ನವದೆಹಲಿ: ಪಾಕಿಸ್ತಾನದ ರಾಷ್ಟ್ರೀಯ ದಿನದಂದು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ನೆರೆಯ ರಾಷ್ಟ್ರಕ್ಕೆ ಶುಭಾಶಯ ಕೋರಿದ್ದಾರೆ. ಪಾಕಿಸ್ತಾನ ರಾಷ್ಟ್ರೀಯ ದಿನದ ಪ್ರಯುಕ್ತ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ದೇಶವು "ಪಾಕಿಸ್ತಾನದ ಜನರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬಯಸುತ್ತದೆ" ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಆದಾಗ್ಯೂ, ನೆರೆಯ ರಾಷ್ಟ್ರಗಳಲ್ಲಿ ನಂಬಿಕೆಯ ಸಂಬಂಧ ಇರಬೇಕು. ಸ್ನೇಹಕ್ಕಾಗಿ ಭಯೋತ್ಪಾದನೆ ಮುಕ್ತ ವಾತಾವರಣ ಅಗತ್ಯ. ನಮ್ಮಲ್ಲಿ  ಭಯೋತ್ಪಾದನೆಗೆ ಸ್ಥಳವಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.


ಪ್ರತಿವರ್ಷ ಮಾರ್ಚ್ 23 ರಂದು ಪಾಕಿಸ್ತಾನದಲ್ಲಿ ಪಾಕಿಸ್ತಾನ್ ರಾಷ್ಟ್ರೀಯ ದಿನವನ್ನು (Pakistan National Day)  ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ನೆರೆಯ ರಾಷ್ಟ್ರಕ್ಕೆ ಪತ್ರದ ಮೂಲಕ ಅಭಿನಂದನೆ ಕಳುಹಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಪಾಕಿಸ್ತಾನ ತನ್ನ ನೀತಿಗಳನ್ನು ಬದಲಾಯಿಸಿದರೆ ಮಾತ್ರ ನೆರೆಹೊರೆಯವರೊಂದಿಗೆ ವ್ಯವಹರಿಸಬಹುದು ಎಂದು ಪಾಕಿಸ್ತಾನ ಸರ್ಕಾರಕ್ಕೆ ಸಲಹೆ ನೀಡಿದರು.


ಎರಡು ವರ್ಷಗಳ ನಂತರ ಜಲ ಹಂಚಿಕೆ ವಿಚಾರವಾಗಿ ಭಾರತ-ಪಾಕ್ ಮಾತುಕತೆ


ಭಯೋತ್ಪಾದನೆ ರಹಿತ ವಾತಾವರಣ ಅತ್ಯಗತ್ಯ :
ನೆರೆಯ ರಾಷ್ಟ್ರಗಳಲ್ಲಿ ನಂಬಿಕೆಯ ಸಂಬಂಧ ಇರಬೇಕು. ಭಯೋತ್ಪಾದನೆಗೆ ಸ್ಥಳವಿಲ್ಲ. ಪಾಕಿಸ್ತಾನದೊಂದಿಗೆ ಸ್ನೇಹ ಸಂಬಂಧವನ್ನು ಭಾರತ ಬಯಸುತ್ತದೆ ಮತ್ತು ಸ್ನೇಹಕ್ಕಾಗಿ ಭಯೋತ್ಪಾದಕ ಮುಕ್ತ ವಾತಾವರಣ ಅಗತ್ಯ. ಪಾಕಿಸ್ತಾನ (Pakistan) ದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಭಾರತ ಬಯಸಿದೆ. ಇದಕ್ಕಾಗಿ ಪರಸ್ಪರ ನಂಬಿಕೆ ಮತ್ತು ಭಯೋತ್ಪಾದನೆಯ ಅಂತ್ಯ ಅಗತ್ಯ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. 


ಇದನ್ನೂ ಓದಿ - ಬಾಂಗ್ಲಾದೇಶ ಭೇಟಿ ವೇಳೆ ಮೋದಿಗೆ ಗರಿಷ್ಟ ಭದ್ರತೆ ಒದಗಿಸಲಾಗುವುದು - ಎ.ಕೆ.ಅಬ್ದುಲ್ ಮೊಮೆನ್


ಇಮ್ರಾನ್ ಖಾನ್‌ಗೆ ಕರೋನಾ ಪಾಸಿಟಿವ್ ಎಂದು ತಿಲಿದಾಗಲೂ ಟ್ವೀಟ್ ಮಾಡಿದ್ದ ಮೋದಿ:
ಇದಕ್ಕೂ ಮೊದಲು ಇಮ್ರಾನ್ ಖಾನ್ (Imran Khan) ಕರೋನಾ ಪಾಸಿಟಿವ್ ಆಗಿದ್ದಾರೆ ಎಂಬ ಮಾಹಿತಿಯ ನಂತರವೂ ಪಿಎಂ ಮೋದಿ ಟ್ವೀಟ್ ಮಾಡಿದ್ದರು. ಈ ಪತ್ರದಲ್ಲೂ ಪಿಎಂ ಮೋದಿಯವರು ಪಾಕಿಸ್ತಾನದ ಕರೋನಾವನ್ನು ಸಮರ್ಥವಾಗಿ ಎದುರಿಸಲು ಶುಭ ಹಾರೈಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.