`ಬೆತ್ತದಿಂದ ಬಾರಿಸುವ` ರಾಹುಲ್ ಹೇಳಿಕೆಗೆ ಪ್ರಧಾನಿ ನೀಡಿದ ಉತ್ತರವೇನು?
ಬುಧವಾರ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮುಂದಿನ ಆರು ತಿಂಗಳುಗಳ ಬಳಿಕ ದೇಶದ ಯುವಕರು ಪ್ರಧಾನಿ ಮೋದಿ ಅವರನ್ನು ಬೆತ್ತದಿಂದ ಬಾರಿಸಲಿದ್ದಾರೆ ಎಂಬ ಹೇಳಿಕೆ ನೀಡಿದ್ದರು.
ನವದೆಹಲಿ:ಬುಧವಾರ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮುಂದಿನ ಆರು ತಿಂಗಳುಗಳ ಬಳಿಕ ದೇಶದ ಯುವಕರು ಪ್ರಧಾನಿ ಮೋದಿ ಅವರನ್ನು ಬೆತ್ತದಿಂದ ಬಾರಿಸಲಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಕುರಿತು ಇಂದು ಲೋಕಸಭೆಯಲ್ಲಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ ಯುವಕರ ನೀಡಲಿರುವ ಬೆತ್ತದ ಏಟುಗಳನ್ನು ಸಹಿಸಿಕೊಳ್ಳಲು ತಾವು ತಮ್ಮ ಸೂರ್ಯನಮಸ್ಕಾರಗಳ ಸಂಖ್ಯೆಯಲ್ಲಿ ಏರಿಕೆ ಮಾಡುವುದಾಗಿ ಹೇಳಿ ವ್ಯಂಗ್ಯವಾಡಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಪ್ರಸ್ತಾಪ ಸಲ್ಲಿಸುವ ವೇಳೆ ಮೋದಿ ಈ ಹೇಳಿಕೆ ನೀಡಿದ್ದಾರೆ. ಈ ವೇಳೆ ಸದನದಲ್ಲಿಯೇ ಉಪಸ್ಥಿತರಿದ್ದ ರಾಹುಲ್, ಪ್ರಧಾನಿಗೆ ಉತ್ತರಿಸಲು ಮೇಲೆದ್ದರಾದರೂ ಕೂಡ ಈ ವೇಳೆ ಉಂಟಾದ ಗದ್ದಲದ ನಡುವೆ ಅವರ ಧ್ವನಿ ಮಾಯವಾಗಿದೆ. ಇದಕ್ಕೂ ಕೂಡ ಹಾಸ್ಯದಲ್ಲಿಯೇ ಉತ್ತರಿಸಿರುವ ಪ್ರಧಾನಿ "ನಾನು ಕಳೆದ 30 ರಿಂದ 40 ನಿಮಿಷಗಳಿಂದ ಮಾತನಾಡುತ್ತಿದ್ದೇನೆ, ಆದರೆ, ಅಲ್ಲಿಯವರೆಗೆ ಈಗ ಕರೆಂಟ್ ತಲುಪಿದ್ದು, ಕೆಲ ಟ್ಯೂಬ್ ಲೈಟ್ ಗಳೂ ಹೀಗೂ ಇರುತ್ತವೆ" ಎಂದು ವ್ಯಂಗ್ಯವಾಡಿದ್ದಾರೆ.
ಭಾಷಣದಲ್ಲಿ ರಾಹುಲ್ ನೀಡಿರುವ ಹೇಳಿಕೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ, "ಮುಂದಿನ 6 ತಿಂಗಳುಗಳ ಬಳಿಕ ಈ ದೇಶದ ಯುವಕರು ತಮ್ಮನ್ನು ಬೆಟ್ಟದಿಂದ ಬಾರಿಸಲಿದ್ದಾರೆ ಎಂದು ಕಾಂಗ್ರೆಸ್ ನ ಮುಖಂಡರೊಬ್ಬರು ಹೇಳಿದ್ದಾರೆ. ಹೀಗಾದರೆ ಅದು ತಮ್ಮ ಪಾಲಿಗೆ ತುಂಬಾ ಕಷ್ಟಕರವಾಗಿ ಪರಿಣಮಿಸಲಿದೆ. ಆದ್ದರಿಂದ, ಆ ಸನ್ನಿವೇಶವನ್ನು ಎದುರಿಸಲು ತಾವು ಈಗಲೇ ಸಿದ್ಧತೆಯನ್ನು ಆರಂಭಿಸಿದ್ದು, ತಮ್ಮ ಬಳಿ ಇನ್ನೂ ಆರು ತಿಂಗಳ ಕಾಲಾವಕಾಶ ಇದೆ" ಎಂದಿದ್ದಾರೆ.
ಈ ಸಂದರ್ಭದಲ್ಲಿ ತನ್ನ ಯೋಗಾಭ್ಯಾಸದ ಕುರಿತು ಉಲ್ಲೇಖಿಸಿರುವ ಪ್ರಧಾನಿ ಮೋದಿ, "ಮುಂದಿನ ಆರು ತಿಂಗಳಲ್ಲಿ ತಮ್ಮ ಸೂರ್ಯ ನಮಸ್ಕಾರಗಳ ಸಂಖ್ಯೆಯಲ್ಲಿ ಏರಿಕೆ ಮಾಡುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಇದೆ ರೀತಿ ತಾವು ಕಳೆದ 20 ವರ್ಷಗಳಲ್ಲಿ ತಮ್ಮನ್ನು ಬೈಗುಳಗಳಿಂದ ರಕ್ಷಿಸಿಕೊಂಡಿದ್ದೇನೆ ಮತ್ತು ಮುಂದೆಯೂ ಕೂಡ ಸೂರ್ಯ ನಮಸ್ಕಾರ ಮಾಡುವ ಮೂಲಕ ತಮ್ಮ ಶರೀರವನ್ನು ಗಟ್ಟಿಗೊಳಿಸಿ, ಬೆತ್ತದ ಏಟುಗಳನ್ನು ಸಹಿಸಿಕೊಳ್ಳುವೆ ಮತ್ತು ನನಗೆ ಆರು ತಿಂಗಳ ಕಾಲಾವಕಾಶ ನೀಡಿದ್ದಕ್ಕೆ ನಿಮಗೆ ಆಭಾರಿಯಾಗಿದ್ದೇನೆ" ಎಂದಿದ್ದಾರೆ.