ಅನ್ನದಾತ ಹಾಗೂ ಸಣ್ಣ ವ್ಯಾಪಾರಿಗಳ ಪರ ಕೈಗೊಂಡ ನಿರ್ಣಯದ ಕುರಿತು PM ಮೋದಿ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎರಡನೇ ಕಾಲಾವಧಿಯ ಎರಡನೇ ವರ್ಷದ ಮೊದಲ ಸಚಿವ ಸಂಪುಟ ಸಭೆಯನ್ನು ಸೋಮವಾರ ನಡೆಸಿದೆ. ಈ ಸಭೆಯಲ್ಲಿ ರೈತರು ಹಾಗೂ ಬೀದಿ ಬದಿಯ ವರ್ತಕರು, ಸೂಕ್ಷ್ಮ, ಮಧ್ಯಮ ಹಾಗೂ ಸಣ್ಣ ಉದ್ಯಮಿದಾರರ ಕುರಿತು ದೊಡ್ಡ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎರಡನೇ ಕಾಲಾವಧಿಯ ಎರಡನೇ ವರ್ಷದ ಮೊದಲ ಸಚಿವ ಸಂಪುಟ ಸಭೆಯನ್ನು ಸೋಮವಾರ ನಡೆಸಿದೆ. ಈ ಸಭೆಯಲ್ಲಿ ರೈತರು ಹಾಗೂ ಬೀದಿ ಬದಿಯ ವರ್ತಕರು, ಸೂಕ್ಷ್ಮ, ಮಧ್ಯಮ ಹಾಗೂ ಸಣ್ಣ ಉದ್ಯಮಿದಾರರ ಕುರಿತು ದೊಡ್ಡ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದಲ್ಲದೆ 'ಆತ್ಮನಿರ್ಭರ್ ಭಾರತ್' ಯೋಜನೆಗೆ ರೋಡ್ ಮ್ಯಾಪ್ ಪ್ರಸ್ತುತ ಪಡಿಸಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಪ್ರಧಾನಿ ಮೋದಿ 'ಸ್ವಾವಲಂಭಿ ಭಾರತ' ಯೋಜನೆಗೆ ವೇಗ ನೀಡುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಚಿವ ಸಂಪುಟ ಸಭೆಯ ಕುರಿತು ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಧಿಸಿದಂತೆ ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಪ್ರಧಾನಿ, "ಜೈ ಕಿಸಾನ್ ಮಂತ್ರವನ್ನು ಮುಂದುವರೆಸಿ ಸಚಿವ ಸಂಪುಟ ದೇಶದ ಅನ್ನದಾತರ ಪರವಾಗಿ ದೊಡ್ಡ ನಿರ್ಣಯಗಳನ್ನು ಕೈಗೊಂಡಿದೆ. ಇದರಲ್ಲಿ ಖಾರೀಫ್ ಹಂಗಾಮಿನ 14 ಬೆಳೆಗಳಿಗಾಗಿ. ಹೂಡಿಕೆಯ 1.5 ರಷ್ಟು ಹೆಚ್ಚುವರಿ ಎಂಎಸ್ಪಿ ನೀಡುವುದನ್ನು ಸುನಿಶ್ಚಿತಗೊಳಿಸಲಾಗಿದೆ. ಜೊತೆಗೆ 3 ಲಕ್ಷ ರೂ. ವರೆಗಿನ ಅಲ್ಪಾವಧಿ ಸಾಲವನ್ನು ಮರುಪಾವತಿಸುವ ಅವಧಿಯನ್ನು ಕೂಡ ಹೆಚ್ಚಿಸಲಾಗಿದೆ" ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, " ದೇಶದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ಬೀದಿ ಬದಿ ವ್ಯಾಪಾರ ನಡೆಸುವವರ ಉದ್ಯೋಗ ಮತ್ತೊಮ್ಮೆ ಸುನಿಶ್ಚಿತಗೊಳಿಸಲು ಸಾಲ ನೀಡುವ ವ್ಯವಸ್ಥೆ ಮಾಡಿದೆ. 'PM ಸ್ವನಿಧಿ' ಯೋಜನೆಯಡಿ 50 ಲಕ್ಷಕ್ಕೂ ಅಧಿಕ ಜನರಿಗೆ ಲಾಭ ಸಿಗಲಿದೆ. ಇದರಿಂದ ಈ ಜನರು ಕೊರಿನಾ ಸಂಕಷ್ಟದ ಸಮಯದಲ್ಲಿಯೂ ಕೂಡ ತಮ್ಮ ವ್ಯಾಪಾರವನ್ನು ಹೊಸ ರೂಪದಲ್ಲಿ ನಿಲ್ಲಿಸಿ, ಆತ್ಮ ನಿರ್ಭರ ಭಾರತಕ್ಕೆ ವೇಗ ನೀಡಲಿದ್ದಾರೆ" ಎಂದು ಹೇಳಿದ್ದಾರೆ.
ಕೊನೆಯಲ್ಲಿ "ಆತ್ಮ ನಿರ್ಭರ ಭಾರತಕ್ಕೆ ವೇಗ ನೀಡಲು ನಾವು ಕೇವಲ MSMEಗಳ ಪರಿಭಾಷೆಯನ್ನು ಬದಲಿಸದೆ, ಅದರಲ್ಲಿ ಹೆಚ್ಚಿನ ಜೀವ ತುಂಬಲು ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ಸಂಕಷ್ಟದಲ್ಲಿ ಸಿಲುಕಿದ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯೋಗಗಳಿಗೆ ಲಾಭ ಸಿಗಲಿದೆ. ಜೊತೆಗೆ ಅಪಾರ ಉದ್ಯೋಗಾವಕಾಶಗಳೂ ಕೂಡ ಸೃಷ್ಟಿಸಲಿವೆ" ಎಂದು ಹೇಳಿದ್ದಾರೆ.