ಚಂಪಾವತ್ ಉಪಚುನಾವಣೆ : ಸಿಎಂ ಧಾಮಿಗೆ ಗೆಲುವು, ಠೇವಣಿ ಕಳೆದುಕೊಂಡ 'ಕಾಂಗ್ರೆಸ್'

ಕಾಂಗ್ರೆಸ್ ಪಕ್ಷ ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದೆ.

Written by - Channabasava A Kashinakunti | Last Updated : Jun 3, 2022, 12:16 PM IST
  • ಚಂಪಾವತ್ ವಿಧಾನಸಭಾ ಉಪಚುನಾವಣೆ
  • ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಗೆಲುವು
  • ಕಾಂಗ್ರೆಸ್ ಪಕ್ಷ ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದೆ.
ಚಂಪಾವತ್ ಉಪಚುನಾವಣೆ : ಸಿಎಂ ಧಾಮಿಗೆ ಗೆಲುವು, ಠೇವಣಿ ಕಳೆದುಕೊಂಡ 'ಕಾಂಗ್ರೆಸ್' title=

ಡೆಹ್ರಾಡೂನ್ : ಚಂಪಾವತ್ ವಿಧಾನಸಭಾ ಉಪಚುನಾವಣೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷ ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದೆ.

ಪುಷ್ಕರ್ ಸಿಂಗ್ ಧಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಗಹ್ತೋಡಿ ಅವರನ್ನು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.

ಇದನ್ನೂ ಓದಿ : Restaurant Service Charges : ಕೇಂದ್ರದಿಂದ ಮಹತ್ವದ ನಿರ್ಧಾರ : ಅಗ್ಗವಾಗಲಿದೆ ಹೋಟೆಲ್ ತಿಂಡಿ, ಊಟ! 

ಧಾಮಿ 54,000 ಮತಗಳನ್ನು ಪಡೆದರೆ, ಗಹತೋಡಿ ಕೇವಲ 3,607 ಮತಗಳನ್ನು ಪಡೆದಿದ್ದಾರೆ. 2017ರಲ್ಲಿ ಕೈಲಾಶ್ ಗೆಹ್ತೋಡಿ 17,360 ಮತಗಳಿಂದ ಗೆದ್ದಿದ್ದರು.

ಇತ್ತೀಚೆಗಷ್ಟೇ ನಡೆದ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಧಾಮಿ ಅವರು ಬಿಜೆಪಿಯಿಂದ ಭರ್ಜರಿ ಜಯ ಗೆಲವು ಸಾಧಿಸಿದ್ದರು, ಆದರೆ ಅವರು ಚುನಾವಣೆಯಲ್ಲಿ ಸೋತಿದ್ದರು. ಆದರೂ ಪಕ್ಷದ ಹೈಕಮಾಂಡ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ.

ಚಂಪಾವತ್ ನಿವಾಸಿಗಳಿಗೆ ಧನ್ಯವಾದ ತಿಳಿಸಿದ ಧಾಮಿ 

"ಪ್ರಿಯ ಚಂಪಾವತ್ ನಿವಾಸಿಗಳೇ, ನಾನು ಮೂಕವಿಸ್ಮಿತನಾಗಿದ್ದೇನೆ. ನಿಮ್ಮ ಮತಗಳ ಮೂಲಕ ನೀವು ನನಗೆ ನೀಡಿದ ಪ್ರೀತಿ ಮತ್ತು ಆಶೀರ್ವಾದದಿಂದ ನನ್ನ ಭಾವುಕವಾಗಿಸಿದೆ " ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ, ಪುಷ್ಕರ್ ಸಿಂಗ್ ಧಾಮಿ ಶೇ.92.94 ರಷ್ಟು ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಪಡೆದ ಮತ ಶೇ.5.16 ಮಾತ್ರ.
ಇದನ್ನೂ ಓದಿ : 'ಗಾಂಧಿ ಕುಟುಂಬ ಅತ್ಯಂತ ಭ್ರಷ್ಟ ಕುಟುಂಬ', ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News