ನವದೆಹಲಿ: ಮೋದಿ ಸರ್ಕಾರ ಮುಳುಗುತ್ತಿರುವ ಹಡಗು ಆರೆಸೆಸ್ಸ್ ಕೂಡ ಅವರನ್ನು ಕೈ ಬಿಟ್ಟಿದೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಸರಣಿ ಟ್ವೀಟ್ ಮೂಲಕ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿರುವ ಮಾಯಾವತಿ "ಮೋದಿ ಸರ್ಕಾರ ಮುಳುಗುತ್ತಿರುವ ಹಡಗು, ಇದಕ್ಕೆ ಸಾಕ್ಷಿ ಎನ್ನುವಂತೆ ಈಗ ಆರೆಸೇಸ್ಸ್ ಕೂಡ ಅವರನ್ನು ಕೈ ಬಿಟ್ಟಿದೆ "ಎಂದು ಹಿಂದಿ ಟ್ವೀಟ್ ನಲ್ಲಿ ವ್ಯಂಗ್ಯವಾಡಿದ್ದಾರೆ. ಚುನಾವಣಾ ಭರವಸೆಗಳನ್ನು ಈಡೇರಿಸದ ಹಿನ್ನಲೆಯಲ್ಲಿ ಈಗ ಜನರು ಆಕ್ರೋಶಕೊಂಡಿದ್ದಾರೆ.ಈ ಹಿನ್ನಲೆಯಲ್ಲಿ ಈಗ ಆರೆಸ್ಸಸ್ ಕಾರ್ಯಕರ್ತರು ಎಲ್ಲಿಯೂ ಕೂಡ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದರಿಂದ ಮೋದಿ ಕೂಡ ಹೈರಾಣಾಗಿದ್ದಾರೆ ಎಂದು ತಿಳಿಸಿದರು.


ಇತ್ತೀಚಿಗೆ ಮಾಯಾವತಿ ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿ ದಲಿತರ ಮೇಲೆ ಪ್ರೀತಿ ತೋರಿಸುವುದರ ಮೂಲಕ ಈಗ ಡ್ರಾಮೆಬಾಜಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ರಾಜಕಾರಣಿಗಳು ಚುನಾವಣಾ ಸಂದರ್ಭದಲ್ಲಿ ದೇವಸ್ತಾನಗಳಿಗೆ ಭೇಟಿ ನೀಡುವುದನ್ನು ಫಾಶನ್ ಎಂದ ಮಾಯಾವತಿ, ಚುನಾವಣಾ ಆಯೋಗವು ಈಗ ಮಾಧ್ಯಮಗಳಿಗೆ ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸಲು ಸೂಚಿಸಬೇಕೆಂದು ಆಗ್ರಹಿಸಿದರು.


ಭಾನುವಾರದಂದು ಪ್ರಧಾನಿ ಮೋದಿ ಬಿಎಸ್ಪಿ ನಾಯಕಿ ಮಾಯಾವತಿ ಮೇಲೆ ವಾಗ್ದಾಳಿ ನಡೆಸಿ ಅಲ್ವಾರ್ ಸಾಮೂಹಿಕ ಅತ್ಯಾಚಾರ ವಿಚಾರವಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಒಂದು ವೇಳೆ ಧೈರ್ಯವಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುವಂತೆ ಸವಾಲು ಹಾಕಿದ್ದರು.