್ತು ರೈಲು.

ಇದನ್ನೂ ಓದಿ : Aero India : ಭವಿಷ್ಯದ ಅತಿದೊಡ್ಡ ಆಯುಧದ ಫಸ್ಟ್ ಝಲಕ್ ಅನಾವರಣಗೊಳಿಸಿದ HAL

ತಬ್ಸಮ್ ಅಣ್ಣ ಮಾಡಿದ ಟ್ವೀಟ್ ಅಚ್ಚರಿ ಸೃಷ್ಟಿಸಿತ್ತು :
12 ಗಂಟೆಗೆ ತಬ್ಸಮ್ ಪರೀಕ್ಷೆ ಬರೆಯಬೇಕಿತ್ತು. ರೈಲು ಇದೇ ಸ್ಪೀಡಿನಲ್ಲಿ ಹೋದರೆ ತಬ್ಸಮ್ ಗೆ ಪರೀಕ್ಷೆ (Exam)ಮಿಸ್ಸಾಗ್ತಾ ಇತ್ತು. ಅಷ್ಟರಲ್ಲಿ ತಬ್ಸಮ್ ಅಣ್ಣ ಅನ್ವರ್ ಜಮಾಲ್ ರೈಲ್ವೆ ಇಲಾಖೆಗೊಂದು ಟ್ವೀಟ್ (tweet) ಮಾಡಿದ್ದಾರೆ. ತಂಗಿಯ ಪರೀಕ್ಷಾ ಕೇಂದ್ರೆ, ಹಾಲ್ ಟಿಕೆಟ್, ರೈಲ್ವೆ ನಂಬರ್, ಪಿಎನ್ ಆರ್ ನಂಬರ್ (PNR Number) ಬರೆದು, ಹೆಲ್ಪ್ ಮಾಡಿ ಅಂತ ಟ್ವೀಟ್ ಮಾಡಿದ್ದಾರೆ. ಕೂಡಲೇ ಮೊಬೈಲ್ (Mobile) ನಂಬರ್ ಕೇಳಿ ರೈಲ್ವೆಯಿಂದ ಅವರಿಗೊಂದು ಮೆಸೆಜ್ ಬಂದಿದೆ.

ಒಂದು ಸಣ್ಣ ಟ್ವೀಟಿಗೆ ರೈಲ್ವೆ ಸ್ಪಂದಿಸಿದ ರೀತಿ ಅಮೋಘ. 
ಕಾರ್ಯ ತತ್ಪರವಾದ ರೈಲ್ವೆ (Railway) , ಕಂಟ್ರೋಲ್ ರೂಮಿಗೆ ಪೋನಾಯಿಸಿದೆ. ವಿಚಾರ ತಿಳಿಸಿ ರೈಲಿನ ವೇಗ ಹೆಚ್ಚಿಸಲು ಮನವಿ ಮಾಡಿದೆ. ಆಗಷ್ಟೇ 3 ಗಂಟೆ ಲೇಟಾಗಿ ಚಲಿಸುತ್ತಿದ್ದ ರೈಲಿನ ಸ್ಪೀಡ್ ಹೆಚ್ಚಾಗಿದೆ. ಎಷ್ಟರ ಮಟ್ಟಿಗೆ ಸ್ಪೀಡ್ (Speed)ಹೆಚ್ಚಾಗಿತ್ತು ಅಂದರೆ, ಒಂದು ಗಂಟೆ ಮೊದಲೇ ರೈಲು ವಾರಣಾಸಿ ಸ್ಟೇಷನ್ ಮುಟ್ಟಿದೆ. 12 ಗಂಟೆಗೆ ಬರಬೇಕಿದ್ದ ರೈಲು 11 ಗಂಟೆಗೆ ಬಂದು ಮುಟ್ಟಿದೆ. 

ಇದನ್ನೂ ಓದಿ : ಸರ್ವಾಧಿಕಾರಿಗಳ ಹೆಸರುಗಳು 'M' ನಿಂದೇಕೆ ಪ್ರಾರಂಭವಾಗುತ್ತವೆ?- ರಾಹುಲ್ ಗಾಂಧಿ

ಇದಾದ ಮೇಲೆ ಅನ್ವರ್ ಜಮಾಲ್ ರೈಲ್ವೆಗೆ ಮತ್ತೊಂದು ಟ್ವೀಟ್ ಮಾಡಿದ್ದಾರೆ. ರೈಲ್ವೆ ಮಾಡಿದ ಒಂದೊಳ್ಳೇ ಕೆಲಸಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ. ಜನತೆ ಕೂಡಾ ರೈಲ್ವೆಗೆ ಥ್ಯಾಂಕ್ಸ್ ಹೇಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News