ನವದೆಹಲಿ : ಆಮ್ಲಜನಕ ಕೊರತೆ ದೇಶದಲ್ಲಿ ತಾರಕಕ್ಕೇರಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ  (Narendra Modi) ದೇಶದಲ್ಲಿ  ಮೆಡಿಕಲ್ ಆಕ್ಸಿಜನ್ ಪೂರೈಕೆ ಕುರಿತ   ಉನ್ನತ ಸಭೆ  ನಡೆಸಿದರು.  ಮೆಡಿಕಲ್ ಆಮ್ಲಜನಕದ  (Medical Oxygen) ಉತ್ಪಾದನೆ, ತ್ವರಿತ ಪೂರೈಕೆ ಹಾಗೂ ರೋಗಿಗಳಿಗೆ ಸುಲಭವಾಗಿ ಸಿಗುವ ವಿಧಾನಗಳ ಕುರಿತು ಪ್ರಧಾನಿ ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಆಕ್ಸಿಜನ್ ಪೂರೈಕೆಗೆ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳು ಪ್ರಧಾನ ಮಂತ್ರಿಗೆ ವಿವರವಾಗಿ ತಿಳಿಸಿಕೊಟ್ಟರು. 


COMMERCIAL BREAK
SCROLL TO CONTINUE READING

ಪ್ರಧಾನ ಮಂತ್ರಿ (PM Modi) ನೇತೃತ್ವದಲ್ಲಿ ನಡೆದ  ಈ ಹೈಲೆವೆಲ್ ಮೀಟಿಂಗ್ ನಲ್ಲಿ ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಸಂಪುಟ  ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಮತ್ತಿತರರು ಪಾಲ್ಗೊಂಡಿದ್ದರು.  ರಾಜ್ಯಗಳಿಗೆ ಆಮ್ಲಜನಕ ಪೂರೈಕೆ (Oxygen ) ಪ್ರಕ್ರಿಯೆಗೆ ಯಾವುದೇ ಕಾರಣಕ್ಕೂ ತಡೆ ಉಂಟಾಗಬಾರದು. ಆಮ್ಲಜನಕ ಉತ್ಪಾದನೆ ಹೆಚ್ಚಳದ ಬಗ್ಗೆ ಮೋದಿ ನಿರ್ದೇಶನ ನೀಡಿದರು. 


ಇದನ್ನೂ ಓದಿ :    'National emergency': ಸಧ್ಯದ ಭಾರತದ ಪರಿಸ್ಥಿತಿ 'ರಾಷ್ಟ್ರೀಯ ತುರ್ತು ಪರಿಸ್ಥಿತಿ'ಯ ಹಾಗಿದೆ..!


ಪ್ರಧಾನಿ ಮೋದಿ ಸಭೆಯ ಹೈಲೈಟ್ಸ್ :


1. ರಾಜ್ಯಗಳ ಸಹಕಾರದೊಂದಿಗೆ ಪ್ರಸ್ತಾವಿತ ಆಕ್ಸಿಜನ್ ಪ್ಲಾಂಟ್ ಗಳನ್ನು (Oxygen Plant) ಆದಷ್ಟು ಬೇಗ ಶುರು ಮಾಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ಪ್ರಧಾನಿಗೆ ತಿಳಿಸಿದರು. 


2. ಇತ್ತೀಚೆಗೆ ಲಿಕ್ವಿಡ್ ಆಕ್ಸಿಜನ್ (Liquid Oxygen) ಉತ್ಪಾದನೆಯಲ್ಲಿ ಪ್ರತಿ ದಿನ 3300 ಮೆಟ್ರಿಕ್ ಟನ್ ಏರಿಕೆ ಉಂಟಾಗಿದೆ. ಖಾಸಗಿ ಕಂಪನಿಗಳು, ಸರ್ಕಾರಿ ಉಕ್ಕು ಕಂಪನಿಗಳು ಇತರ ಕಂಪನಿಗಳು, ಆಮ್ಲಜನಕ ಉತ್ಪಾದಕರ ಕೊಡುಗೆ ಇದರಲ್ಲಿ ಅತ್ಯಂತ ಹೆಚ್ಚಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಹೇಳಿದರು. 


3. ಅನಿವಾರ್ಯವಲ್ಲದ ಕೈಗಾರಿಕಾ ಉದ್ದೇಶಗಳಿಗೆ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಪ್ರಧಾನಿಗೆ (Narendra Modi) ಹೇಳಿದರು. 


ಇದನ್ನೂ ಓದಿ :    Corona vaccination : 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಇಲ್ಲಿದೆ ಅತಿ ಮುಖ್ಯ ಮಾಹಿತಿ


4. ರಾಜ್ಯಗಳಿಗೆ ಅಗತ್ಯಕ್ಕೆ ತಕ್ಕಷ್ಟು ಆಮ್ಲಜನಕ ಪೂರೈಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳ ಜೊತೆ ಮಾತುಕತೆ ನಡೆಯುತ್ತಿದೆ.  21 ಏಪ್ರಿಲ್ ನಿಂದ 20 ರಾಜ್ಯಗಳಿಂದ ಪ್ರತಿ ದಿನ 6785 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಬೇಡಿಕೆ ಬರುತ್ತಿದೆ.  ಸರ್ಕಾರದ ಕಡೆಯಿಂದ 6800 ಮೆಟ್ರಿಕ್ ಟನ್ ಆಕ್ಸಿಜನ್ ಸರ್ಕಾರದ ಕಡೆಯಿಂದ ನೀಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.