PM Cares for Children Scheme: COVID-19 ನಿಂದಾಗಿ ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ವಿಮೆ
COVID-19 ಪೀಡಿತ ಮಕ್ಕಳಿಗೆ ಸಹಾಯವನ್ನು ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಘೋಷಿಸಿದ್ದಾರೆ. ` COVID-19 ನಿಂದಾಗಿ ಅನೇಕ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಆ ಮಕ್ಕಳನ್ನು ನೋಡಿಕೊಳ್ಳುತ್ತದೆ. ಅವರಿಗೂ ಗೌರವಯುತ ಜೀವನಾವಕಾಶವನ್ನು ಸರ್ಕಾರ ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.
ನವದೆಹಲಿ : ಕೋವಿಡ್ -19 ನಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ವಿಮೆ ಮತ್ತು ಇತರ ಸೌಲಭ್ಯಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಘೋಷಿಸಿದ್ದಾರೆ. ಪಿಎಂ ಕೇರ್ಸ್ ಫಂಡ್ (PM Cares Fund) ಮೂಲಕ ಮಕ್ಕಳು ಈ ಲಾಭ ಪಡೆಯಲಿದ್ದಾರೆ. ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುತ್ತಾರೆ. ಮಕ್ಕಳ ಬೆಂಬಲ ಮತ್ತು ರಕ್ಷಣೆಗಾಗಿ ಏನು ಮಾಡಬೇಕೋ ಎಲ್ಲವನ್ನೂ ಸರ್ಕಾರ ಮಾಡಲಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
COVID-19 ಪೀಡಿತ ಮಕ್ಕಳಿಗೆ ಸಹಾಯವನ್ನು ಪ್ರಧಾನಿ ಮೋದಿ (PM Modi) ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಘೋಷಿಸಿದ್ದಾರೆ. " COVID-19 ನಿಂದಾಗಿ ಅನೇಕ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಆ ಮಕ್ಕಳನ್ನು ನೋಡಿಕೊಳ್ಳುತ್ತದೆ. ಅವರಿಗೂ ಗೌರವಯುತ ಜೀವನಾವಕಾಶವನ್ನು ಸರ್ಕಾರ ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ. ಪಿಎಂ ಕೇರ್ಸ್ (PM Cares) ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳನ್ನು ಪೂರೈಸಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹರಿಯಾಣದಲ್ಲಿ ಜೂನ್ 7ರವರೆಗೆ ಲಾಕ್ ಡೌನ್ ವಿಸ್ತರಣೆ; odd -even ಮಾದರಿಯಲ್ಲಿ ಅಂಗಡಿ ತೆರೆಯಲು ಅವಕಾಶ
PM Cares for Children ಯೋಜನೆಯ ಮೂಲಕ ಸಿಗಲಿರುವ ಪ್ರಯೋಜನ :
-10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹತ್ತಿರದ ಕೇಂದ್ರೀಯ ವಿದ್ಯಾಲಯ (Kendriya Vidhyalaya) ಅಥವಾ ಖಾಸಗಿ ಪ್ರವೇಶ .
-ಪಿಎಂ ಕೇರ್ ಮಕ್ಕಳ ಉಡುಗೆ, ಪಠ್ಯಪುಸ್ತಕಗಳು ಮತ್ತು ನೋಟ್‌ಬುಕ್‌ಗಳ ವೆಚ್ಚವನ್ನು ಭರಿಸಲಿದೆ.
-11 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಸೈನಿಕ ಶಾಲೆ, ನವೋದಯ ವಿದ್ಯಾಲಯ (Navodya School) ಮುಂತಾದ ಯಾವುದೇ ಕೇಂದ್ರ ಸರ್ಕಾರಿ ವಸತಿ ಶಾಲೆಯಲ್ಲಿ ಪ್ರವೇಶ ನೀಡಲಾಗುವುದು.
-18 ನೇ ವಯಸ್ಸಿನಲ್ಲಿ ಮಗುವಿಗೆ ಮಾಸಿಕ ವಿದ್ಯಾರ್ಥಿವೇತನ ಮತ್ತು 23 ನೇ ವಯಸ್ಸಿನಲ್ಲಿ 10 ಲಕ್ಷ ರೂಪಾಯಿಗಳ ಫಂಡ್ ಸಿಗಲಿದೆ.
- ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲ (loan) ಪಡೆಯಲು ಸಹಾಯ ಮಾಡಲಾಗುವುದು ಮತ್ತು ಪಿಎಂ ಕೇರ್ ಸಾಲದ ಮೇಲಿನ ಬಡ್ಡಿಯನ್ನು ಪಾವತಿಸಲಿದೆ
- ಆಯುಷ್ಮಾನ್ ಭಾರತ್ (Aayushman Bharath) ಅಡಿಯಲ್ಲಿ, 18 ವರ್ಷ ವಯಸ್ಸಿನ ಮಕ್ಕಳಿಗೆ 5 ಲಕ್ಷ ರೂ.ಗಳ ಉಚಿತ ಆರೋಗ್ಯ ವಿಮೆ ನೀಡಲಾಗುವುದು ಮತ್ತು ಪ್ರೀಮಿಯಂ ಅನ್ನು ಪಿಎಂ ಕೇರ್ಸ್ ಪಾವತಿಸುತ್ತದೆ.
ಇದನ್ನೂ ಓದಿ : ಜೂನ್ 25ರೊಳಗೆ ಈ ಕೆಲಸ ಮಾಡಿದರೆ 5 ಲಕ್ಷ ರೂ. ಗೆಲ್ಲುವ ಅವಕಾಶ ; ಕೇಂದ್ರ ಸರ್ಕಾರದಿಂದ ಹೀಗೊಂದು ಚಾಲೆಂಜ್
COVID-19 ಕಾರಣದಿಂದಾಗಿ ಪೋಷಕರು ಅಥವಾ ಕಾನೂನು ಪಾಲಕರನ್ನು ಕಳೆದುಕೊಂಡಿರುವ ಎಲ್ಲಾ ಮಕ್ಕಳಿಗೆ 'ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಸ್ಕೀಮ್'( (PM Cares for Children Scheme) ಅಡಿಯಲ್ಲಿ ಸಹಾಯ ಮಾಡಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.