ಟಿ20 ವಿಶ್ವಕಪ್’ನಲ್ಲಿ ಸೆಮೀಸ್ ಪ್ರವೇಶಿಸಬೇಕಂದ್ರೆ ಈ 3 ಕಠಿಣ ಸವಾಲು ಜಯಿಸಲೇಬೇಕು ಟೀಂ ಇಂಡಿಯಾ!

Team India: T20 ವಿಶ್ವಕಪ್ 2024 ಗುಂಪು ಪಂದ್ಯಗಳು ಅಂತಿಮ ಹಂತವನ್ನು ತಲುಪಿವೆ. ಯಾವ ತಂಡಗಳು ಸೂಪರ್-8 ತಲುಪಿವೆ ಎಂಬುದು ಬಹಿರಂಗವಾಗಿದೆ. ಗ್ರೂಪ್-ಎಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಈಗಾಗಲೇ ಸೂಪರ್-8ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ.a

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

T20 ವಿಶ್ವಕಪ್ 2024 ಗುಂಪು ಪಂದ್ಯಗಳು ಅಂತಿಮ ಹಂತವನ್ನು ತಲುಪಿವೆ. ಯಾವ ತಂಡಗಳು ಸೂಪರ್-8 ತಲುಪಿವೆ ಎಂಬುದು ಬಹಿರಂಗವಾಗಿದೆ. ಗ್ರೂಪ್-ಎಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಈಗಾಗಲೇ ಸೂಪರ್-8ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ.

2 /8

ಆದರೆ ಈ ಹಂತದಲ್ಲಿ ಟೀಂ ಇಂಡಿಯಾ ಇತರ ತಂಡಗಳಿಂದ ಕಠಿಣ ಪೈಪೋಟಿ ಎದುರಿಸಲಿದೆ. ಮತ್ತೊಂದೆಡೆ, ಬಾಂಗ್ಲಾದೇಶ ತನ್ನ ಕೊನೆಯ ಪಂದ್ಯದಲ್ಲಿ ನೇಪಾಳವನ್ನು ಸೋಲಿಸಿ ಸೂಪರ್ 8 ಫೈನಲ್‌’ಗೆ ಪ್ರವೇಶಿಸಿತು. ಈ ಮೂಲಕ ನೆದರ್ಲೆಂಡ್ಸ್ ಅನ್ನು ಟೂರ್ನಿಯಿಂದ ಹೊರಹಾಕಿತು.

3 /8

ಟಿ20 ವಿಶ್ವಕಪ್ ಸೂಪರ್ 8 ಎರಡು ಗುಂಪುಗಳನ್ನು ಹೊಂದಿರುತ್ತದೆ. ಗುಂಪು 1 ಭಾರತ (A1), ಆಸ್ಟ್ರೇಲಿಯಾ (B2), ಅಫ್ಘಾನಿಸ್ತಾನ (C1), ಬಾಂಗ್ಲಾದೇಶ (D2); ಗುಂಪು 2 ಯುಎಸ್ಎ (ಎ2), ಇಂಗ್ಲೆಂಡ್ (ಬಿ1), ವೆಸ್ಟ್ ಇಂಡೀಸ್ (ಸಿ2), ದಕ್ಷಿಣ ಆಫ್ರಿಕಾ (ಡಿ1) ಒಳಗೊಂಡಿದೆ.

4 /8

ಸೂಪರ್-8ರಲ್ಲಿ ಭಾರತ ಮೂರು ತಂಡಗಳ ವಿರುದ್ಧ ಪಂದ್ಯಗಳನ್ನು ಆಡಲಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯವು ಬಾರ್ಬಡೋಸ್‌’ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಜೂನ್ 20 ರಂದು (ರಾತ್ರಿ 8) ನಡೆಯಲಿದೆ. ಜೂನ್ 22 ರಂದು ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಎದುರಿಸಲಿದೆ. ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

5 /8

ಜೂನ್ 24 ರಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯವಿದೆ. ಸೇಂಟ್ ಲೂಸಿಯಾದ ಡ್ಯಾರೆನ್ ಸಮ್ಮಿ ಕ್ರಿಕೆಟ್ ಮೈದಾನದಲ್ಲಿ ರಾತ್ರಿ 8 ಗಂಟೆಯಿಂದ ಆ ಪಂದ್ಯ ನಡೆಯಲಿದೆ. ಆದರೆ ಸೂಪರ್-8 ಹಂತದಲ್ಲಿ ಮುನ್ನಡೆಯುವುದು ಭಾರತಕ್ಕೆ ಅಷ್ಟು ಸುಲಭವಲ್ಲ. ಏಕೆಂದರೆ ಟೂರ್ನಿಯಲ್ಲಿ ಬಹುತೇಕ ಎಲ್ಲ ತಂಡಗಳು ಕಠಿಣ ಪೈಪೋಟಿ ನೀಡಿದ್ದವೇ... ಸೂಪರ್-8 ಹಂತದಲ್ಲಿ ಭಾರತ ಮೂರು ಕಠಿಣ ಸವಾಲುಗಳನ್ನು ಎದುರಿಸಲಿದೆ.

6 /8

ಸ್ಪಿನ್ ಕಾಂಬಿನೇಷನ್: ಭಾರತವು ಟಿ20 ವಿಶ್ವಕಪ್‌’ನಲ್ಲಿ ಇಲ್ಲಿಯವರೆಗೆ ವೇಗದ ಲೈನ್-ಅಪ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ ಸೂಪರ್-8 ಪಂದ್ಯಗಳು ನಡೆಯುವ ವೆಸ್ಟ್ ಇಂಡೀಸ್ ನಿಧಾನಗತಿಯ, ತಿರುಗುವ ಪಿಚ್‌’ಗಳನ್ನು ಹೊಂದಿದೆ. ಅಂದರೆ ಸ್ಪಿನ್ನರ್‌’ಗಳನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕು. ಯುಜ್ವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ಇದುವರೆಗೆ ಟೂರ್ನಿಯಲ್ಲಿ ಆಡಿಲ್ಲ. ಆದರೆ ಮುಂದಿನ ಹಂತದಲ್ಲಿ ಕನಿಷ್ಠ ಒಬ್ಬರು ಅಥವಾ ಇಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು.

7 /8

ಪ್ರತಿಕೂಲ ಸಂದರ್ಭಗಳು : T20 ವಿಶ್ವಕಪ್‌’ನಲ್ಲಿ ಭಾರತದ ಗುಂಪು ಹಂತದ ಪಂದ್ಯಗಳನ್ನು USA ನಲ್ಲಿ ಆಡಲಾಯಿತು. ಆದರೆ ಟೀಂ ಇಂಡಿಯಾ ಸೂಪರ್-8 ಗಾಗಿ ವೆಸ್ಟ್ ಇಂಡೀಸ್‌’ಗೆ ತೆರಳಲಿದೆ. ಈ ಎರಡು ದೇಶಗಳಲ್ಲಿನ ಪರಿಸ್ಥಿತಿಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಕೆಲವು ಪಿಚ್‌’ಗಳು ವೇಗಿಗಳಿಗೆ ಸ್ನೇಹಿ ಎನಿಸಿದರೆ, ಇನ್ನು ಕೆಲವು ಸ್ಪಿನ್ನರ್‌’ಗಳ ಪರವಾಗಿವೆ. ಭಾರತದ ಆಟದ ಯೋಜನೆಯು ಈ ವಿಭಿನ್ನ ಸನ್ನಿವೇಶಗಳಿಗೆ ಹೊಂದಿಕೊಳ್ಳಬೇಕು. ಕೆರಿಬಿಯನ್‌ನಲ್ಲಿನ ವಿಭಿನ್ನ ಪಿಚ್ ಪರಿಸ್ಥಿತಿಗಳಿಗೆ ತಕ್ಕಂತೆ ಟೀಮ್ ಇಂಡಿಯಾ ತನ್ನ ತಂತ್ರಗಳನ್ನು ಬದಲಾಯಿಸಬೇಕಾಗಿದೆ.

8 /8

ಬಲಿಷ್ಠ ಎದುರಾಳಿ ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ವಿರುದ್ಧದ ಸ್ಪರ್ಧೆ ಭಾರತಕ್ಕೆ ಯಾವಾಗಲೂ ಕಠಿಣ ಸವಾಲು. ಗ್ರೂಪ್-1ರಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಹೊರತುಪಡಿಸಿ ಈ ಗುಂಪಿನ ಇತರ ತಂಡಗಳ ವಿರುದ್ಧ ನಮ್ಮ ತಂಡ ಉತ್ತಮ ದಾಖಲೆ ಹೊಂದಿದೆ. ಟಿ20 ವಿಶ್ವಕಪ್‌’ನಲ್ಲಿ ಕಾಂಗರೂಗಳ ವಿರುದ್ಧ ಭಾರತ 3-2 ಮುನ್ನಡೆ ಸಾಧಿಸಿದ್ದರೂ, ಐಸಿಸಿ ಈವೆಂಟ್‌’ಗಳಲ್ಲಿ ತಂಡವು ಭಾರತವನ್ನು ಹಲವು ಬಾರಿ ಸೋಲಿಸಿದೆ.