ನವದೆಹಲಿ : ಹರಿಯಾಣದಲ್ಲಿ ಜೂನ್ 7 ರವರೆಗೆ ಲಾಕ್ ಡೌನ್ (Lockdown) ವಿಸ್ತರಿಸಲಾಗಿದೆ. ಆದರೆ, ಈಬಾರಿ ಲಾಕ್ ಡೌನ್ ನಲ್ಲಿ ಸ್ವಲ್ಪ ಮಟ್ಟಿನ ಸಡಿಲಿಕೆ ನೀಡಲಾಗಿದೆ. ಈಗ ಹರಿಯಾಣದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಅಂಗಡಿ ಮಾಲೀಕರು ಬೆಸ - ಸಮ (Odd- Even) ಸೂತ್ರದ ಪ್ರಕಾರ ಮಳಿಗೆಗಳನ್ನು ತೆರೆಯಬಹುದು.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಮಾತನಾಡಿ, 'COVID ಲಾಕ್‌ಡೌನ್ (Lockdown) ಅನ್ನು ಜೂನ್ 7 ರವರೆಗೆ ವಿಸ್ತರಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಬೆಸ-ಸಮ (Odd- even) ಸೂತ್ರವನ್ನು ಅನುಸರಿಸಿಕೊಂಡು ಅಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ತೆರೆಯಲಿವೆ ಎಂದಿದ್ದಾರೆ. ಅಲ್ಲದೆ, ಜೂನ್ 15 ರವರೆಗೆ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಚ್ಚಿರುತ್ತವೆ. ಇನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ (Night Curfew) ಮುಂದುವರಿಯಲಿದೆ.
We have decided to extend COVID lockdown till June 7. Shops can now operate from 9 am to 3 pm. Shopkeepers must follow odd-even formula. Educational institutions will remain closed till June 15. Night curfew will continue from 10 pm to 5 am: Haryana CM Manohar Lal Khattar pic.twitter.com/wX3hQzEVF2
— ANI (@ANI) May 30, 2021
ಇದನ್ನೂ ಓದಿ : ಮೋದಿ ನೇತೃತ್ವದ NDA 2.O ಸರ್ಕಾರಕ್ಕೆ ಇಂದಿಗೆ 2 ವರ್ಷ : ಸಂಭ್ರಮಾಚರಣೆ ಹೇಗಿದೆ?
ರಾಜ್ಯದಲ್ಲಿ ಸುಮಾರು 750 ಕಪ್ಪು ಶಿಲೀಂಧ್ರ (black fungus) ಪ್ರಕರಣಗಳು ವರದಿಯಾಗಿವೆ. ಈ ಪೈಕಿ, 58 ಮಂದಿ ಗುಣಮುಖರಾಗಿದ್ದು, 50 ಮಂದಿ ಮೃತಪಟ್ಟಿದ್ದಾರೆ. 650 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ 1,868 ಕರೋನಾ ವೈರಸ್ (Coronavirus) ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 7,53,937 ಕ್ಕೆ ಏರಿದೆ.
ಇದನ್ನೂ ಓದಿ : ಪಿಎನ್ ಬಿ ಹಗರಣದ ಆರೋಪಿ Mehul Choksi ಫೋಟೋ ಬಹಿರಂಗ, ಕೈಗಳಲ್ಲಿ ಗಾಯದ ಗುರುತು ಪತ್ತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.