Death Certificate: “ನನ್ನ ಮರಣ ಪತ್ರ ಕಾಣೆಯಾಗಿದೆ” ಅಂತಾ ಸತ್ತವನೇ ಪತ್ರಿಕೆಯಲ್ಲಿ ಕೊಟ್ಟ ಜಾಹೀರಾತು: ಸಿಕ್ಕರೆ ತಲುಪಿಸೋದು ಹೇಗೆ?

ಭಾನುವಾರ ಟ್ವಿಟರ್‌ನಲ್ಲಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ರೂಪಿನ್ ಶರ್ಮಾ ಅವರು ಮುದ್ರಣ ಜಾಹೀರಾತಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ವಂತ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

Written by - Bhavishya Shetty | Last Updated : Sep 23, 2022, 03:12 PM IST
    • ಮರಣ ಪ್ರಮಾಣಪತ್ರದ ಬಗ್ಗೆ ವ್ಯಕ್ತಿಯೊಬ್ಬ ನೀಡಿದ ಜಾಹೀರಾತು ಫುಲ್ ವೈರಲ್
    • ವಿಚಿತ್ರ ಕಮೆಂಟ್ ಗಳ ಮೂಲಕ ಗಮನ ಸೆಳೆಯುತ್ತಿದೆ ಪೋಸ್ಟ್
    • ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಹಂಚಿಕೊಂಡ ಪೋಸ್ಟ್ ನೋಡಿ
Death Certificate: “ನನ್ನ ಮರಣ ಪತ್ರ ಕಾಣೆಯಾಗಿದೆ” ಅಂತಾ ಸತ್ತವನೇ ಪತ್ರಿಕೆಯಲ್ಲಿ ಕೊಟ್ಟ ಜಾಹೀರಾತು: ಸಿಕ್ಕರೆ ತಲುಪಿಸೋದು ಹೇಗೆ?  title=
lost death certificate

ಪ್ರಪಂಚದಾದ್ಯಂತದ ಅಂತ್ಯವಿಲ್ಲದ ವಿಲಕ್ಷಣ ವಿಷಯದಿಂದ ಇಂಟರ್ನೆಟ್ ತುಂಬಿ ತುಳುಕುತ್ತಿದೆ. ಇದರಲ್ಲಿ ಹರಿದಾಡುವ ಮಕ್ಕಳ ಚೇಷ್ಟೆ, ವಧು ವರರ ವೈರಲ್ ವಿಡಿಯೋಗಳು, ಅಡುಗೆ ಸಂಬಂಧಿತ ವಿಚಾರಗಳು, ಪ್ರಾಣಿಗಳ ವಿಡಿಯೋ ಸೇರಿದಂತೆ ಅನೇಕ ವಿಭಿನ್ನ ವಿಡಿಯೋಗಳು ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದೀಗ, ಕಳೆದುಹೋದ ಮರಣ ಪ್ರಮಾಣಪತ್ರದ ಬಗ್ಗೆ ವ್ಯಕ್ತಿಯೊಬ್ಬನ ಪತ್ರಿಕೆಯ ಜಾಹೀರಾತು ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ PFI ಪ್ರತಿಭಟನೆ : ಪೆಟ್ರೋಲ್‌ ಬಾಂಬ್‌ ದಾಳಿ, ಕಲ್ಲು ತೂರಾಟ..!

ಭಾನುವಾರ ಟ್ವಿಟರ್‌ನಲ್ಲಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ರೂಪಿನ್ ಶರ್ಮಾ ಅವರು ಮುದ್ರಣ ಜಾಹೀರಾತಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ವಂತ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇದು ಒಬ್ಬ ವ್ಯಕ್ತಿ ಸತ್ತಾಗ ಮಾತ್ರ ಮಾಡಲಾಗುವದ ದಾಖಲೆಯಾಗಿದೆ. "07/09/22 ರಂದು ಲುಮ್ಡಿಂಗ್ ಬಜಾರ್‌ನಲ್ಲಿ (ಅಸ್ಸಾಂನಲ್ಲಿ) ನನ್ನ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ" ಎಂದು ಜಾಹೀರಾತು ಇದೆ. ಅದರಲ್ಲಿ ನೋಂದಣಿ ಮತ್ತು ಕಳೆದುಹೋದ ಪ್ರಮಾಣಪತ್ರದ ಕ್ರಮಸಂಖ್ಯೆಯನ್ನೂ ನಮೂದಿಸಲಾಗಿದೆ. ಇದು ಹೇಗೆ ಸಾಧ್ಯ ಎಂಬುದು ಜನರ ಪ್ರಶ್ನೆ.

ವ್ಯಕ್ತಿಯ ಸಾವಿನ ಪ್ರಮಾಣಪತ್ರ ಕಳೆದುಹೋದ ಬಗ್ಗೆ ಮ್ಯಾನ್ಸ್ ಪತ್ರಿಕೆ ನೀಡಿದ ಜಾಹೀರಾತು ಇಂಟರ್ನೆಟ್ ನಲ್ಲಿ ಬಿರುಗಾಳಿಯಂತೆ ಹಾರಾಡುತ್ತಿದೆ. ಇನ್ನು ಇದಕ್ಕೆ ಕೆಲ ಇಂಟರ್ನೆಟ್ ಬಳಕೆದಾರರು ತಮಾಷೆಯಾಗಿ ಪ್ರಶ್ನಿಸಿದ್ದು, “ಆ ವಸ್ತು ಸಿಕ್ಕರೆ ಎಲ್ಲಿಗೆ ತಲುಪಿಸಬೇಕು?” ಎಂದು ಕೇಳಿದ್ದಾರೆ.

"ಪ್ರಮಾಣಪತ್ರವನ್ನು ಸ್ವರ್ಗ ಅಥವಾ ನರಕಕ್ಕೆ ನೀಡಬೇಕೆ? ಅಂತ ಒಬ್ಬ ಬಳಕೆದಾರ ಕೇಳಿದ್ದರೆ, ಇನ್ನೊಬ್ಬ "ಇದು 'ಜಾಹೀರಾತು-ಭೂತ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇನ್ನೋರ್ವ "ಯಾರಾದರೂ ಅವರ ಸ್ವಂತ ಮರಣ ಪ್ರಮಾಣಪತ್ರ ಕಂಡುಹಿಡಿದರೆ, ಅದನ್ನು ಶೀಘ್ರವೇ ಅವರಿಗೆ ತಲುಪಿಸಿ. ಇಲ್ಲವಾದರೆ ದೆವ್ವವು ಕೋಪಗೊಳ್ಳುತ್ತದೆ" ಎಂದು ಗೇಲಿ ಮಾಡಿದ್ದಾನೆ.

ಇದನ್ನೂ ಓದಿ: Narendra Modi : 'ಅರ್ಬನ್ ನಕ್ಸಲರ' ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ!

ಈ ಮಧ್ಯೆ ಇಂಟರ್ನೆಟ್‌ನಲ್ಲಿನ ಮತ್ತೊಂದು ವಿಡಿಯೋ ಸಹ ಹರಿದಾಡಿದ್ದು, ಇದರಲ್ಲಿ ಮದುವೆ ಆಮಂತ್ರಣದ ಸಂಪೂರ್ಣ ವಿಚಾರ ಮಾತ್ರೆಗಳ ಪ್ಯಾಕೆಟ್ (ಟ್ಯಾಬ್ಲೆಟ್ ಪ್ಯಾಕ್) ಹಿಂಭಾಗದಲ್ಲಿ ಮುದ್ರಣಗೊಂಡಿತ್ತು. ಮಾತ್ರಗಳ ಸಾಮಾನ್ಯ ಎಚ್ಚರಿಕೆ ಬದಲಿಗೆ ಮದುವೆಯ ಸಮಯ, ದಿನಾಂಕ ಮತ್ತು ವಧು-ವರರ ಹೆಸರುಗಳ ವಿವರಗಳನ್ನು ಒಳಗೊಂಡಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News