ನವದೆಹಲಿ:  2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ ಹಿನ್ನಲೆಯಲ್ಲಿ  ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೆಸರಿನ ಮುಂದಿದ್ದ ಚೌಕಿದಾರ್ ಪದವನ್ನು ಕೈಬಿಟ್ಟಿದ್ದಾರೆ.



COMMERCIAL BREAK
SCROLL TO CONTINUE READING

ಈಗ ತಮ್ಮ ಅಧಿಕೃತ ಟ್ವೀಟ್ ಮೂಲಕ ತಿಳಿಸಿರುವ ಮೋದಿ " ಈ ಸಂದರ್ಭದಲ್ಲಿ ಚೌಕಿದಾರ್ ನ ಸ್ಫೂರ್ತಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ.ಈ ಸ್ಫೂರ್ತಿಯನ್ನು ಭಾರತದ ಅಭಿವೃದ್ದಿಗಾಗಿ ಪ್ರತಿ ಕ್ಷಣ ಜೀವಂತವಾಗಿರಿಸಬೇಕಾಗಿದೆ.  ಚೌಕಿದಾರ್ ಪದ ನನ್ನ ಟ್ವಿಟ್ಟರ್ ಖಾತೆಯಿಂದ ಕೈ ಬಿಡಲಾಗುವುದು. ಆದರೆ ಅದು ನನ್ನ ಜೀವನದ ಭಾಗವಾಗಿರುತ್ತದೆ .ಆದ್ದರಿಂದ ನಾನು ನಿಮ್ಮಲ್ಲರಿಗೂ ಕೂಡ ಅದೇ ರೀತಿ ಮಾಡಬೇಕೆಂದು ನಾನು ವಿನಂತಿಸಿಕೊಳ್ಳುತ್ತೇನೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. 


ಪ್ರಧಾನಿ ಮೋದಿ ಮಾರ್ಚ್ ನಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಪ್ರಾರಂಭಿಸಿದ ಮೈ ಭಿ ಚೌಕಿದಾರ್ ಅಭಿಯಾನದ ಭಾಗವಾಗಿ ಚೌಕಿದಾರ್ ಪದವನ್ನು ಅಳವಡಿಸಿಕೊಂಡಿದ್ದರು. ಇದನ್ನೇ ಬಿಜೆಪಿ ಮಂತ್ರಿಗಳು ಹಾಗೂ ಶಾಸಕರು ಕಾರ್ಯಕರ್ತರು ಇದನ್ನು ಅನುಸರಿಸಿದ್ದರು.