PM Kisan: ಜೂನ್ 18ರಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಲಿದೆ. 17ನೇ ಕಂತಿನ ಹಣಕ್ಕಾಗಿ ಹಲವರು ಕಾಯುತ್ತಿದ್ದು,  ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್‌’ಗೆ ಸಂಬಂಧಿಸಿದ 17 ನೇ ಕಂತಿನ ನಿಧಿಯನ್ನು ಬಿಡುಗಡೆ ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

9.26 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 20 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಮೋದಿ ಜಮಾ ಮಾಡಲಿದ್ದಾರೆ. ಇದೇ ವೇಳೆ ವಾಟ್ಸ್‌ಆ್ಯಪ್ ಗ್ರೂಪ್‌’ಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: ಟಿ20 ವಿಶ್ವಕಪ್’ನಲ್ಲಿ ಸೆಮೀಸ್ ಪ್ರವೇಶಿಸಬೇಕಂದ್ರೆ ಈ 3 ಕಠಿಣ ಸವಾಲು ಜಯಿಸಲೇಬೇಕು ಟೀಂ ಇಂಡಿಯಾ!


ವಾಟ್ಸಾಪ್ ಗ್ರೂಪ್‌’ಗಳಲ್ಲಿರುವ ಪ್ರತಿಯೊಂದು ಲಿಂಕ್ ಅನ್ನು ಕ್ಲಿಕ್ ಮಾಡದಂತೆ ಸೂಚಿಸಲಾಗಿದೆ. ನಿಮ್ಮ ಕೈಯಲ್ಲಿ ಮೊಬೈಲ್ ಇದೆ ಎಂದು ಗ್ರೂಪ್ ನಲ್ಲಿರುವ ಬರುವ ಲಿಂಕ್ ಗಳನ್ನು ಕ್ಲಿಕ್ ಮಾಡುತ್ತಲೇ ಇದ್ದರೆ ಹ್ಯಾಕ್ ಆಗುವುದು ಖಚಿತ. ಇದಲ್ಲದೆ, ನಮ್ಮ ಫೋನ್ ಸಂಖ್ಯೆಯೊಂದಿಗೆ ಇತರರಿಗೆ ಸಂದೇಶಗಳನ್ನು ಕಳುಹಿಸುವ ಅಪಾಯವಿದೆ.


ಇತ್ತೀಚೆಗಷ್ಟೇ ಅದಿಲಾಬಾದ್ ಜಿಲ್ಲೆಯ ಸಿರಿಕೊಂಡ ಮಂಡಲದ ಸೊಂಪೆಲ್ಲಿ ಗ್ರಾಮದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಸೊಂಪೆಲ್ಲಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮಂದಿಯ ವಾಟ್ಸ್‌ಆ್ಯಪ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ.


ಆ ಹಳ್ಳಿಯ ಯುವಕರು ತಮ್ಮ ಗ್ರೂಪ್‌’ಗಳಲ್ಲಿ ಬಂದ ಪಿಎಂ ಕಿಸಾನ್ ಆ್ಯಪ್ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಸ್ವಲ್ಪ ಸಮಯದಲ್ಲೇ ಅವರ ವಾಟ್ಸಾಪ್ ಸಂಪೂರ್ಣ ಹ್ಯಾಕ್ ಆಗಿತ್ತು. ಈ ಕುರಿತು ಸೈಬರ್ ಕ್ರೈಂ ಡಿಎಸ್ಪಿ ವಿವರಣೆ ನೀಡಿದ್ದಾರೆ.


ಮೊಬೈಲ್ ನಲ್ಲಿ ಬರುವ ಆ್ಯಪ್’ಗಳ ಬಗ್ಗೆ ಎಲ್ಲರೂ ಎಚ್ಚರದಿಂದ ಇರುವಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಸಂದರ್ಭದಲ್ಲೂ ಪಿಎಂ ಕಿಸಾನ್ ಆ್ಯಪ್‌’ಗಳನ್ನು ಕ್ಲಿಕ್ ಮಾಡಬೇಡಿ. ಯಾವುದೇ ಸೈಬರ್ ವಂಚನೆಯ ಸಂದರ್ಭದಲ್ಲಿ, ತಕ್ಷಣವೇ 1930 ಟೋಲ್ ಫ್ರೀ ಸಂಖ್ಯೆಯನ್ನು ಸಂಪರ್ಕಿಸಿ.


ಫಲಾನುಭವಿಯ ಸ್ಟೇಟಸ್ ಪರಿಶೀಲನೆ ಪ್ರಕ್ರಿಯೆ


  • pmkisan.gov.in ನಲ್ಲಿ ಅಧಿಕೃತ PM-KISAN ವೆಬ್‌ಸೈಟ್‌ಗೆ ಭೇಟಿ ನೀಡಿ.

  • ‘Farmers Corner’ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ ‘Beneficiary Status’ ಮೇಲೆ ಕ್ಲಿಕ್ ಮಾಡಿ.

  • ನಿಮ್ಮ ಆಧಾರ್ ಅಥವಾ ನೋಂದಾಯಿತ ಬ್ಯಾಂಕ್ ಖಾತೆ ಸಂಖ್ಯೆ ವಿವರಗಳನ್ನು ನಮೂದಿಸಿ, ಮತ್ತು ‘Get Data’ ಮೇಲೆ ಕ್ಲಿಕ್ ಮಾಡಿ. ನಿಮ್ಮ ಸ್ಟೇಟಸ್ ಪರದೆಯ ಮೇಲೆ ಕಾಣಿಸುತ್ತದೆ.

  • ಇ-ಕೆವೈಸಿ ಫಾರ್ಮಾಲಿಟಿಗಳನ್ನು ಪೂರ್ಣಗೊಳಿಸಿ (ಯೋಜನೆಯಡಿಯಲ್ಲಿ ಹಣಕಾಸಿನ ನೆರವು ಪಡೆಯಲು, e-KYC ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ರೈತರು ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಅಥವಾ ಒಟಿಪಿ ಆಧಾರಿತ ಇ-ಕೆವೈಸಿ ಆಯ್ಕೆ ಮಾಡಬಹುದು.)


 


OTP-ಆಧಾರಿತ e-KYC ಗಾಗಿ ಅನುಸರಿಸಬೇಕಾದ ಹಂತಗಳು


  • https://pmkisan.gov.in/ ಗೆ ಭೇಟಿ ನೀಡಿ

  • ‘Farmers Corner’ ನಲ್ಲಿ, e-KYC ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

  • ನಿಮ್ಮ ಆಧಾರ್ ವಿವರಗಳು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

  • ಪರಿಶೀಲನೆಗಾಗಿ ನಿಮ್ಮ ಮೊಬೈಲ್‌’ಗೆ OTP ಕಳುಹಿಸಲಾಗುತ್ತದೆ.

  • e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಲು OTP ಅನ್ನು ನಮೂದಿಸಿ.

  • ಬಯೋಮೆಟ್ರಿಕ್ ಆಧಾರಿತ e-KYC ಗಾಗಿ, ಸಾಮಾನ್ಯ ಸೇವಾ ಕೇಂದ್ರಗಳು (CSC) ಅಥವಾ ರಾಜ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು


ಇದನ್ನೂ ಓದಿ: ರೇಣುಕಾಸ್ವಾಮಿ ಪರ ಪಿ ಪ್ರಸನ್ನ ಕುಮಾರ್ ವಾದ: ಈ ಪಬ್ಲಿಕ್ ಪ್ರಾಸಿಕ್ಯೂಟರ್ ಹಿನ್ನೆಲೆ ಕೇಳಿ ದರ್ಶನ್’ಗೆ ಶುರುವಾಯ್ತು ನಡುಕ! ಅಷ್ಟಕ್ಕೂ ಅವರ್ಯಾರು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ