Narendra Modi: ಟೀಂ ಇಂಡಿಯಾಗೆ ವಿಭಿನ್ನ ರೀತಿಯಲ್ಲಿ ಅಭಿನಂದಿಸಿದ ಪ್ರಧಾನಿ ಮೋದಿ
ನಾಲ್ಕನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಅನ್ನು 157 ರನ್ಗಳಿಂದ ಸೋಲಿಸಿತು, ಜೊತೆಗೆ ಭಾರತದಲ್ಲಿ ಸೋಮವಾರ ಒಂದು ಕೋಟಿ ಡೋಸ್ ಕೋವಿಡ್ -19 ಲಸಿಕೆಗಳನ್ನು ನೀಡಲಾಯಿತು. ಈ ದಾಖಲೆಯ ಬಗ್ಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಇಂಗ್ಲೆಂಡ್ ಅನ್ನು 157 ರನ್ ಗಳಿಂದ ಸೋಲಿಸಿದೆ. ಟೀಂ ಇಂಡಿಯಾದ ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಂತಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಪಿಎಂ ನರೇಂದ್ರ ಮೋದಿ ಅವರು ಕರೋನಾ ಲಸಿಕೆಗೆ ಸಂಬಂಧಿಸಿದಂತೆ ಇಂದಿನ ಅಂಕಿಅಂಶಗಳನ್ನು 'ಅದ್ಭುತ' ಎಂದು ವಿವರಿಸಿದ್ದಾರೆ.
ಟ್ವೀಟ್ ಮೂಲಕ ವಿಶೇಷವಾಗಿ ಅಭಿನಂದಿಸಿದ ಪಿಎಂ ಮೋದಿ :
ಟೀಂ ಇಂಡಿಯಾದ (Team India) ವಿಜಯದ ಕುರಿತು ಪಿಎಂ ನರೇಂದ್ರ ಮೋದಿ (PM Narendra Modi) ಟ್ವೀಟ್ ಮಾಡಿದ್ದಾರೆ, 'ಲಸಿಕೆಯ ಮುಂಭಾಗದಲ್ಲಿ ಮತ್ತು ಕ್ರಿಕೆಟ್ ಪಿಚ್‌ನಲ್ಲಿ (ಮತ್ತೊಮ್ಮೆ) ಉತ್ತಮ ದಿನ. ಎಂದಿನಂತೆ, #ಟೀಮ್ ಇಂಡಿಯಾ ಗೆದ್ದಿದೆ! ಎಂದು ಬರೆದಿದ್ದಾರೆ.
England vs India, 4th Test: ಭಾರತದ ಬೌಲಿಂಗ್ ಕೈಚಳಕಕ್ಕೆ ಇಂಗ್ಲೆಂಡ್ ತತ್ತರ,157 ರನ್ ಗಳ ಜಯ
2-1ರಿಂದ ಮುನ್ನಡೆ ಸಾಧಿಸಿದ ಭಾರತ :
ಲಂಡನ್‌ನ ಓವಲ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ವಿಜಯದೊಂದಿಗೆ, ಭಾರತ ಈಗ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಈ ಸಂಪೂರ್ಣ ಪಂದ್ಯದಲ್ಲಿ, ಭಾರತೀಯ ಆಟಗಾರರು ಇಂಗ್ಲೆಂಡ್ ಮೇಲೆ ಪ್ರಾಬಲ್ಯ ಸಾಧಿಸಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಇಂಗ್ಲೆಂಡ್ ಎದುರು 368 ರನ್ ಗಳ ಗುರಿ ನೀಡಿತ್ತು. ಆರಂಭದಲ್ಲಿ, ಇಂಗ್ಲೀಷ್ ತಂಡವು ಮೇಲುಗೈ ಸಾಧಿಸಿದಂತಿತ್ತು. ಆದರೆ ಊಟದ ನಂತರ ಬೌಲರ್‌ಗಳು ಪಂದ್ಯದ ಹಾದಿಯನ್ನು ಬದಲಿಸಿದರು. ಶಾರ್ದೂಲ್ ಠಾಕೂರ್ ಇಂಗ್ಲೆಂಡಿಗೆ ಮೊದಲ ಹೊಡೆತ ನೀಡಿದರು, ನಂತರ ಆಟಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಊಟದ ಹೊತ್ತಿಗೆ, ಇಂಗ್ಲೆಂಡ್ ಎರಡು ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಪಂದ್ಯವನ್ನು ಯಾವ ತಂಡ ಗೆಲ್ಲಲಿದೆ ಎಂಬ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಆದರೆ ಮಧ್ಯಾಹ್ನದ ಊಟದ ನಂತರ ಭಾರತೀಯ ಬೌಲರ್‌ಗಳು ಟೇಬಲ್ ತಿರುಗಿಸಿದರು. ಟೀಮ್ ಇಂಡಿಯಾ 50 ವರ್ಷಗಳ ನಂತರ ಓವಲ್ ಮೈದಾನದಲ್ಲಿ ಗೆಲುವು ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
11 ದಿನಗಳಲ್ಲಿ ಮೂರನೇ ಬಾರಿಗೆ 1 ಕೋಟಿಗಿಂತ ಹೆಚ್ಚು ಡೋಸ್‌ಗಳು:
ಅಂತೆಯೇ, ಭಾರತ ಕೂಡ ಲಸಿಕೆ ಹಾಕುವ ವಿಷಯದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಕಳೆದ 11 ದಿನಗಳಲ್ಲಿ ಮೂರನೇ ಬಾರಿಗೆ, ಭಾರತದಲ್ಲಿ ಒಂದು ಕೋಟಿ ಡೋಸ್ ಕೋವಿಡ್ -19 ಲಸಿಕೆಗಳನ್ನು (Covid-19 Vaccination) ನೀಡಲಾಗಿದೆ. ಇದರೊಂದಿಗೆ, ಇದುವರೆಗೆ ದೇಶದಲ್ಲಿ ನೀಡಲಾದ ಒಟ್ಟು ಡೋಸ್‌ಗಳ ಸಂಖ್ಯೆ 69.72 ಕೋಟಿ ಮೀರಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, 'ಸೆಪ್ಟೆಂಬರ್ ಆರಂಭವಾಗಿದೆ ಮತ್ತು ಭಾರತವು ಸೋಮವಾರ ಒಂದು ಕೋಟಿ ಕೋವಿಡ್ ಲಸಿಕೆಗಳನ್ನು ಮುಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವು ಹೊಸ ಎತ್ತರವನ್ನು ಏರುತ್ತಿದೆ' ಎಂದಿದ್ದಾರೆ.
ಇದನ್ನೂ ಓದಿ- Ind Vs Eng ಸರಣಿ: ಶಾಸ್ತ್ರಿ ಬಳಿಕ ತಂಡದ ಈ ಇಬ್ಬರು ಸದಸ್ಯರೂ ಕೂಡ 5ನೇ ಟೆಸ್ಟ್ ನಿಂದ ಹೊರಗೆ
ಆರೋಗ್ಯ ಸಚಿವಾಲಯದ ಪ್ರಕಾರ, ಇದುವರೆಗೆ 53,29,27,201 ಫಲಾನುಭವಿಗಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಮತ್ತು 16,39,69,127 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಒಟ್ಟಾರೆಯಾಗಿ, 18-44 ವಯಸ್ಸಿನ 27,64,10,694 ಜನರಿಗೆ ಮೊದಲ ಡೋಸ್ ನೀಡಲಾಗಿದೆ ಮತ್ತು ಮೂರನೇ ಹಂತದ ಲಸಿಕೆ ಅಭಿಯಾನದ ಆರಂಭದಿಂದ 3,57,76,726 ಜನರಿಗೆ ಎರಡನೇ ಡೋಸ್ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.