ಬಾಂಗ್ಲಾದೇಶ ಭೇಟಿ ವೇಳೆ ಮೋದಿಗೆ ಗರಿಷ್ಟ ಭದ್ರತೆ ಒದಗಿಸಲಾಗುವುದು - ಎ.ಕೆ.ಅಬ್ದುಲ್ ಮೊಮೆನ್

ಪ್ರಧಾನಿ ಮೋದಿಯವರ ಭೇಟಿಗೆ ಬಾಂಗ್ಲಾದೇಶ ಸಿದ್ಧವಾಗಿದೆ, ವಿದೇಶಾಂಗ ಸಚಿವ ಮೊಮೆನ್ ಗರಿಷ್ಠ ಭದ್ರತೆ ನೀಡುವುದಾಗಿ ಭರವಸೆ ನೀಡಿದರು.

Written by - Ranjitha R K | Last Updated : Mar 22, 2021, 11:50 AM IST
  • ಪ್ರಧಾನಿ ಮೋದಿ ಈ ವಾರ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ
  • ಬಾಂಗ್ಲಾದೇಶ ಪ್ರಧಾನಿಯನ್ನು ಭೇಟಿ ಮಾಡಲಿರುವ ನರೇಂದ್ರ ಮೋದಿ
  • ಕೆಲವು ಒಪ್ಪಂದಗಳನ್ನು ಸಹಿ ಹಾಕುವ ಸಾಧ್ಯತೆ
ಬಾಂಗ್ಲಾದೇಶ ಭೇಟಿ ವೇಳೆ ಮೋದಿಗೆ ಗರಿಷ್ಟ ಭದ್ರತೆ ಒದಗಿಸಲಾಗುವುದು - ಎ.ಕೆ.ಅಬ್ದುಲ್ ಮೊಮೆನ್ title=
ಪ್ರಧಾನಿ ಮೋದಿ ಈ ವಾರ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ (file photo)

ಢಾಕಾ : ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾದೇಶ ಭೇಟಿಯ ಬಗ್ಗೆ  ಢಾಕಾ ಬಹಳ ಉತ್ಸುಕವಾಗಿದೆ. ಈ ವಾರದ ಕೊನೆಯಲ್ಲಿ ನಡೆಯಲಿರುವ ಭಾರತ ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ದೇಶ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ (AK Abdul Momen) ಹೇಳಿದ್ದಾರೆ.  ಅಲ್ಲದೆ ಪ್ರಧಾನಿ ಮೋದಿ ಅವರಿಗೆ ಗರಿಷ್ಠ ಭದ್ರತೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ವಿದೇಶಿ ಸೇವಾ ಅಕಾಡೆಮಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮೋಮನ್, "ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಜನರು ಬೇರೆ ಬೇರೆ ಅಭಿಪ್ರಾಯಗಳನ್ನು ಹೊಂದಿದ್ದಾರೆ.  ಆದರೆ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸುರಕ್ಷತೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

'ಪ್ರಧಾನಿ ನರೇಂದ್ರ ಮೋದಿ ಆಗಮನ ಬಾಂಗ್ಲಾದೇಶಕ್ಕೆ ಖುಷಿಯ ವಿಷಯ' :  
 ಭಾರತದ ಪ್ರಧಾನಿ ಢಾಕಾಗೆ ಬರುತ್ತಿರುವುದು ನಮಗೆ ಅತೀವ ಸಂತೋಷವನ್ನುಂಟು ಮಾಡಿದೆ ಎಂದು ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೋಮನ್ (AK Abdul Momen)  ಹೇಳಿದ್ದಾರೆ. ಮಾರ್ಚ್ 26 ರಂದು ನಡೆಯಲಿರುವ ಬಾಂಗ್ಲಾದೇಶದ (Bangaldesh) ಸ್ವಾತಂತ್ರ್ಯ ಸ್ವರ್ಣ ಮಹೋತ್ಸವ  ಮತ್ತು ಬಂಗ್ ಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಲಿದ್ದಾರೆ. ಇದೇ  ವೇಳೆ,  ಸತ್ಖಿರಾ ಮತ್ತು ಗೋಪಾಲ್‌ಗಂಜ್‌ನ  ಓರ್ಕಾಂಡಿಯಲ್ಲಿರುವ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದಲ್ಲದೆ ಬಂಗ್ ಬಂಧು ಶೇಖ್ ಮುಜಿಬುರ್ ರಹಮಾನ್ ಅವರ  ಸಮಾಧಿ ಸ್ಥಳಕ್ಕೂ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ : ಈ ದೇಶದಲ್ಲಿ 'Mr, Mrs, Miss' ಬದಲು ಬಳಕೆಯಾಗಲಿದೆ ಹೊಸ ಪದ

ಕರೋನಾ ಬಿಕ್ಕಟ್ಟಿನ ಮಧ್ಯೆ ಮೊದಲ ವಿದೇಶ ಯಾತ್ರೆ : 
ಕರೋನಾ (Coronavirus) ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ಮೋದಿಯವರ ಮೊದಲ ವಿದೇಶ ಪ್ರವಾಸ ಇದಾಗಿದೆ. ಈ ಭೇಟಿಯ ವೇಳೆ, ಪ್ರಧಾನಿ ಮೋದಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ  (Sheikh Hasina)  ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.  ವಿಪತ್ತು ನಿರ್ವಹಣೆ ಮತ್ತು ಸಹಕಾರ ಕ್ಷೇತ್ರಗಳಿಗೆ ಸಂಭಂದ ಪಟ್ಟಂತೆ ಉಭಯ ರಾಷ್ಟ್ರಗಳ ಮಧ್ಯೆ ಒಪ್ಪಂದಕ್ಕೆ (MoU) ಸಹಿ ಹಾಕುವ ಸಾಧ್ಯತೆಗಳಿವೆ ಎನ್ನಲಾಗಿದೆ.   

ಇದನ್ನೂ ಓದಿ : ಭಾರತದ ಜೊತೆ ಮಾನವ ಹಕ್ಕುಗಳ ವಿಚಾರವಾಗಿ ಚರ್ಚಿಸಿದ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News