ನವದೆಹಲಿ: ಆಂಧ್ರಕ್ಕೆ ನೀಡುವ ವಿಶೇಷ ಸ್ಥಾನಮಾನ ವಿಚಾರದಲ್ಲಿ ಪ್ರಧಾನಿ ಮೋದಿ ಮೃದು ಹೃದಯವನ್ನು ಹೊಂದಬೇಕಾಗಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಯೈ.ಎಸ್.ಜಗನ್ ಮೋಹನ್ ರೆಡ್ಡಿ  ಕೇಂದ್ರ ಗೃಹ ಸಚಿವ ಅಮಿತ್ ಷಾ ರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶುಕ್ರವಾರದಂದು  ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ರಾಜ್ಯದ 2.58 ಲಕ್ಷ ಕೋಟಿ ರೂ.ಸಾಲದ ಬಾರವನ್ನು ನಿಗಿಸಬೇಕೆಂದು ಜಗನ್ ಮೋಹನ್ ರೆಡ್ಡಿ ಕೇಳಿಕೊಂಡರು.


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಲಿರುವ ನೀತಿ ಆಯೋಗ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ಬೇಡಿಕೆ ಎತ್ತುವುದಾಗಿ ರೆಡ್ಡಿ ಹೇಳಿದ್ದಾರೆ. "ನಾನು ಗೃಹ ಸಚಿವರನ್ನು ಭೇಟಿಯಾಗಿ ಮತ್ತು ವಿಶೇಷ ವರ್ಗದ ಸ್ಥಾನಮಾನದ ಬಗ್ಗೆ ಪ್ರಧಾನ ಮಂತ್ರಿ ಮೃದು ಹೃದಯ ಹೊಂದಲು ಮನವಿ ಮಾಡಿ ಕೊಂಡಿರುವುದಾಗಿ " ರೆಡ್ಡಿ ಶಾ ಅವರೊಂದಿಗೆ ನಡೆದ ಒಂದು ಗಂಟೆ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.


ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಮುಖ್ಯಸ್ಥರು ಆಂಧ್ರಪ್ರದೇಶದ ಮರುಸಂಘಟನೆ ಕಾಯ್ದೆಯಡಿ ಮಾಡಿದ ಎಲ್ಲ ಬದ್ಧತೆಗಳನ್ನು ಪೂರೈಸಬೇಕೆಂದು ಕೇಂದ್ರವನ್ನು ಒತ್ತಾಯಿಸಿದರು. ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ, ವಿಶೇಷ ವರ್ಗದ ಸ್ಥಿತಿ ವಿಷಯದಲ್ಲಿ ಮೋದಿ ಮತ್ತು ಶಾ ಇಬ್ಬರನ್ನೂ ಭೇಟಿ ಮಾಡಿದ್ದರು. ತಮ್ಮ ಪಕ್ಷವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ವಿನಂತಿಕೊಳ್ಳಬಹುದೇ ಹೊರತು ಮತ್ತು ಬೇಡಿಕೆ ಅಥವಾ ಆಜ್ಞೆ ಮಾಡುವುದಿಲ್ಲ ಎಂದು ಹೇಳಿದ್ದರು.


"ಇಂದು, ನಾವು ಅದನ್ನು ಪಡೆಯದಿರಬಹುದು. ಯಾರೊಬ್ಬರ ಕರುಣೆಯಿಂದ ಇರಬೇಕು. ಆದರೆ ನಾನು ಮೋದಿ ಅವರಿಗೆ  ಮತ್ತೆ ಮತ್ತೆ ನೆನಪಿಸುತ್ತೇನೆ ಮತ್ತು ಮುಂದಿನ ದಿನಗಳಲ್ಲಿ ವಿಷಯಗಳು ಬದಲಾಗುತ್ತವೆ" ಎಂದು ಮೋದಿ ಅವರ ಮೊದಲ ಭೇಟಿಯ ನಂತರ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದರು. .


ಲೋಕಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ವೈಎಸ್‌ಆರ್‌ಸಿಪಿಗೆ ನೀಡಲಾಗಿದೆಯೇ ಎಂದು ಕೇಳಿದಾಗ, ರೆಡ್ಡಿ, "ದಯವಿಟ್ಟು ಈ ಎಲ್ಲ ವಿಷಯಗಳ ಬಗ್ಗೆ  ಪೂರ್ವಾಗ್ರಹಕ್ಕೆ ಒಳಗಾಗಬೇಡಿ. ಮೊದಲನೆಯದಾಗಿ, ಯಾವುದೇ ಪ್ರಸ್ತಾಪವಿಲ್ಲ ... ನಾವು ಕೇಳಿಲ್ಲ ಮತ್ತು ನಾವು ಮಾತನಾಡಲಿಲ್ಲ. ಮತ್ತು ಅಂತಹ ಯಾವುದೇ ಪ್ರಸ್ತಾಪವು ಬಂದಿಲ್ಲ." ಎಂದು ಹೇಳಿದರು. ವೈಎಸ್ಆರ್ಸಿಪಿ 17 ನೇ ಲೋಕಸಭಾ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆದ್ದಿದೆ.