Manmohan Singh: ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪಿಎಂ ಮನಮೋಹನ್ ಸಿಂಗ್! ಯಾಕೆ?

ಕೊರೋನಾ ವಿರುದ್ಧದ ನಮ್ಮ ಹೋರಾಟಕ್ಕಾಗಿ ವ್ಯಾಕ್ಸಿನೇಷನ್ ವಿತರಣೆಯನ್ನು ಹೆಚ್ಚಿಸಬೇಕು.

Last Updated : Apr 18, 2021, 04:44 PM IST
  • ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ
  • ಕೊರೋನಾ ವಿರುದ್ಧದ ನಮ್ಮ ಹೋರಾಟಕ್ಕಾಗಿ ವ್ಯಾಕ್ಸಿನೇಷನ್ ವಿತರಣೆಯನ್ನು ಹೆಚ್ಚಿಸಬೇಕು.
  • ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
Manmohan Singh: ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪಿಎಂ ಮನಮೋಹನ್ ಸಿಂಗ್! ಯಾಕೆ? title=

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೊರೋನಾ ಲಸಿಕೆ ವಿತರಣೆ ಕುರಿತು ಪತ್ರ ಬರೆದಿದ್ದಾರೆ.

ಪತ್ರದಲ್ಲಿ "ಕೊರೋನಾ(Corona) ವಿರುದ್ಧದ ನಮ್ಮ ಹೋರಾಟಕ್ಕಾಗಿ ವ್ಯಾಕ್ಸಿನೇಷನ್ ವಿತರಣೆಯನ್ನು ಹೆಚ್ಚಿಸಬೇಕು. ಲಸಿಕೆ ಹಾಕುವ ಸಂಪೂರ್ಣ ಸಂಖ್ಯೆಗಳನ್ನು ನೋಡುವ ಪ್ರಲೋಭನೆಯನ್ನು ನಾವು ವಿರೋಧಿಸಬೇಕು ಮತ್ತು ಲಸಿಕೆ ಹಾಕಿದ ಜನಸಂಖ್ಯೆಯ ಶೇಕಡಾವಾರು ಮೇಲೆ ಕೇಂದ್ರೀಕರಿಸಬೇಕು.

ಇದನ್ನೂ ಓದಿ: Arvind Kejriwal: 'ದೆಹಲಿಯಲ್ಲಿ ಕೊರೋನಾ ರೋಗಿಗಳಿಗೆ 100 ಕ್ಕಿಂತ ಕಡಿಮೆ ICU ಬೆಡ್ '

ಮುಂದಿನ ಆರು ತಿಂಗಳವರೆಗೆ ಇರಿಸಲಾಗಿರುವ ಕೊವಿಡ್ ಲಸಿಕೆ(covid-19 vaccine) ಆದೇಶಗಳನ್ನು ಮತ್ತು ರಾಜ್ಯಗಳಿಗೆ ಲಸಿಕೆಗಳನ್ನು ಹೇಗೆ ವಿತರಿಸಲಾಗುವುದು ಎಂದು ಕೇಂದ್ರವು ಹೇಳಬೇಕು.

ಭಾರತವು ಪ್ರಸ್ತುತ ತನ್ನ 137 ಕೋಟಿಗಿಂದ ಹೆಚ್ಚಿರುವ ಜನಸಂಖ್ಯೆಯಲ್ಲಿ ಒಂದು ಚಿಕ್ಕ ಭಾಗಕ್ಕೆ ಮಾತ್ರ ಲಸಿಕೆ(Vaccine) ನೀಡಿದೆ. ಸರಿಯಾದ ನೀತಿ ವಿನ್ಯಾಸದೊಂದಿಗೆ, “ನಾವು ಹೆಚ್ಚು ಉತ್ತಮವಾಗಿ ಮತ್ತು ತ್ವರಿತವಾಗಿ ಮಾಡಬಹುದು ಲಸಿಕೆ ವಿತರಣೆ ಮಾಡುವ ಕೆಲಸ ಮಾಡಬೇಕು.

ಇದನ್ನೂ ಓದಿ: "ಕೊರೊನಾ ವಿಚಾರದಲ್ಲಿ ಇತರ ದೇಶಗಳಿಂದ ಭಾರತ ಪಾಠ ಕಲಿತಿಲ್ಲ"

"ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಾವು ಅನೇಕ ಕೆಲಸಗಳನ್ನು ಮಾಡಬೇಕು ಆದರೆ ಈ ಪ್ರಯತ್ನದ ಒಂದು ದೊಡ್ಡ ಭಾಗವು ವ್ಯಾಕ್ಸಿನೇಷನ್ ವಿತರೆಯನ್ನು ಹೆಚ್ಚಿಸಿಕೊಳ್ಳಬೇಕು" ಹೀಗೆ ಇನ್ನು ಹಲವಾರು ಸಲಹೆಗಳನ್ನು ತಿಳಿಸಿದ್ದಾರೆ.

ನೀವು ಸಹಕಾರದ ಮನೋಭಾವದಿಂದ ಪರಿಗಣಿಸುತ್ತಿರಿರ ಎಂದು ನಾನು ಈ ಸಲಹೆಗಳನ್ನು ನೀಡುತ್ತಿದ್ದೇನೆ ಎಂದು ಸಿಂಗ್(Manmohan Singh) ಹೇಳಿದರು.

ಇದನ್ನೂ ಓದಿ: JEE Main Exam 2021 ಸ್ಥಗಿತ, NTAನಿಂದ ಮಹತ್ವದ ನಿರ್ಧಾರ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಕೊವಿಡ್(COVID-19) ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬೇಕಾದ ಪ್ರಯತ್ನಗಳ ಬಗ್ಗೆ ಚರ್ಚಿಸಿದ ಒಂದು ದಿನದ ನಂತರ ಈ ಸಲಹೆಗಳನ್ನು ನೀಡಲಾಗಿದೆ.

ಕಳೆದ ನಾಲ್ಕು ದಿನಗಳಲ್ಲಿ ದೇಶದಲ್ಲಿ ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News