ಪ್ಲಾಸ್ಟಿಕ್ ಬಾಟಲಿ ಮರುಬಳಕೆಯಿಂದ ತಯಾರಿಸಿದ ಜಾಕೆಟ್ ಧರಿಸಿದ ಪ್ರಧಾನಿ ಮೋದಿ!
Narendra Modi Sadri Jacket: ಇಂಡಿಯನ್ ಆಯಿಲ್‌ನ ಗ್ರಾಹಕ ಅಟೆಂಡೆಂಟ್‌ನ ಪ್ರತಿಯೊಂದು ಸಮವಸ್ತ್ರವನ್ನು ಸುಮಾರು 28 ಬಳಸಿದ PET ಬಾಟಲಿಗಳನ್ನು ಮರುಬಳಕೆಯಿಂದ ತಯಾರಿಸಲಾಗಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಪ್ಲಾಸ್ಟಿಕ್ ಬಾಟಲಿ ಮರುಬಳಕೆಯಿಂದ ತಯಾರಿಸಿದ ನೀಲಿ ಬಣ್ಣದ ಜಾಕೆಟ್ ಧರಿಸಿ ಸಂಸತ್ತಿಗೆ ಆಗಮಿಸುವ ಮೂಲಕ ಗಮನ ಸೆಳೆದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಇಂಡಿಯಾ ಎನರ್ಜಿ ವೀಕ್‌ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಈ ಜಾಕೆಟ್‍ಅನ್ನು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿತ್ತು. ಅಂದಿನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿಯವರು ಪ್ರಧಾನಿ ಮೋದಿಯವರಿಗೆ ಈ ಜಾಕೆಟ್ ನೀಡಿ ಗೌರವಿಸಿದ್ದರು. ಇಂದು ಬೆಳಗ್ಗೆ ರಾಜ್ಯಸಭೆಯಲ್ಲಿ ಕುಳಿತಾಗ ಪ್ರಧಾನಿ ಮೋದಿಯವರು ತಿಳಿ ನೀಲಿ ಬಣ್ಣದ “ಸದ್ರಿ” ಜಾಕೆಟ್ ಧರಿಸಿದ್ದರು. ಮೋದಿಯವರು ಧರಿಸಿರುವ ಜಾಕೆಟ್ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಲಾದ ವಸ್ತುಗಳಿಂದ ಮಾಡಲ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಲು ಯಾರ ಒತ್ತಡವೂ ಇರಲಿಲ್ಲ : GVK ಸ್ಪಷ್ಟನೆ
ಇಂಡಿಯಾ ಎನರ್ಜಿ ವೀಕ್‌ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯ "ಅನ್‌ಬಾಟಲ್ಡ್" ಉಪಕ್ರಮದಡಿ ಸಮವಸ್ತ್ರ ಬಿಡುಗಡೆ ಮಾಡಿದಾಗ ಜಾಕೆಟ್ ಅನ್ನು ಪ್ರಧಾನಿ ಮೋದಿಯವರಿಗೆ ನೀಡಲಾಗಿತ್ತು. ಹಂತ ಹಂತವಾಗಿ ಏಕ-ಬಳಕೆಯ ಪ್ಲಾಸ್ಟಿಕ್ ತೆಗೆದುಹಾಕುವ ಪ್ರಧಾನಿ ಮೋದಿಯವರ ಕರೆಗೆ ಅನುಗುಣವಾಗಿ, ಇಂಡಿಯನ್ ಆಯಿಲ್ ಮರುಬಳಕೆಯ ಪಾಲಿಯೆಸ್ಟರ್ (RPET) ಮತ್ತು ಹತ್ತಿಯಿಂದ ಮಾಡಿದ ಸಮವಸ್ತ್ರವನ್ನು ಚಿಲ್ಲರೆ ಗ್ರಾಹಕ ಸಹಾಯಕರು ಮತ್ತು ಎಲ್‌ಪಿಜಿ ವಿತರಣಾ ಸಿಬ್ಬಂದಿಗೆ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡಿಯನ್ ಆಯಿಲ್‌ನ ಗ್ರಾಹಕ ಅಟೆಂಡೆಂಟ್‌ನ ಪ್ರತಿಯೊಂದು ಸಮವಸ್ತ್ರವನ್ನು ಸುಮಾರು 28 ಬಳಸಿದ PET ಬಾಟಲಿಗಳನ್ನು ಮರುಬಳಕೆಯಿಂದ ತಯಾರಿಸಲಾಗಿದೆ. ಐಒಸಿಎಲ್ ವಾರ್ಷಿಕ 10 ಕೋಟಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಟ್ಟೆಯಾಗಿ ಮರುಬಳಕೆ ಮಾಡುತ್ತದೆ. ತ್ಯಾಜ್ಯದ ಬಾಟಲಿಗಳಿಂದ ಬಟ್ಟೆ ತಯಾರಿಸುವ ಪ್ರಕ್ರಿಯೆಯು ತೊಳೆಯುವುದು, ಒಣಗಿಸುವುದು ಮತ್ತು ಸಂಗ್ರಹಿಸಿದ ಬಾಟಲಿಗಳನ್ನು ಸಣ್ಣ ತುಣುಕುಗಳಾಗಿ ಪುಡಿ ಮಾಡುವುದನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: Transgender pregnant : ಯಶಸ್ವಿಯಾಗಿ ʼಗಂಡು ಮಗುʼವಿಗೆ ಜನ್ಮ ನೀಡಿದ ʼಯುವಕʼ..!
ನಿರ್ಮಲಾ ಸೀತಾರಾಮನ್ ಅವರು ಇಂಧನ ಪರಿವರ್ತನೆ ಕ್ಷೇತ್ರಕ್ಕೆ 35 ಸಾವಿರ ಕೋಟಿ ರೂ. ಘೋಷಿಸಿದ್ದರು ಮತ್ತು ಪರಿಸರ ಸ್ನೇಹಿ ಹಸಿರು ಉತ್ತೇಜನವನ್ನು ಸರ್ಕಾರದ 7 ಆದ್ಯತೆಗಳಲ್ಲಿ ಸೇರಿಸಿದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.