ಫೆಬ್ರವರಿಯಲ್ಲಿ ಪ್ಯಾಲೆಸ್ಟೈನ್, ಯುಎಇ, ಒಮಾನ್ ದೇಶಗಳಿಗೆ ಪ್ರಧಾನಿ ಮೋದಿ ಭೇಟಿ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಪ್ಯಾಲೆಸ್ಟೈನ್ ಮತ್ತು ಒಮಾನ್ ಗೆ ಭೇಟಿ ನೀಡುತ್ತಿದ್ದು, ಯುಎಇಗೆ ಎರಡನೆಯ ಭೇಟಿ ಇದಾಗಿದೆ.
ನವದೆಹಲಿ : ಪ್ಯಾಲೆಸ್ಟೈನ್, ಯುನೈಟೆಡ್ ಅರಬ್ ಎಮರೈಟ್ಸ್(ಯುಎಇ) ಮತ್ತು ಒಮಾನ್ ದೇಶಗಳಿಗೆ ಫೆಬ್ರವರಿ 9 ರಿಂದ 12 ರವರೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ ಎಂದು MEA ತಿಳಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಪ್ಯಾಲೆಸ್ಟೈನ್ ಮತ್ತು ಒಮಾನ್ ಗೆ ಭೇಟಿ ನೀಡುತ್ತಿದ್ದು, ಯುಎಇಗೆ ಎರಡನೆಯ ಭೇಟಿ ಇದಾಗಿದೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಇತರ ರಾಷ್ಟ್ರಗಳ ನಾಯಕರೊಂದಿಗೆ ಪರಸ್ಪರ ಆಸಕ್ತಿಯ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಲಿದ್ದಾರೆ. ಅಲ್ಲದೆ, ದುಬೈನಲ್ಲಿ ನಡೆಯಲಿರುವ ಆರನೇ ವಿಶ್ವ ಸರ್ಕಾರದ ಶೃಂಗಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಅದರಲ್ಲಿ ಭಾರತವು 'ಅತಿಥಿ ಗೌರವ' ಸ್ಥಾನಮಾನವನ್ನು ಹೊಂದಿದೆ.
ಅವರು ಕ್ರಮವಾಗಿ ಯುಎಇ ಮತ್ತು ಓಮನ್ ದೇಶಗಳಲ್ಲಿ ಭಾರತೀಯ ಸಮುದಾಯವನ್ನೂ ಭೇಟಿಯಾಗಲಿದ್ದಾರೆ.