PM Modi Speech : ಉತ್ತರ ಪ್ರದೇಶದ ಅಭಿವೃದ್ಧಿ ಮತ್ತು ರಾಜ್ಯದ ಯುವಕರ ಸಾಮರ್ಥ್ಯಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದರು. 


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಹೂಡಿಕೆದಾರರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರಪ್ರದೇಶದ ಯುವಕರು ನಿಮ್ಮ ಕನಸುಗಳಿಗೆ ರೆಕ್ಕೆಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಯುಪಿಯಲ್ಲಿ 80 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಗೆ ಸಂಬಂಧಿಸಿದ ಒಪ್ಪಂದಗಳಿಗೆ ಇಲ್ಲಿ ಸಹಿ ಹಾಕಲಾಗಿದೆ. ಈ ಒಪ್ಪಂದಗಳು ಯುಪಿಯಲ್ಲಿ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದರು.


ಇದನ್ನೂ ಓದಿ : Priyanka Gandhi : ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಕೋವಿಡ್‌ ಪಾಸಿಟಿವ್‌!


'ನನ್ನ ಕಾಶಿ ತುಂಬಾ ಬದಲಾಗಿದೆ'


ಇನ್ನು ಮುಂದುವರೆದು ಮಾತನಾಡಿದ ಪಿಎಂ ಮೋದಿ, ನಾನು ಕಾಶಿಯ ಸಂಸದ, ಅದಕ್ಕಾಗಿಯೇ ನನ್ನ ಕಾಶಿಯನ್ನು ನೋಡಲು ಸ್ವಲ್ಪ ಸಮಯ ಮೀಸಲಿಡಲು ಬಯಸುತ್ತೇನೆ. ಕಾಶಿ ಸಾಕಷ್ಟು ಬದಲಾಗಿದೆ. ಪುರಾತನ ಶಕ್ತಿಯೊಂದಿಗೆ ಜಗತ್ತಿನ ಇಂತಹ ನಗರವನ್ನು ಹೊಸ ನೋಟದಲ್ಲಿ ಅಲಂಕರಿಸಿದೆ. ಇದು ಉತ್ತರ ಪ್ರದೇಶದ ಶಕ್ತಿಗೆ ಜೀವಂತ ಉದಾಹರಣೆಯಾಗಿದೆ ಎಂದು ಹೇಳಿದರು.


ಉತ್ತರ ಪ್ರದೇಶದ ಯುವ ಶಕ್ತಿಯು ನಿಮ್ಮ ಕನಸುಗಳು ಮತ್ತು ಸಂಕಲ್ಪಗಳಿಗೆ ಹೊಸ ರೆಕ್ಕೆ ನೀಡಲಿದ್ದೇವೆ, ಇಂದು ಜಗತ್ತು ಹುಡುಕುತ್ತಿರುವ ವಿಶ್ವಾಸಾರ್ಹ ಪಾಲುದಾರನಿಗೆ ತಕ್ಕಂತೆ ಬದುಕುವ ಸಾಮರ್ಥ್ಯ ನಮ್ಮ ಪ್ರಜಾಪ್ರಭುತ್ವ ಭಾರತಕ್ಕೆ ಮಾತ್ರ ಇದೆ. ವಿಶ್ವವೂ ಇಂದು ಭಾರತದ ಸಾಮರ್ಥ್ಯವನ್ನು ನೋಡುತ್ತಿದ್ದು, ಭಾರತದ ಸಾಧನೆಯನ್ನು ಶ್ಲಾಘಿಸುತ್ತಿದೆ ಎಂದು ಹೇಳಿದರು.


ಇದನ್ನೂ ಓದಿ : ಚಂಪಾವತ್ ಉಪಚುನಾವಣೆ : ಸಿಎಂ ಧಾಮಿಗೆ ಗೆಲುವು, ಠೇವಣಿ ಕಳೆದುಕೊಂಡ 'ಕಾಂಗ್ರೆಸ್'


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ