Rahul Gandhi : 'ಅದಾನಿ 2014 ರಲ್ಲಿ 609ನೇ ಶ್ರೀಮಂತ, ನಂತರ ಮ್ಯಾಜಿಕ್ ಮೂಲಕ 2ನೇ ಸ್ಥಾನ ತಲುಪಿದ್ದಾರೆ'

'2014 ರಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 609 ನೇ ಸ್ಥಾನದಲ್ಲಿದ್ದರು, ನಂತರ ಮ್ಯಾಜಿಕ್ ಸಂಭವಿಸಿ ಎರಡನೇ ಸ್ಥಾನಕ್ಕೆ ತಲುಪಿದರು. ಅಷ್ಟು ಬೇಗ ಹೇಗೆ ಯಶಸ್ವಿಯಾದರು? ಎಂದು ಕಾಂಗ್ರೆಸ್ ಸಂಸದ ರಾಹುಲ್ ಪ್ರಶ್ನಿಸಿದ್ದಾರೆ.

Written by - Channabasava A Kashinakunti | Last Updated : Feb 7, 2023, 03:55 PM IST
  • 2014 ರಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 609 ನೇ ಸ್ಥಾನದಲ್ಲಿದ್ದರು
  • ಲೋಕಸಭೆಯಲ್ಲಿ ಪ್ರಶ್ನಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ
  • ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ
Rahul Gandhi : 'ಅದಾನಿ 2014 ರಲ್ಲಿ 609ನೇ ಶ್ರೀಮಂತ, ನಂತರ ಮ್ಯಾಜಿಕ್ ಮೂಲಕ 2ನೇ ಸ್ಥಾನ ತಲುಪಿದ್ದಾರೆ' title=

ನವದೆಹಲಿ : '2014 ರಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 609 ನೇ ಸ್ಥಾನದಲ್ಲಿದ್ದರು, ನಂತರ ಮ್ಯಾಜಿಕ್ ಸಂಭವಿಸಿ ಎರಡನೇ ಸ್ಥಾನಕ್ಕೆ ತಲುಪಿದರು. ಅಷ್ಟು ಬೇಗ ಹೇಗೆ ಯಶಸ್ವಿಯಾದರು? ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ವೇಳೆ ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು. ಸೇನೆಯ ಮೇಲೆ ಅಗ್ನಿವೀರ ಯೋಜನೆ ಹೇರುವ ಕೆಲಸವನ್ನು ಸರ್ಕಾರ ಮಾಡಿದೆ. ಈ ಯೋಜನೆಯಿಂದ ಸೇನೆ ಅಸಮಾಧಾನಗೊಂಡಿದೆ. ಈ ಯೋಜನೆ ಬಗ್ಗೆ ಯುವಕರಲ್ಲಿ ಭಯವಿದೆ. ಅಗ್ನಿವೀರ್, ನಿರುದ್ಯೋಗ, ಹಣದುಬ್ಬರ, ರೈತ ಈ ಮಾತುಗಳು ರಾಷ್ಟ್ರಪತಿ ಭಾಷಣದಲ್ಲಿ ಇರಲಿಲ್ಲ. ಸಾರ್ವಜನಿಕರು ಏನೇನೋ ಹೇಳುತ್ತಿದ್ದಾರೆ ಅದನ್ನು ಅಧ್ಯಕ್ಷರ ಭಾಷಣದಲ್ಲೂ ಉಲ್ಲೇಖಿಸಿಲ್ಲ ಎಂದು ಗುಡುಗಿದರು.

 ಇದನ್ನೂ ಓದಿ : ಭೂಕಂಪ ಪೀಡಿತ ಟರ್ಕಿ ದೇಶದ ನೆರವಿಗೆ ಧಾವಿಸಿದ ಭಾರತ

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತದಾದ್ಯಂತ ನನಗೆ ಕೇಳಿಬಂದಿದ್ದು ಒಂದೇ ಹೆಸರು ಅದು ಅದಾನಿ. ಈ ಹೆಸರನ್ನು ಉಲ್ಲೇಖಿಸಿ, ಜನ ಅದಾನಿ ಯಾವುದೇ ವ್ಯವಹಾರದಲ್ಲಿ ಎಂಟ್ರಿ ನೀಡಿದರು ಅದು ಯಶಸ್ವಿಯಾಗುತ್ತೆ, ವಿಫಲರಾಗುವುದಿಲ್ಲ ಎಂದು ಕೇಳುತ್ತಿದ್ದರು. ಇದು ಹೇಗೆ ಸಾಧ್ಯ. ಮೊದಲು ಒಂದೋ ಎರಡೋ ಬಿಜಿನೆಸ್ ನಲ್ಲಿದ್ದ ಇವರು ಇಂದು ಟಾಪ್ 10 ಬ್ಯುಸಿನೆಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಇನ್ನು ಮುಂದುವರೆದು ಮಾತನಾಡಿದ ರಾಹುಲ್ ಗಾಂಧಿ, '2014 ರಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 609 ನೇ ಸ್ಥಾನದಲ್ಲಿದ್ದರು, ನಂತರ ಮ್ಯಾಜಿಕ್ ಸಂಭವಿಸಿ ಎರಡನೇ ಸ್ಥಾನಕ್ಕೆ ತಲುಪಿದರು. ಅಷ್ಟು ಬೇಗ ಹೇಗೆ ಯಶಸ್ವಿಯಾದರು, ದೇಶದ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಸಂಬಂಧವೇನು ಎಂದು ಜನ ಪ್ರಶ್ನಿಸಿಸುತ್ತಿದ್ದಾರೆ. ಹೀಗೆ ಹೇಳಿದ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರೊಂದಿಗೆ ಗೌತಮ್ ಅದಾನಿ ಅವರ ಫೋಟೋವನ್ನು ಸಂಸದರ ಮುಂದೆ ಇಟ್ಟರು.

ಮಾತು ಮುಂದುವರೆಸಿದ ರಾಹುಲ್ ಗಾಂಧಿ, 'ನಾನು ಅದಾನಿ ಮತ್ತು ಮೋದಿ ನಡುವಿನ ಸಂಬಂಧದ ಬಗ್ಗೆ ಹೇಳುತ್ತೇನೆ. ಅದಾನಿ ಪಿಎಂ ಮೋದಿಯವರಿಗೆ ನಿಷ್ಠರಾಗಿದ್ದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ದೆಹಲಿಗೆ ಬಂದಾಗ ನಿಜವಾದ ಮ್ಯಾಜಿಕ್ ಪ್ರಾರಂಭವಾಗುತ್ತದೆ. ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಭಾರತ ಯೋಜನೆ ಸಿದ್ಧಪಡಿಸಿದೆ. ವಿಮಾನ ನಿಲ್ದಾಣದ ವ್ಯವಹಾರದಲ್ಲಿ ಯಾರಾದರೂ ಇಲ್ಲದಿದ್ದರೆ ಅವರನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂಬುದು ಇದಕ್ಕೆ ನಿಯಮವಾಗಿತ್ತು. ಆದರೆ ಈ ನಿಯಮವನ್ನು ಮೋದಿ ಸರ್ಕಾರ ಬದಲಿಸಿ 6 ವಿಮಾನ ನಿಲ್ದಾಣಗಳನ್ನು ಅದಾನಿಗೆ ಹಸ್ತಾಂತರಿಸಿತ್ತು ಎಂದು ಹೇಳಿದರು.

 ಇದನ್ನೂ ಓದಿ : Indian Railways: ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ಬೊಂಬಾಟ್ ಗಿಫ್ಟ್: ಮತ್ತೆ ಬರಲಿದೆ ಈ ವ್ಯವಸ್ಥೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News