ನವದೆಹಲಿ: ಕರೋನವೈರಸ್ ಬಿಕ್ಕಟ್ಟನ್ನು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ.ಮೌಲ್ಯದ ಆತ್ಮನಿರ್ಭರ ಆರ್ಥಿಕ ಪ್ಯಾಕೇಜ್ ನ್ನು ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

'ಈ ಪ್ಯಾಕೇಜ್  ವಲಸಿಗರಿಗೆ ಮತ್ತು ಹಗಲು ರಾತ್ರಿ ಕೆಲಸ ಮಾಡುವ ರೈತರಿಗೆ ನೆರವಾಗಲಿದೆ, ಮತ್ತು  ಇದು ಸ್ವಾವಲಂಬಿ ಭಾರತ ಮುಖ್ಯ ಅಂಶವಾಗಿದೆ ಎಂದು ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಹೇಳಿದರು. ಈ ವಿಶೇಷ ಪ್ಯಾಕೇಜ್ ಪ್ರಮುಖವಾಗಿ ಭೂಮಿ, ಕಾರ್ಮಿಕ, ದ್ರವ್ಯತೆ ಮತ್ತು ಕಾನೂನಿನ ಮೇಲೆ ಕೇಂದ್ರೀಕರಿಸುತ್ತದೆ; ಇದು ಸಣ್ಣ ವ್ಯಾಪಾರಸ್ಥರು, ಕಾರ್ಮಿಕರು, ರೈತರಿಗೆ ಸಹಾಯ ಮಾಡುತ್ತದೆ" ಎಂದು ಪ್ರಧಾನಿ ಹೇಳಿದರು.



ಇದೇ ವೇಳೆ ಕರೋನವೈರಸ್ ಸಾಂಕ್ರಾಮಿಕದ ಬಗ್ಗೆ ಮಾತನಾಡಿದ ಪಿಎಂ ಮೋದಿ, " ಈ ವೈರಸ್ ಜಗತ್ತನ್ನು ಸರ್ವ ನಾಶ ಮಾಡಿದೆ, ಈ ರೀತಿಯ ಬಿಕ್ಕಟ್ಟನ್ನು ನಾವು ಈ ಹಿಂದೆ ನೋಡಿಲ್ಲ ಅಥವಾ ಕೇಳಿಲ್ಲ ಎಂದರು. ಭಾರತವು ಈ ಬಿಕ್ಕಟ್ಟಿನ ಮೇಲೆ ವಿಜಯ ಸಾಧಿಸುವ ಏಕೈಕ ಮಾರ್ಗವೆಂದರೆ "ನಮ್ಮ ಸಂಕಲ್ಪವನ್ನು ಬಲಪಡಿಸುವುದು, ಇದರಿಂದಾಗಿ ನಮ್ಮ ಸಂಕಲ್ಪವು ಈ ಬಿಕ್ಕಟ್ಟುಗಿಂತಲೂ ದೊಡ್ಡದಾಗಿದೆ' ಎಂದರು.


21 ನೇ ಶತಮಾನದಲ್ಲಿ ಭಾರತ ತನ್ನ ಸ್ವಾವಲಂಬನೆಗೆ ಒತ್ತು ನೀಡುವ ಮೂಲಕ ಪ್ರಮುಖ ದೇಶವಾಗಿ ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.


ಇದೇ ವೇಳೆ ಸ್ವಾವಲಂಬನೆಯ ಐದು ಸ್ತಂಭಗಳನ್ನು ಹೆಸರಿಸಿದ ಪ್ರಧಾನಿ ಮೋದಿ' ಆರ್ಥಿಕತೆಯಲ್ಲಿನ ಹೆಚ್ಚಳ( ಕ್ವಾಂಟಮ್ ಜಂಪ್) ಮೂಲಸೌಕರ್ಯ, ತಂತ್ರಜ್ಞಾನ-ಚಾಲಿತ ವ್ಯವಸ್ಥೆ, ಜನಸಂಖ್ಯಾಶಾಸ್ತ್ರ ಮತ್ತು  ಬೌದ್ದಿಕ ಪೂರೈಕೆ ವ್ಯವಸ್ಥೆ' ಇವುಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದರು.