Narendra Modi: `ಪಂಡಿತ್ ನೆಹರು ಆರಂಭಿಸಿದ ಕೆಲಸ ನನ್ನ ಅವಧಿಯಲ್ಲಿ ಪೂರ್ಣಗೊಂಡಿದೆ`
Urban Naxal: ಪರಿಸರ ಖಾತೆಗಳ ಸಚಿವರುಗಳ ಎರಡು ದಿನಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಂಡಿತ್ ನೆಹರು ಅವರು ಆರಂಭಿಸಿದ ಕೆಲಸ ನಾನು ಪ್ರಧಾನಿಯಾದ ಬಳಿಕ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ದೇಶದ ಎಷ್ಟು ಹಣ ವ್ಯರ್ಥವಾಗಿದೆ ಎಂಬುದನ್ನು ನೀವೇ ಯೋಚಿಸಿ ಎಂದಿದ್ದಾರೆ.
National Conference of Environment Ministers: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿ ನಡೆಯುತ್ತಿರುವ ಹಲವು ರಾಜ್ಯಗಳ ಪರಿಸರ ಖಾತೆ ಸಚಿವರ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ, ವಿವಿಧ ರಾಜ್ಯಗಳ ಪರಿಸರ ಸಚಿವರನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ನಮ್ಮ ಬದ್ಧತೆಗಳನ್ನು ಈಡೇರಿಸುವ ನಮ್ಮ ಟ್ರ್ಯಾಕ್ ರೆಕಾರ್ಡ್‌ನಿಂದಾಗಿ, ಜಗತ್ತು ಇಂದು ಭಾರತದೊಂದಿಗೆ ಸಂಪರ್ಕ ಸಾಧಿಸುತ್ತಿದೆ ಎಂದು ಹೇಳಿದ್ದಾರೆ.
ಪಂಡಿತ್ ನೆಹರೂ ನೇತೃತ್ವದಲ್ಲಿ ಕೆಲಸ ಆರಂಭಗೊಂಡರು ಕೂಡ ನಾನು ಬಂದ ನಂತರ ಪೂರ್ಣಗೊಳಿಸಿದೆ: ಪ್ರಧಾನಿ ಮೋದಿ
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಬೆಂಬಲದೊಂದಿಗೆ ಕೆಲ 'ಅರ್ಬನ್ ನಕ್ಸಲರು' ಮತ್ತು 'ಅಭಿವೃದ್ಧಿ ವಿರೋಧಿಗಳು' ಯೋಜನೆಯನ್ನು ಗುರಿಯಾಗಿಸಿದರು ಮತ್ತು ಪರಿಸರದ ಹೆಸರಿನಲ್ಲಿ ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣವನ್ನು ಹಲವು ವರ್ಷಗಳಿಂದ ತಡೆಹಿಡಿದರು ಎಂದು ಹೇಳಿದ್ದಾರೆ. ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಆರಂಭಿಸಿದ ಕಾಮಗಾರಿ ನನ್ನ ಆಗಮನದ ನಂತರ ಪೂರ್ಣಗೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ-ನಾಗರ ಹಾವಿನ ತಲೆ ಸೀಳಿ ‘ನಾಗಮಣಿ’ ಹೊರತೆಗೆದ ವ್ಯಕ್ತಿ! ನಂಬದಿದ್ದರೆ Video ನೋಡಿ
ಪಂಡಿತ್ ನೆಹರು ಈ ಅಣೆಕಟ್ಟಿನ ಶಂಕುಸ್ಥಾಪನೆ ಮಾಡಿದ್ದರು: ಪ್ರಧಾನಿ ಮೋದಿ
ಸರ್ದಾರ್ ಸರೋವರ ಅಣೆಕಟ್ಟನ್ನು ಅರ್ಬನ್ ನಕ್ಸಲರು ಮತ್ತು ಅಭಿವೃದ್ಧಿ ವಿರೋಧಿಗಳು ಹೇಗೆ ತಡೆದರು ಎಂಬುದಕ್ಕೆ ನೀವು ಕುಳಿತಿರುವ ಸ್ಥಳ, ಏಕತಾ ನಗರದ ಉದಾಹರಣೆಯಾಗಿದ್ದು, ಕಣ್ಣು ತೆರೆಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೀವು ಈ ಜಲಾಶಯವನ್ನು ನೋಡಿರಬೇಕು. ಸ್ವಾತಂತ್ರ್ಯ ಬಂದ ಕೂಡಲೇ ಇದರ ಅಡಿಗಲ್ಲು ಹಾಕಲಾಯಿತು. ಇದರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪಾತ್ರ ತುಂಬಾ ದೊಡ್ಡದಾಗಿದೆ ಮತ್ತು ಪಂಡಿತ್ ನೆಹರೂ ಅವರು ಇದಕ್ಕೆ ಅಡಿಗಲ್ಲು ಅಡಿಗಲ್ಲು ಹಾಕಿದ್ದಾರೆ. ಆದರೆ, ಎಲ್ಲಾ ಅರ್ಬನ್ ನಕ್ಸಲೀಯರು ಕ್ಷೇತ್ರದಲ್ಲಿ ಠಿಕಾಣಿ ಹೂಡಿದರು ಮತ್ತು ವಿಶ್ವದೆಲ್ಲೆಡೆಯಿಂದ ಜನ ಬಂದು ಸುಳ್ಳು ಪ್ರಚಾರ ಮಾಡಿ, ಇದೊಂದು ಪರಿಸರ ಕೆಲಸವಾಗಿದೆ ಎಂದು ಅಪಪ್ರಚಾರ ಅಭಿಯಾನ ನಡೆಸಿದರು ಕೈಗೊಂಡರು. ಪದೇ ಪದೇ ಕೆಲಸವನ್ನು ನಿಲ್ಲಿಸಲಾಯಿತು. ನೆಹರೂ ಜೀ ಅವರು ಆರಂಭಿಸಿದ ಕೆಲಸ, ನಾನು ಬಂದ ನಂತರ ಆ ಪೂರ್ಣಗೊಂಡಿದೆ. ದೇಶದ ಹಣ ಎಷ್ಟು ವ್ಯರ್ಥವಾಯಿತು ಎಂಬುದನ್ನು ನೀವೇ ಯೋಚಿಸಿ ಎಂದಿದ್ದಾರೆ.
ಸರ್ಕ್ಯೂಲರ್ ಎಕಾನಾಮಿಗೆ ಹೆಚ್ಚಿನ ಒತ್ತು ನೀಡಿ: ಪ್ರಧಾನಿ ಮೋದಿ
'ರಾಜ್ಯಗಳಲ್ಲಿ ಸಾಧ್ಯವಾದಷ್ಟು ಸರ್ಕ್ಯೂಲರ್ ಎಕಾನಾಮಿಗೆ ಉತ್ತೇಜನ ನೀಡಲು ನಾನು ದೇಶದ ಎಲ್ಲಾ ಪರಿಸರ ಮಂತ್ರಿಗಳನ್ನು ಒತ್ತಾಯಿಸುತ್ತೇನೆ. ಇದು ಘನತ್ಯಾಜ್ಯ ನಿರ್ವಹಣೆ ಮತ್ತು ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ಮುಕ್ತಿ ಎಂಬ ನಮ್ಮ ಅಭಿಯಾನಕ್ಕೆ ಬಲವನ್ನು ತುಂಬಲಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದಕ್ಕೂ ಮುಂದುವರೆದು ಮಾತನಾಡಿರುವ ಪ್ರಧಾನಿಗಳು, 'ಯಾವ ರಾಜ್ಯಗಳಲ್ಲಿ ನೀರು ಸಮೃದ್ಧವಾಗಿರುತ್ತಿತ್ತೋ, ಇಂದು ಅಲ್ಲಿ ನೀರಿನ ಅಭಾವ ಎದುರಾಗಿರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದನ್ನು ಜಲಕ್ಕೆ ಸಂಬಂಧಿ ಇಲಾಖೆ ಅಷ್ಟೇ ಅಲ್ಲ, ಪರಿಸರ ಇಲಾಖೆಯೂ ಕೂಡ ಒಂದು ದೊಡ್ಡ ಸವಾಲು ಎಂದೇ ಪರಿಗಣಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.