England vs India, 4th Test: ಭಾರತದ ಬೌಲಿಂಗ್ ಕೈಚಳಕಕ್ಕೆ ಇಂಗ್ಲೆಂಡ್ ತತ್ತರ,157 ರನ್ ಗಳ ಜಯ

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ಭಾರತವು 157 ರನ್ ಗಳ ರೋಚಕ ಗೆಲುವನ್ನು ಸಾಧಿಸಿತು, ಇದು ಓವಲ್ ನಲ್ಲಿ ನಡೆದ ಎರಡನೇ ಮತ್ತು 1971 ರ ನಂತರ ನಡೆದ ಮೊದಲ ಗೆಲುವಾಗಿದೆ.

Written by - Zee Kannada News Desk | Last Updated : Sep 6, 2021, 11:29 PM IST
  • ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ಭಾರತವು 157 ರನ್ ಗಳ ರೋಚಕ ಗೆಲುವನ್ನು ಸಾಧಿಸಿತು, ಇದು ಓವಲ್ ನಲ್ಲಿ ನಡೆದ ಎರಡನೇ ಮತ್ತು 1971 ರ ನಂತರ ನಡೆದ ಮೊದಲ ಗೆಲುವಾಗಿದೆ.
  • ಈ ಗೆಲುವಿನ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆಯನ್ನು ಸಾಧಿಸಿದೆ. ಅಷ್ಟೇ ಅಲ್ಲದೆ 1986 ರ ನಂತರ ಭಾರತವು ಇಂಗ್ಲೆಂಡ್ ಪ್ರವಾಸದಲ್ಲಿ ಎರಡು ಟೆಸ್ಟ್ ಗೆದ್ದಿದೆ.
  • ಕಳೆದ ತಿಂಗಳು ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಅವರು ಇಂಗ್ಲೆಂಡ್ ಅನ್ನು 151 ರನ್ಗಳಿಂದ ಸೋಲಿಸಿತ್ತು.
 England vs India, 4th Test: ಭಾರತದ ಬೌಲಿಂಗ್ ಕೈಚಳಕಕ್ಕೆ ಇಂಗ್ಲೆಂಡ್ ತತ್ತರ,157 ರನ್ ಗಳ ಜಯ  title=

ನವದೆಹಲಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ಭಾರತವು 157 ರನ್ ಗಳ ರೋಚಕ ಗೆಲುವನ್ನು ಸಾಧಿಸಿತು, ಇದು ಓವಲ್ ನಲ್ಲಿ ನಡೆದ ಎರಡನೇ ಮತ್ತು 1971 ರ ನಂತರ ನಡೆದ ಮೊದಲ ಗೆಲುವಾಗಿದೆ.

ಈ ಗೆಲುವಿನ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತ  2-1 ರಿಂದ  ಮುನ್ನಡೆಯನ್ನು ಸಾಧಿಸಿದೆ. ಅಷ್ಟೇ ಅಲ್ಲದೆ 1986 ರ ನಂತರ ಭಾರತವು ಇಂಗ್ಲೆಂಡ್ ಪ್ರವಾಸದಲ್ಲಿ ಎರಡು ಟೆಸ್ಟ್ ಗೆದ್ದಿದೆ.ಕಳೆದ ತಿಂಗಳು ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಅವರು ಇಂಗ್ಲೆಂಡ್ ಅನ್ನು 151 ರನ್ಗಳಿಂದ ಸೋಲಿಸಿತ್ತು.

ಇದನ್ನೂ ಓದಿ: Viral Video: ಡ್ರೆಸ್ಸಿಂಗ್ ರೂಂ ಗೋಡೆಗೆ ಗುದ್ದಿದ ವಿರಾಟ್ ಕೊಹ್ಲಿ; ಕಿಂಗ್ ಕೋಪಕ್ಕೆ ಕಾರಣವೇನು ನೋಡಿ..

ಇಂಗ್ಲೆಂಡ್ (England) ತಂಡವು ಐದನೇ ದಿನದಂದು ವಿಕೆಟ್ ನಷ್ಟವಿಲ್ಲದೆ 77 ರನ್ ಗಳ ಆಟವನ್ನು ಮುಂದುವರೆಸಿತ್ತು. ಮೊದಲ ಸೆಶನ್‌ನಲ್ಲಿ ಒಂದೆರಡು ವಿಕೆಟ್ ಕಳೆದುಕೊಂಡಿದ್ದರೂ ಸಹ, ಅವರು 131/2 ಕ್ಕೆ ಗಳಿಸುವ ಮೂಲಕ ಟೆಸ್ಟ್ ಪಂದ್ಯವನ್ನು ಡ್ರಾಗೆ ಕೊಂಡ್ಯೋಯುತ್ತಾರೆ ಎನ್ನುವಂತೆ ಅವರ ಆಟ ತೋರುತ್ತಿತ್ತು,ಆದಾಗ್ಯೂ ವೇಗಿ ಜಸ್ಪ್ರೀತ್ ಬುಮ್ರಾ (2/27) ಮತ್ತು ಸ್ಪಿನ್ನರ್ ರವೀಂದ್ರ ಜಡೇಜಾ (2/50) ಭಾರತದ ಪರವಾಗಿ ಪಂದ್ಯವನ್ನು ತಿರುಗುವಂತೆ ಮಾಡಿದರು. ಇಬ್ಬರು ಸೇರಿ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.

ಇದನ್ನೂ ಓದಿ: Ind Vs Eng ಸರಣಿ: ಶಾಸ್ತ್ರಿ ಬಳಿಕ ತಂಡದ ಈ ಇಬ್ಬರು ಸದಸ್ಯರೂ ಕೂಡ 5ನೇ ಟೆಸ್ಟ್ ನಿಂದ ಹೊರಗೆ

ಇನ್ನೊಂದೆಡೆಗೆ ಭಾರತ ತಂಡವು ಮೊದಲ ಇನಿಂಗ್ಸ್ ನಲ್ಲಿ ಕೇವಲ 191 ರನ್ ಗಳಿಗೆ ಆಲೌಟ್ ಆಗುವ ಮೂಲಕ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರೆಸಿತು.ಇನ್ನೊಂದೆಡೆಗೆ ಇಂಗ್ಲೆಂಡ್ ತಂಡವು ಮುನ್ನಡೆಯನ್ನು ಸಾಧಿಸಿದರೂ ಕೂಡ ಭಾರತ ತಂಡವು ಎರಡನೇ ಇನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ಅವರ ಶತಕ ಹಾಗೂ ಶಾರ್ದುಲ್ ಠಾಕೂರ್ ಅವರ  ಬ್ಯಾಟಿಂಗ್ ನಿಂದಾಗಿ 466 ರನ್ ಗಳನ್ನು ಗಳಿಸಿತು.

ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್

ಶಾರ್ದೂಲ್ ಠಾಕೂರ್ ಅವರು ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ್ದಲ್ಲದೆ ಮೂರು ನಿರ್ಣಾಯಕ ವಿಕೆಟ್ ಪಡೆದರು.ಮೊದಲ ಇನ್ನಿಂಗ್ಸ್ ಅರ್ಧಶತಕವು ಭಾರತವನ್ನು 191 ಕ್ಕೆ ಕೊಂಡೊಯ್ದಿತು ಮತ್ತು ಎರಡನೇ ಇನ್ನಿಂಗ್ಸ್ ಅರ್ಧಶತಕವು ರಿಷಭ್ ಪಂತ್ ಜೊತೆ ಏಳನೇ ವಿಕೆಟ್ ಗೆ 100 ರನ್ ಗಳ ಜೊತೆಯಾಟವು ತಂಡವು 300ಕ್ಕೂ ಅಧಿಕ ರನ್ ಗಳ ಮುನ್ನಡೆ ಸಹಾಯವಾಯಿತು.

ಪಂದ್ಯದ ಸಂಕ್ಷಿಪ್ತ ವಿವರ:

ಭಾರತ 191 ಮತ್ತು 466, ಇಂಗ್ಲೆಂಡ್ : 290 ಮತ್ತು 210. 92.2 ಓವರ್‌ಗಳಲ್ಲಿ ಆಲೌಟ್ )

ಇದನ್ನೂ ಓದಿ- R Ashok : ಮೇ 24 ರ ನಂತರ ಲಾಕ್​ಡೌನ್​ ಮುಂದುವರೆಯುವ ಸುಳಿವು ನೀಡಿದ ಕಂದಾಯ ಸಚಿವ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News